ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕ-ಳು ವಿದೇ-ಶ-ದ-ಲ್ಲಿ ಅಪ್ಪ ಅಮ್ಮ ಗೋಪಿ ಮನೆ-ಯ-ಲ್ಲಿ

By Staff
|
Google Oneindia Kannada News

ನವದೆಹಲಿ : ಗೃಹ ಬಳಕೆಯ ವಸ್ತುಗಳ ಪೂರೈಕೆಗೇ ಹೆಸರು ಮಾಡಿದ್ದ ಗೋಪಿ ಗ್ರೂಪ್ಸ್‌ ಈಗ ಹೊಸಿಲು ದಾಟಿ

ಸಾಮಾಜಿಕ ಯೋಜನೆಗಳನ್ನೂ ಕೈಗೆತ್ತಿಕೊಳ್ಳುವ ನಿರ್ಧಾರಕ್ಕೆ ಬಂದಿದೆ. ಉದಾಹರಿಸುವುದಿದ್ದರೆ, ಮಕ್ಕಳನ್ನೆಲ್ಲಾ ವಿದೇಶಕ್ಕೆ ಕಳಿಸಿ , ಭಾರತದಲ್ಲೇ ಉಳಿದಿರುವ ವೃದ್ಧರಿಗೊಂದು ಮನೆ... ಒಂದು ಮೆಡಿಕಲ್‌ ಕಾಲೇಜು...

ಈ ಏಜೆನ್ಸಿಯು ದೆಹಲಿ ಸಮೀಪ ಒಂದು ಫ್ಲ್ಯಾಟ್‌ ನಿರ್ಮಿಸುವ ಕೆಲಸ ಆರಂಭಿಸಿದೆ. ಅನಿವಾಸೀ ಭಾರತೀಯರದೊಂದು ಸಮಸ್ಯೆ. ತಮ್ಮ ಸಂಬಂಧಿಕರನ್ನು ತಮ್ಮೊಂದಿಗೆ ಕರೆದುಕೊಂಡು ಬರುವಂತಿಲ್ಲ... ಭಾರತದಲ್ಲಿ ಅವರನ್ನು ನೋಡಿಕೊಳ್ಳುವವರಿಲ್ಲ. ಈ ಸಮಸ್ಯೆಯನ್ನು ಕ್ಯಾಷ್‌ ಮಾಡಿಕೊಂಡ ಗೋಪಿ ಗ್ರೂಪ್ಸ್‌ , ವೃದ್ಧರಿಗೆಂದೇ ಮನೆಗಳನ್ನು ಕಟ್ಟಿಕೊಡಲಾರಂಭಿಸಿದೆ. ವಸತಿ ಶಾಲೆ, ಮೆಡಿಕಲ್‌ ಮತ್ತು ಡೆಂಟಲ್‌ ಕಾಲೇಜು ನಿರ್ಮಾಣ ಯೋಜನೆಯೂ ಪಟ್ಟಿಯಲ್ಲಿದೆ.

ಬಟ್ಟೆ ಇಸ್ತ್ರಿಯಿಂದ ಹಿಡಿದು..... ಈಗ ಹರ್ಯಾಣದ ಸೂರಜ್‌ ಕುಂಡದಲ್ಲಿ ನಿರ್ಮಿಸಲು ಉದ್ದೇಶಿಸಲಿರುವ ವೃದ್ಧರ ವಸತಿ ಯೋಜನೆಯ ವೆಚ್ಚ 45 ಕೋಟಿ ರೂಪಾಯಿ. ಕೇಂದ್ರ ಸರಕಾರ ಸೈ ಎಂದ ತಕ್ಷಣ ಕೆಲಸ ಆರಂಭವಾಗಲಿದೆ. ಹದಿನೇಳುವರೆ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುವ ಈ ಫ್ಲಾಟನ್ನು ಅನಿವಾಸೀ ಭಾರತೀಯರ ವೃದ್ಧ ಸಂಬಂಧಿಕರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಲಾಗುವುದು ಎಂದು ಗೋಪಿ ಗ್ರೂಪ್ಸ್‌ ಆಫ್‌ ಕಂಪೆನೀಸ್‌ನ ನಿರ್ದೇಶಕ ರಾಮ್‌ ಗುಪ್ತಾ ಹೇಳುತ್ತಾರೆ. ಗೋಪಿ ಗ್ರೂಪ್ಸ್‌ನ ಅಧ್ಯಕ್ಷ ರಾಜೇಂದ್ರನಾಥ್‌ , ಈ ‘ ಸುರಕ್ಷಿತ ಮನೆ’ ಯೋಜನೆಯ ಬಗ್ಗೆ ಹೇಳುತ್ತಾ, ಉತ್ತಮ ಆದಾಯವಿರುವವರಿಗೆ ಆಹಾರ, ಬಟ್ಟೆ ಇಸ್ತ್ರಿಯಿಂದ ಹಿಡಿದು ಮನೋರಂಜನೆಯವರೆಗೆ ಬೇಕಾಗುವ ಎಲ್ಲಾ ಅಗತ್ಯಗಳನ್ನು ಈ ಟೌನ್‌ಶಿಪ್‌ನಲ್ಲಿಯೇ ಪೂರೈಸುವುದು ನಮ್ಮ ಉದ್ದೇಶ ಎನ್ನುತ್ತಾರೆ.

ಇತ್ತೀಚೆಗೆ ದೆಹಲಿ, ಮುಂಬಯಿ ನಗರಗಳಲ್ಲಿ , ವೃದ್ಧ ಶ್ರೀಮಂತರ ಮನೆಗಳ ಮೇಲೆ ದರೋಡೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆ ಮಹ-ತ್ವ-ವ-ನ್ನು ಪಡೆ-ದಿ-ದೆ. ಗೋಪಿ ಗ್ರೂಪ್‌ನ ಕೈಕೆಳಗೆ ಗೃಹಬಳಕೆ ವಸ್ತುಗಳ ಒಟ್ಟು ಎಂಟು ಕಂಪೆನಿಗಳು ಲಾಸ್‌ ಇಲ್ಲದೆ ನಡೆಯುತ್ತಿವೆ. ಶೇ 30ರಷ್ಟು ಮಾರ್ಕೆಟ್‌ ಶೇರ್‌ ಕೂಡ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X