ಮಂಗಳೂರು ಅಲೋಷಿಯಸ್ ಕಾಲೇಜಿನಲ್ಲಿ ಹುಸಿ ಬಾಂಬ್
ಮಂಗಳೂರು :ನಗರದ ಸಂತ ಅಲೋಷಿಯಸ್ ಕಾಲೇಜನ್ನು ಬಾಂಬ್ ಮೂಲಕ ಸ್ಫೋಟಿಸಲಾಗುವುದು ಎನ್ನುವ ಬೆದ-ರಿ-ಕೆ-ಯ ಹಿನ್ನೆಲೆಯಲ್ಲಿ ಪೊಲೀಸರು ಕಾಲೇಜು ಪರಿಸರದಲ್ಲಿ ವ್ಯಾಪಕ ಶೋಧ ನಡೆಸಿದ ನಂತರ ಇದು ಹುಸಿ ಬಾಂಬ್ ಬೆದರಿಕೆ ಎಂದು ಖಚಿತ ಪಡಿಸಿದರು.
ಬುಧವಾರ ಪಶ್ಚಿಮ ವಲಯ ಐಜಿ ಕಚೇರಿಗೆ ಬಂದ ಪೋಸ್ಟ್ ಕಾರ್ಡೊಂದರಲ್ಲಿ ಅಲೋಷಿಯಸ್ ಕಾಲೇಜನ್ನು ಸೆಪ್ಟೆಂಬರ್ 21ರಂದು ಬೆಳಿಗ್ಗೆ 11.15 ನಿಮಿಷಕ್ಕೆ ಬಾಂಬ್ ಮೂಲಕ ಸ್ಫೋಟಿಸಲಾಗುವುದು ಎಂದು ಬೆದರಿಸಲಾಗಿತ್ತು. ಆ ಪ್ರಕಾರ ಪೊಲೀಸರು ಬುಧವಾರ ರಾತ್ರಿಯೇ ಕಾಲೇಜಿನಲ್ಲಿ ಬಾಂಬ್‌ಗಾಗಿ ವ್ಯಾಪಕ ಶೋಧ ನಡೆಸಿದರು, ಗುರು-ವಾ-ರ ಬೆಳಿ-ಗ್ಗೆ-ಯೂ ಶೋಧ ಮುಂದು-ವ-ರೆ--ದ ನಂತ-ರ ಬೆದ-ರಿ-ಕೆ ಹುಸಿ ಎನ್ನು-ವು-ದು ಖಚಿ-ತ-ವಾ-ಯಿ-ತು. ನಗರದಲ್ಲಿ ಹರಡಿದ್ದ ಬಾಂಬ್ ಬೆದರಿಕೆ ಸುದ್ದಿಯಿಂದಾಗಿ ಗುರುವಾರದಂದು ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲಿಲ್ಲ.
(ಮಂಗಳೂರು ಪ್ರತಿನಿಧಿಯಿಂದ)












Click it and Unblock the Notifications