ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

--ಸೆ-.15 ರಂದು ಬ್ರೆೃಮಿ ಸಂಸ್ಥೆ-ಯಿಂ-ದ 60 ಶಾಲೆ-ಗ-ಳ ದತ್ತು ಸ್ವೀಕಾ-ರ : ವಿಶ್ವ-ನಾ-ಥ್‌

By Staff
|
Google Oneindia Kannada News

ಮೈಸೂರು : ಸಮಾಜವನ್ನು ಶಿಕ್ಷಣದಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ದತ್ತು ಸ್ವೀಕಾರ ಕಾರ್ಯಕ್ರಮ ಜಾರಿಗೆ ತರಲು ಸರ್ಕಾ-ರ ಉದ್ದೇ-ಶಿ-ಸಿ-ದೆ ಎಂದು ಶಿಕ್ಷ-ಣ ಸಚಿ-ವ ಎಚ್‌. ವಿಶ್ವ-ನಾ-ಥ್‌ ಹೇಳಿ-ದ್ದಾ-ರೆ.

ಈ ನಿಟ್ಟಿನಲ್ಲಿ ಬ್ರೆೃಮಿ ಎಂಬ ಸಂಸ್ಥೆ 60 ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಮುಂದೆ ಬಂದಿದ್ದು, -ಸೆ-ಪ್ಟಂ-ಬ-ರ್‌15ರಂದು ಬೆಂಗಳೂರಿನಲ್ಲಿ ದತ್ತು ಸ್ವೀಕಾರ ಸಮಾರಂಭ ನಡೆಯುತ್ತಿದೆ ಎಂದು ಹೇಳಿದ್ದಾರೆ. ಮೈಸೂರು ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯ ಸಮಾ-ರಂ-ಭ-ದ-ಲ್ಲಿ ಅವ-ರು ಮಾತ-ನಾ-ಡು-ತ್ತಿ-ದ್ದ-ರು.

ಪ್ರಶಸ್ತಿಗಾಗಿ ಶಿಕ್ಷಕರು ಇನ್ನು ಮುಂದೆ ಅರ್ಜಿ ಹಾಕಬೇಕಿಲ್ಲ. ಪ್ರಶಸ್ತಿಗಾಗಿ ಉತ್ತಮ ಶಿಕ್ಷಕರನ್ನು ಆರಿಸುವ ಪದ್ಧತಿಯನ್ನು ಸಂಪೂರ್ಣ ಬದಲಾಯಿಸಲಾಗುವುದು. ಪಂಚಾಯ್ತಿ ಮಟ್ಟದಲ್ಲಿ ಸದಸ್ಯರು, ಸಾರ್ವಜನಿಕರು ಮತ್ತು ಪೋಷಕರು ಹಾಗೂ ವಿದ್ಯಾರ್ಥಿಗಳು ಗುರುತಿಸುವ ಶಿಕ್ಷಕರನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದೆಂದು ವಿಶ್ವ-ನಾ-ಥ್‌ ತಿಳಿಸಿದ್ದಾರೆ.

ನಿವೃತ್ತ ಹಾಗೂ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾದ ಈ ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸದಸ್ಯರಾದ ಮರಿತಿಬ್ಬೇಗೌಡ, ಮಧುಸೂದನ್‌, ಜಿಲ್ಲಾಧಿಕಾರಿ ಬಸವರಾಜು, ಡಿಡಿಪಿಐ ರಾಮಪ್ಪ ಭಾಗವಹಿಸಿದ್ದರು, ಕಾರ್ಯಕ್ರಮವನ್ನು ಹಣಕಾಸು ಸಹಾಯಕ ಸಚಿವ ಎಂ. ಶಿವಣ್ಣ ಉದ್ಘಾಟಿಸಿದರು.

(ನಮ್ಮ ಪ್ರತಿ-ನಿ-ಧಿ-ಯಿಂ-ದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X