ಗೋಪಾಲ್ ಬೆಂಗಳೂರಿಗೆ ಬಂದದ್ದೇಕೆ? ಕರೆಸಿಕೊಂಡರೇ ಕೃಷ್ಣ?
ರಾಜ್ ಅವರನ್ನು ಕರೆತರಲೆಂದು ಹೊರಟ ಗೋಪಾಲ್ ಬರಿಗೈಯಲ್ಲಿ ಮೂರನೇ ಬಾರಿಗೆ ಹಿಂದೆ ಬಂದಾಗ , ಸುದ್ದಿ ಗೋಷ್ಟಿ ಕರೆದು ಈ ವಿಷಯವನ್ನು ಹಂಚಿಕೊಳ್ಳುವ ಮೂಡ್ ಎಸ್.ಎಂ.ಕೃಷ್ಣ ರಲ್ಲಿ ಉಳಿದಿಲ್ಲ. ಜನರ ಪ್ರಶ್ನೆಗಳಿಗೆ ತಾನು ತುತ್ತಾಗುವುದರ ಬದಲು ನಕ್ಕೀರನ್ ಗೋಪಾಲ್‌ಗೇ ಈ ಜವಾಬ್ದಾರಿ ವಹಿಸಿದರೆ ರಗಳೆಯಿಲ್ಲ ಎಂದು ನಿರ್ಧರಿಸಿದ ಕೃಷ್ಣ ಬುಧವಾರ ರಾತ್ರಿಯ ಗೋಪಾಲ್ ಪ್ರೆಸ್ ಮೀಟ್ ಆಯೋಜಿಸಿರಬಾರದೇಕೆ?
ಈ ಪ್ರಶ್ನೆಯ ಹಿಂದೆ ಇನ್ನಷ್ಟು ಸಂಶಯಗಳೂ ಎದ್ದಿವೆ :
ಪ್ರಶ್ನೆಗಳನ್ನು ಉತ್ತರಿಸುವ ಸಂದಿಗ್ಧದಿಂದ ತಪ್ಪಿಸಿಕೊಳ್ಳುವ ಕೃಷ್ಣ ರ ಪ್ರಯತ್ನ ಬಯಲಾದದ್ದು ಗೋಪಾಲ್ ಜೊತೆ ಅವರೂ ಸುದ್ದಿಗೋಷ್ಟಿಯಲ್ಲಿ ಭಾಗವಹಿಸದೇ ಇದ್ದಾಗ. ಗೋಪಾಲ್‌ರನ್ನು ಕರೆಸಿ ಕೊಂಡು, ಜನರೆದುರಿಗೆ ಗೋಪಾಲ್ ಬಂದಿರುವುದು ತಮಗಿಷ್ಟವಿಲ್ಲ ಎಂಬಂತೆ ಕೃಷ್ಣ ನಟಿಸಿದ್ದಾರೆ. ಯಾಕೆಂದರೆ :
ಅವರಿಗೆ ಕರ್ನಾಟಕದ ಜನತೆಗೆ ಉತ್ತರ ಹೇಳಿ ಸಾಕಾಗಿ ಹೋಗಿದೆ. ಸುಳ್ಳುಗಳನ್ನು ಪೋಣಿಸಿ ಬೇಜಾರು ಬಂದಿದೆ.
ಅಲ್ಲದೆ ಗೋಪಾಲ್ ಖಾಲಿ ಕೈಯಲ್ಲಿ ಬಂದುದರಿಂದ ಜನರು ರೊಚ್ಚಿಗೇಳುವ ಸಾಧ್ಯತೆ ಸಾಕಷ್ಟಿತ್ತು. ಆದ್ದರಿಂದ ಅಣ್ಣಾವ್ರು ಮೂರನೇ ಸಂಧಾನ ಪ್ರಯತ್ನದಿಂದಲೂ ನಾಡಿಗೆ ಬರಲಿಲ್ಲ ಎನ್ನುವ ನೋವನ್ನು ಜನರ ಮನಸ್ಸಿನಿಂದ ಮಾಸುವಂತೆ ಮಾಡಲು ಗೋಪಾಲ್ ಬೆಂಗಳೂರು ಭೇಟಿಯ ಷೋವನ್ನು ಕೃಷ್ಣ ಏರ್ಪಡಿಸಿದ್ದಾರೆ. ಆ ಷೋಗೆ ಪೂರಕವಾಗಿ ಇನ್ನೊಬ್ಬ ಹೀರೋ ರಜನಿಕಾಂತ್‌ರನ್ನೂ ಕೂಡ ಗೋಪಾಲ್ ಜೊತೆ ವೇದಿಕೆ ಹತ್ತಿಸಿದರು. ಇದನ್ನು ಸಮರ್ಥಿಸುವುದಾದರೆ, ರಜನಿ ಹಿಂದೆಯೂ ಬೆಂಗಳೂರಿಗೆ ಬಂದಿದ್ದರು. ಆದರೆ ಅದು ಸುದ್ದಿಯಾಗಲಿಲ್ಲ. ಅವರ ಬುಧವಾರದ ಭೇಟಿ ಮಾತ್ರ ಸುದ್ದಿ ಮಾಡಿತು. ಗೋಪಾಲ್ ಜೊತೆ ರಜನಿ ಬರ್ತಾರಂತೆ ಎನ್ನುವ ಸುದ್ದಿ ರಾಜ್ ಬರುವುದಿಲ್ಲ ಎನ್ನುವ ನೋವಿನ ಮೇಲೆ ತಾತ್ಕಾಲಿಕ ಮುಲಾಮು ತೀಡಿದಂತಾಗಿದೆ.
ಗೋಪಾಲ್ ಅವರನ್ನು ಕೃಷ್ಣ ಕರೆಸಿಕೊಂಡಿದ್ದಾರೆ ಎನ್ನುವುದಕ್ಕೆ , ಗೋಪಾಲ್‌ಗೆ ಸಿಕ್ಕಿರುವ ರಾಜಾತಿಥ್ಯವೇ ಸಾಕ್ಷಿ. ಗೋಪಾಲ್ ಚೆನ್ನೈಯಿಂದ ಹೊರಡುವ ಮೊದಲೇ ತನಗೆ ಏನೇನು ವ್ಯವಸ್ಥೆಯಾಗಬೇಕು ಅನ್ನೋದನ್ನ ತಾಕೀತು ಮಾಡಿದ್ದ. ಕೃಷ್ಣ ರಿಗೆ ಅದನ್ನು ಶಿರಸಾ ವಹಿಸದೆ ಬೇರೆ ದಾರಿ ಕಾಣಲಿಲ್ಲ. ವಿಮಾನ ನಿಲ್ದಾಣದಿಂದ ವಿಶೇಷ ವಾಹನ ಎಸ್ಕಾರ್ಟ್, ರಹಸ್ಯ ಕಾಪಾಡುವ ಕಾರು ಎಲ್ಲವೂ ರೆಡಿಯಾಗಿತ್ತು.
ಮುಖಪುಟ / ರಾಜ್ ಅಪಹರಣ / ಡಾ. ರಾಜಕುಮಾರ್ ಚಿತ್ರಾವಳಿ / ರಾಜಮಾರ್ಗ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications