ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್‌ ನಿಮಗೆಷ್ಟು ಗೊತ್ತು ? - 1

By Staff
|
Google Oneindia Kannada News

ಬೆಂಗಳೂರು : ಇದೆಂಥಾ ಕಾಕತಾಳೀಯ ನೋಡಿ? ತನ್ನ ದಾರಿಗಡ್ಡ ಬಂದವರನ್ನು ಹಸಿದ ಹೆಬ್ಬುಲಿಯಂತೆ ಅತಿಕ್ರಮಿಸಿ ಕೊಂದು ಇವತ್ತು ಅವರ ಪರವಾಗಿಯೇ ಮಾತನಾಡುತ್ತಿರುವ ವೀರಪ್ಪನನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋಗಿ.....

ಮೊದಲಿಗೆ , ತಮಿಳರ ಆತ್ಮಸಾಕ್ಷಿಯ ಪ್ರತೀಕದಂತೆ, ಹಿತರಕ್ಷಕನಂತೆ, ಗಾಡ್‌ಫಾದರ್‌ನಂತೆ ಮಾತನಾಡುತ್ತಿರುವ ವೀರಪ್ಪನ್‌ ಬಲಿ ಹಾಕಿದ ತಮಿಳರ ಸಂಖ್ಯೆ ಎಷ್ಟು ಎನ್ನುವುದು ನಿಮಗೆ ಗೊತ್ತೆ?

ತಮಿಳುಪರವಾದ ತನ್ನ ಬದಲಾದ (?) ನಿರ್ಧಾರವನ್ನು ಘೋಷಿಸಿಕೊಳ್ಳಲು ರಾಜ್‌ ಅಪಹರಣವನ್ನು ದಾಳವಾಗಿಸಿಕೊಂಡ ನರಹಂತಕ, ಮಕ್ಕಳು ಮತ್ತು ಹೆಂಗಸರಿಗೆ ತೊಂದರೆ ನೀಡದ ದಯಾಮಯಿ ಎಂಬ ಸಾಮೂಹಿಕ ನಂಬಿಕೆಯನ್ನು ರಾಜ್ಯದ ಗೃಹ ಇಲಾಖೆ ಸಿದ್ಧಪಡಿಸಿರುವ ದಾಖಲೆಗಳು ಸುಳ್ಳುಮಾಡಿವೆ. ಇವತ್ತಿನ ವೀರಪ್ಪನ್‌ ಹಿಂದಿನ ವೀರಪ್ಪನ್‌ಗಿಂತ ಸಂಪೂರ್ಣ ತದ್ವಿರುದ್ಧ. ವೀರಪ್ಪನ್‌ನಿಂದ ಹತರಾದವರಲ್ಲಿ ಕನ್ನಡಿಗರಿಗಿಂತ ತಮಿಳರು ಅದರಲ್ಲೂ ಬುಡಕಟ್ಟು ಜನಾಂಗದವರೇ ಹೆಚ್ಚಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ.

ಅರ್ಜುನನ ಹತ್ಯೆಗೆ ಪ್ರತೀಕಾರ : 1993ರಿಂದಲೇ ರಾಜ್ಯ ಸರಕಾರದ ಗೃಹ ಇಲಾಖೆ ದಾಖಲು ಮಾಡುತ್ತಿರುವ ವರದಿಯಂತೆ ತನ್ನ ತಮ್ಮ ಅರ್ಜುನನ್‌ನ ಹತ್ಯೆಗೆ ಪ್ರತೀಕಾರವಾಗಿ, ಎರಡೂ ರಾಜ್ಯದ 47 ಜೀವಗಳನ್ನು ವೀರಪ್ಪನ್‌ ಬಲಿತೆಗೆದುಕೊಂಡಿದ್ದಾನೆ. ಇವರಲ್ಲಿ ಅನೇಕರು ತನ್ನ ಬಗ್ಗೆ ಪೊಲೀಸರಿಗೆ ಮಾಹಿತಿ ಒದಗಿಸುತ್ತಿದ್ದಾರೆ ಎಂದು ವೀರಪ್ಪನ್‌ ಶಂಕಿಸಿದವರು ಇದ್ದಾರೆ.

ರಾಜ್ಯ ಸರಕಾರದ ಗೃಹ ಇಲಾಖೆ ದಾಖಲೆಗಳನ್ನು ಆಧರಿಸಿ ವೀಶೇಷ ಕಾರ್ಯಪಡೆ ಸಿದ್ಧಪಡಿಸಿರುವ ಅಂಕಿ-ಅಂಶಗಳ ಪ್ರಕಾರ, ಕೊಲೆ, ಭಯೋತ್ಪಾದನೆ, ಡಕಾಯಿತಿ, ದರೋಡೆ, ಅಪಹರಣ ಮುಂತಾದ 134 ಪ್ರಕರಣಗಳು ಕಾಡುಗಳ್ಳನ ಮೇಲೆ ದಾಖಲಾಗಿವೆ. ಇವುಗಳಲ್ಲಿ ಕರ್ನಾಟಕದಲ್ಲಿ 59, ತಮಿಳುನಾಡಿನಲ್ಲಿ 75 ಪ್ರಕರಣಗಳು ಇವೆ.

ಪೋಲೀಸ್‌ ದಾಖಲೆಗಳ ಪ್ರಕಾರ 119 ನರಬಲಿಗಳು ವೀರಪ್ಪನ್‌ ಮತ್ತವನ ಸಹಚರರಿಂದ ನಡೆದಿವೆ. ಇನ್ನೂ ಕೆಲವು ವರದಿಗಳ ಪ್ರಕಾರ ಬಲಿಗಳ ಸಂಖ್ಯೆ 130ಕ್ಕೂ ಹೆಚ್ಚು. ವೀರಪ್ಪನ್‌ ಭಯದಿಂದ ಪೋಲೀಸರ ಗಮನಕ್ಕೆ ಬರದೆ ಮಣ್ಣಾದ ಅನೇಕ ಅಮಾಯಕರ ದಾರುಣ ಕತೆಗಳು ವೀರಪ್ಪನ್‌ ಹತ್ಯಾಕಾಂಡದಲ್ಲಿ ಸ್ಥಾನ ಪಡೆದಿವೆ. ಗಡಿಭದ್ರತಾಪಡೆಯ ಒಬ್ಬ ಯೋಧ ಸೇರಿದಂತೆ ತಮಿಳುನಾಡಿನ ಒಂಬತ್ತು, ಕರ್ನಾಟಕದ 22 ಪೊಲೀಸ್‌ ಅಧಿಕಾರಿಗಳು ಗಂಧದ ಕಳ್ಳನ ಗುಂಡಿಗೆ ಜೀವ ತೆತ್ತಿದ್ದಾರೆ. ವೀರಪ್ಪನ್‌ ಸಹಚರರು ಕೊಂದ 10 ಅರಣ್ಯ ಸಿಬ್ಬಂಧಿಗಳಲ್ಲಿ ಆರು ನೌಕರರು ತಮಿಳುನಾಡಿಗೆ ಸೇರಿದವರು. 77 ಜನ ಬುಡಕಟ್ಟು ಪಂಗಡದವರು ಮತ್ತು ಹಳ್ಳಿಗರು ಹುತಾತ್ಮರ ಪಟ್ಟಿಯಲ್ಲಿದ್ದಾರೆ. ಇವರಲ್ಲಿ 49 ಮಂದಿ ತಮಿಳುನಾಡಿನವರಾದರೆ ಉಳಿದವರು ಕನ್ನಡಿಗರು.

ಹೆಂಗಸರು ಮತ್ತು ಮಕ್ಕಳನ್ನೂ ಬಿಡದ ಕ್ರೌರ್ಯ : ಹೆಂಗಸರು ಮತ್ತು ಮಕ್ಕಳಿಗೆ ವೀರಪ್ಪನ್‌ ತೊಂದರೆ ಕೊಡುವುದಿಲ್ಲ ಎಂಬ ಸಾರ್ವತ್ರಿಕ ನಂಬಿಕೆ ಹೇಗೆ ಸುಳ್ಳಾಗಿದೆ ನೋಡಿ! ಮಕ್ಕಳು ಮತ್ತು ಮಹಿಳೆಯರತ್ತ ಸಿಡಿದ ವೀರಪ್ಪನ್‌ ಬಂದೂಕಿನ ಗುಂಡುಗಳು ಪೊಲೀಸ್‌ ಠಾಣೆವರೆಗೆ ಕೇಳಿಸಲೇ ಇಲ್ಲ. ಇದಕ್ಕೆ ಕಾರಣ ತಮ್ಮ ಜೀವಕ್ಕೆ ಎಲ್ಲಿ ಸಂಚಕಾರ ಒದಗುತ್ತದೋ ಎಂಬ, ಕೊಲೆಯಾದ ನತದೃಷ್ಟರ ಬಂಧುಗಳ ಜೀವಭಯ.

