ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಸಿಐನಿಂದ ಹೊಸ ಕ್ರಿಕೆಟ್‌ ನೀತಿ ಸಂಹಿತೆ ಜಾರಿ

By Staff
|
Google Oneindia Kannada News

ಬೆಂಗಳೂರು : ಭಾನುವಾರ ನಡೆದ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆ ಹೊಸ ನೀತಿ ಸಂಹಿತೆ ಕರಡಿಗೆ ಅಂತಿಮ ರೂಪು ನೀಡಿದ್ದು, ಸಂಹಿತೆಯು ಭಾನುವಾರದಿಂದಲೇ ಅಸ್ತಿತ್ವಕ್ಕೆ ಬಂದಿದೆ.

ಸಭೆಯ ನಂತರ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಬಿಸಿಸಿಐ ಅಧ್ಯಕ್ಷ ಎ.ಸಿ. ಮುತ್ತಯ್ಯ ಈ ವಿಷಯ ತಿಳಿಸಿದರು. ಪ್ರಾಯೋಗಿಕವಾಗಿ ಈ ನೀತಿ ಸಂಹಿತೆ ಇಂದಿನಿಂದಲೇ ಅಸ್ತಿತ್ವಕ್ಕೆ ಬರಲಿದೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಸಂಹಿತೆಯನ್ನು ಕಾನೂನುಬದ್ಧವಾಗಿ ಅಂಗೀಕರಿಸಲಾಗುವುದು ಎಂದು ಹೇಳಿದರು.

ನೀತಿ ಸಂಹಿತೆ ನಿಯಮಾವಳಿಗಳು :

  • ಕೋಚ್‌ ಮತ್ತು ನಾಯಕನನ್ನು ಹೊರತುಪಡಿಸಿ ಬೇರಾವ ಅಧಿಕಾರಿಯಾಗಲೀ, ಆಟಗಾರರಾಗಲೀ ಮಾಧ್ಯಮಗಳಿಗೆ ತಮ್ಮ ಅಭಿಪ್ರಾಯ ತಿಳಿಸಕೂಡದು
  • ಪಂದ್ಯದ ವೇಳೆ ಆಟಗಾರರಿಗೆ ಅನಾರೋಗ್ಯವಿದ್ದಲ್ಲಿ ಅದನ್ನು ಮುಚ್ಚಿಡದೆ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ತರಬೇತುದಾರರಿಗೆ ತಿಳಿಸಬೇಕು
  • ವಿದೇಶಗಳಲ್ಲಿ ಗಳಿಸುವ ಹಣ (ದಿನದ ಭತ್ಯೆ ಹೊರತು ಪಡಿಸಿ) ವನ್ನು ಬಿಸಿಸಿಐ ಲೆಕ್ಕಕ್ಕೆ ಜಮಾ ಮಾಡಬೇಕು. ಇದರಲ್ಲಿ ಬಹುಮಾನದ ಮೊತ್ತವೂ ಸೇರಿರುತ್ತದೆ. ಹಣವನ್ನು ರುಪಾಯಿಗೆ ಪರಿವರ್ತಿಸಿ ಆಯಾ ಆಟಗಾರರಿಗೆ ಬಿಸಿಸಿಐ ನೀಡುತ್ತದೆ
  • ಕ್ರಿಕೆಟಿಗರಾಗಲೀ, ಅಧಿಕಾರಿಗಳಾಗಲೀ ಪಂದ್ಯದ ಮೇಲೆ ಬಾಜಿ ಕಟ್ಟಕೂಡದು. ಒಂದು ವೇಳೆ ಮೋಸದಾಟದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಲ್ಲಿ ಆಜೀವ ನಿಷೇಧ ವಿಧಿಸಿ, ದಾಖಲೆಗಳನ್ನು ಅಳಿಸಿ ಹಾಕಲಾಗುವುದು
  • ಸೆಲ್‌ಫೋನುಗಳನ್ನು ಕ್ರೀಡಾಂಗಣಕ್ಕೆ ಒಯ್ಯುವಂತಿಲ್ಲ
  • ಆಟಗಾರರು ತಮ್ಮ ಪತ್ನಿಯನ್ನು ಬಿಟ್ಟು ಬೇರೆ ಯಾವುದೇ ಗೆಳೆಯರನ್ನು ಕ್ರೀಡಾಂಗಣಕ್ಕೆ ಕರೆದೊಯ್ಯುವಂತಿಲ್ಲ. ಪತ್ನಿಯನ್ನು ಕರೆದುಕೊಂಡು ಹೋಗಲೂ ಬಿಸಿಸಿಐನ ಅನುಮತಿ ಪಡೆಯಬೇಕು
  • ಯಾವುದಾದರೂ ಬುಕ್ಕಿ ಸಂಪರ್ಕಿಸಿದಲ್ಲಿ, ತಕ್ಷಣವೇ ಸ್ಥಳೀಯ ಪೊಲೀಸರಿಗೆ ಆಟಗಾರರು ದೂರು ಕೊಡಬೇಕು
ಈ ನಿಯಮಗಳನ್ನು ಉಲ್ಲಂಘಿಸಿದ ಆಟಗಾರರಿಂದ ತಪ್ಪೊಪ್ಪಿಗೆ ಪಡೆಯಲಾಗುವುದು ಅಥವಾ 1 ಲಕ್ಷ ರುಪಾಯಿ ದಂಡ ವಿಧಿಸಲಾಗುವುದು ಅಥವಾ 5 ಒಂದು ದಿನದ ಪಂದ್ಯಗಳ ನಿಷೇಧ ಅಥವಾ 3 ಟೆಸ್ಟ್‌ ಪಂದ್ಯಗಳ ನಿಷೇಧ ಹೇರಲಾಗುವುದು ಎಂದು ಮುತ್ತಯ್ಯ ತಿಳಿಸಿದರು.

ರಾಷ್ಟ್ರೀಯ ಟೂರ್ನಿ ಕಡ್ಡಾಯ : ರಾಷ್ಟ್ರೀಯ ಮಟ್ಟದ ಟೂರ್ನಿಗಳಿಗೆ ಒತ್ತು ನೀಡಲು ಮಂಡಳಿ ನಿರ್ಧರಿಸಿದೆ. ಟೆಸ್ಟ್‌ ಆಡುವ ಪ್ರತಿಯಾಬ್ಬ ಕ್ರಿಕೆಟಿಗ ಕಡ್ಡಾಯವಾಗಿ ರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಬೇಕು. ಇಲ್ಲವಾದಲ್ಲಿ ಅಂಥ ಆಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ನೇಮಕ : ಸಭೆಯಲ್ಲಿ ಬಿಸಿಸಿಐನ ಕಮಿಷನರ್‌ ಹಾಗೂ ಕ್ಯುರೇಟರ್‌ಗಳನ್ನೂ ಆಯ್ಕೆ ಮಾಡಲಾಯಿತು. ಸಿಬಿಐನ ಜಂಟಿ ನಿರ್ದೇಶಕ ಮಾಧವನ್‌ ಅವರನ್ನು ಬಿಸಿಸಿಐನ ಕಮಿಷನರ್‌ ಆಗಿ ನೇಮಕ ಮಾಡಿದರೆ, ಪಿಚ್‌ಗಳ ಗುಣಮಟ್ಟ ಅಭಿವೃದ್ಧಿಗಾಗಿ ಕರ್ನಾಟಕದ ಡಾ. ಕಸ್ತೂರಿ ರಂಗನ್‌ ಅವರನ್ನು ಮುಖ್ಯ ಕ್ಯುರೇಟರ್‌ ಆಗಿ ಆರಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X