ಮಳೆರಾಯನ ಚಲ್ಲಾಟ ಮಳೆರಾಯನ ಚಲ್ಲಾಟ
ನಗರದ ವರ್ತಕರಿಗೆ ಭಾರಿ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ತರಕಾರಿ, ಹೂವು, ಹಣ್ಣುಗಳೆಲ್ಲ ಮಳೆಯಲ್ಲಿ ಕೊಚ್ಚಿ, ಕೊಳೆತು ಹೋದರೆ, ಅಂಗಡಿಗಳಿಗೆ ನುಗ್ಗಿದ ನೀರು, ಎಲ್ಲ ಧಾನ್ಯದ ಮೂಟೆಗಳಿಗೂ ಮುಗ್ಗುಲು ಹಿಡಿಸಿದೆ. ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ. ಪರಿಹಾರಕ್ಕೂ ಮನವಿಗಳು ಬಂದಿವೆ.
ಒಳಚಂಡಿಯಲ್ಲೆಲ್ಲ ಕಸ ಕಡ್ಡಿ ಸೇರಿ, ಮ್ಯಾನ್ ಹೋಲ್‌ಗಳಿಂದ ನೀರು ರಸ್ತೆಗೆ ಹರಿಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕೆಲವು ಬಡಾವಣೆಗಳಲ್ಲಿ ಮನೆಯ ಮುಂದೆ ಹೊಲಸು ನೀರು ಶೇಖರವಾಗಿ ಮನೆಯಿಂದ ಹೊರ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಲರಾ, ಕರಳು ಬೇನೆ ಹಾಗೂ ಸಾಂಕ್ರಾಮಿಕ ರೋಗದ ಭೀತಿ ತಲೆದೋರಿದೆ.
ಇ-ತ್ತೀ-ಚೆ-ಗೆ ತಾನೆ ದುರ-ಸ್ತಿ ಕಂಡಿ-ದ್ದ ಬೆಂಗ-ಳೂ-ರಿ-ನ ಅನೇ-ಕ ರಸ್ತೆ-ಗ-ಳಲ್ಲಿ ಮತ್ತೆ ಗುಂಡಿ-ಗ-ಳು ಬಿ-ದ್ದಿ-ವೆ. ಶ್ರೀನಗರ - ಆವಲಹಳ್ಳಿ ರಸ್ತೆ ಕುಸಿದು, ದೊಡ್ಡ ಚರಂಡಿಯಲ್ಲಿ ಸೇರಿ ಹೋಗಿದೆ. ರಾಜ್ ಅಪ-ಹ-ರ-ಣ-ದ ಹಿನ್ನ-ಲೆ-ಯ-ಲ್ಲಿ ವಾರ-ದ ಮೊದ-ಲೆ-ರ-ಡು ದಿನ ಸ್ಥಗಿ-ತ-ಗೊಂ-ಡಿ-ದ್ದ ವ್ಯಾಪಾ-ರ ವ--ಹಿವಾ-ಟು ಅದ-ರ-ಲ್ಲೂ ತರ-ಕಾ-ರಿ ಮಾರು-ಕ-ಟ್ಟೆ ವ್ಯಾಪಾ-ರ ಕುಸಿ-ದಿ-ದೆ. ಉಳಿ-ದಂ-ತೆ ಅ-ಲ್ಲ-ಲ್ಲಿ ಮಳೆ-ಯಾ-ದ ವರ-ದಿ-ಗ-ಳು ಬಂದಿವೆ. ಕರಾವಳಿಯಲ್ಲಿ ಒಣಹವೆ ಮುಂದುವರಿದಿದೆ. ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಸುರಿಮಳೆ ಬೀಳುವ ಮುನ್ಸೂಚನೆ ದೊರಕಿದೆ.












Click it and Unblock the Notifications