1993 ಜನವರಿ 1ರಂದು ಧರ್ಮಪುರಿ ಜಿಲ್ಲೆಯ ಎರಿಯಾರ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಒಂದು ಕುಟುಂಬದ ಕೊಲೆಯಲ್ಲಿ ಮನೆಯ ಯಜಮಾನ ಚಿನ್ನಪನ್ನು ಆತನ ಹೆಂಡತಿ ಪಾಚಿಯಮ್ಮ ಮತ್ತು ಮಕ್ಕಳಾದ ಶಿವಕುಮಾರ್‌ ಮತ್ತು ರಾಜಿ ಸೇರಿದ್ದಾರೆ. ಈ ಘಟನೆ ನಡೆದ ಮೂರು ತಿಂಗಳ ನಂತರ ಮಾರ್ಚ್‌ ಒಂದರಂದು ಐಯ್ಯಮ್ಮ ಎಂಬ ಇನ್ನೊಬ್ಬ ಮಹಿಳೆಯನ್ನು ವೀರಪ್ಪನ್‌ ಕೊಂದ. ಹೀಗೆ ಬಲಿಯಾದವರೆಲ್ಲಾ ತನ್ನ ಸುಳಿವು, ಚಲನವಲನದ ಬಗ್ಗೆ ಪೊಲೀಸರಿಗೆ ಮಾಹಿತಿ ಒದಗಿಸುತ್ತಿದ್ದಾರೆ ಎಂದು ವೀರಪ್ಪನ್‌ ಶಂಕಿಸಿದವರು. ನಂತರ ನವೆಂಬರ್‌ ಎರಡರಂದು ಎಂಟು ದನಗಾಹಿಗಳನ್ನು , 1994ರ ಅಕ್ಟೋಬರ್‌ 8ರಂದು ಐದು ಬಡಕಟ್ಟು ಜನಾಂಗದವರನ್ನು ವೀರಪ್ಪನ್‌ ಗುಂಪು ನೆಲಕ್ಕೊರಗಿಸಿತು. 1995ರ ಆಗಸ್ಟ್‌ 8ರಂದು ಐವರು ಸೋಲಿಗರು ಸೆಪ್ಪಹಳ್ಳ ಕಾಡಿನಲ್ಲಿ ಬಲಿಯಾದರು. ಮರುದಿನ ಪುಣಜನೂರು ಹಳ್ಳಿಯ ಐದು ಜನರ ದೇಹಗಳನ್ನು ಗುಂಡುಗಳು ತೂರಿದವು.

1993ರಲ್ಲಿ ದೋಣಿಮಾಧವುಪಟ್ಟಿ ಹತ್ತಿರದ ರಂಜಿ ಮತ್ತು ಏಳುಮಲೈ ಎಂಬ ಲಂಬಾಣಿಗಳ ಕೊಲೆ ಅವರ ಬಂಧುಗಳ ಹೆದರಿಕೆಯಿಂದಾಗಿ ಪೊಲೀಸರಿಗೆ ತಲುಪಲಿಲ್ಲ. ಇದು ಪೋಲೀಸರು ಬಲ್ಲ ಅಧೀಕೃತ, ಅನಧೀಕೃತ ದಾಖಲೆ ಪ್ರಕಾರ ಲಭ್ಯವಿರುವ ಮಾಹಿತಿ ಲೆಕ್ಕಕ್ಕೆ ಸಿಗದೇ ಹೋಗಿರುವ ಇನ್ನೆಷ್ಟು ಕೊಲೆಗಳು ನಡೆದಿವೆಯೋ ಲೆಕ್ಕ ಇಟ್ಟವರಾರು. ಇಂಥ ಇತಿಹಾಸ ಹೊಂದಿರುವ ವೀರಪ್ಪನ್‌ ಇವತ್ತು ತಮಿಳರ ಸ್ವಯಂಘೋಷಿತ ನಾಯಕನಂತೆ ಪೋಸು ಕೊಡುತ್ತಿದ್ದಾನೆ. ಅದಕ್ಕಾಗಿ ರಾಜ್‌ ಅವರನ್ನು ಸುತ್ತುವರಿದಿದ್ದಾನೆ.

  • ಮುಖಪುಟ / ರಾಜ್‌ ಅಪಹರಣ / ಡಾ. ರಾಜಕುಮಾರ್‌ ಚಿತ್ರಾವಳಿ / ರಾಜಮಾರ್ಗ
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X