keyboard_backspace

ಕೋವಿಡ್‌ನಿಂದ ದೂರ ಮಾಡಲು ಮಾಸ್ಕ್‌ ಸಹಾಯಕ: ಆಕ್ಸ್‌ಫರ್ಡ್ ಅಧ್ಯಯನ

Google Oneindia Kannada News

ಹೈದಾರಾಬಾದ್‌, ಅಕ್ಟೋಬರ್‌ 30: ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಮಾಸ್ಕ್‌ ಬಳಸುವುದು ಎಷ್ಟು ಪರಿಣಾಮಕಾರಿ ಎಂಬುವುದನ್ನು ಆಕ್ಸ್‌ಫರ್ಡ್ ಅಧ್ಯಯನ ವಿವರಿಸಿದೆ. ಕೋವಿಡ್‌ನಿಂದ ದೂರ ಮಾಡಲು ಮಾಸ್ಕ್‌ ಸಹಾಯಕ ಎಂದು ಆಕ್ಸ್‌ಫರ್ಡ್ ಅಧ್ಯಯನ ಹೇಳಿದೆ.

ಕೊರೊನಾ ವೈರಸ್‌ ಸೋಂಕು ಆರಂಭವಾದ ಸಂದರ್ಭದಿಂದಲೇ ಮಾಸ್ಕ್‌ ಬಳಕೆಯು ಕೋವಿಡ್‌ ವಿರುದ್ಧ ಎಷ್ಟು ಪರಿಣಾಮಕಾರಿ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ತೆಲಂಗಾಣದ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಮಾಸ್ಕ್‌ ಬಳಕೆ ಅತ್ಯಗತ್ಯ ಎಂದು ಹೇಳಿದ್ದರು. ಆದರೆ ಈ ಬಗ್ಗೆ ಹಲವಾರು ವಾದ ವಿವಾದಗಳು ನಡೆದಿದ್ದವು. ಮಾಸ್ಕ್‌ ಅಗತ್ಯವೇ ಇಲ್ಲ ಎನ್ನುವ ತಜ್ಞರು ಒಂದೆಡೆ ಇದ್ದರೆ, ಮಾಸ್ಕ್ ಅತ್ಯಗತ್ಯ ಎಂದು ಹೇಳುವವರು ಇನ್ನೊಂದೆಡೆ ಇದ್ದಾರೆ. ಈ ಎಲ್ಲಾ ಅಂಶಗಳ ನಡುವೆ ಆಕ್ಸ್‌ಫರ್ಡ್ ನಡೆಸಿರುವ ಅಧ್ಯಯನವು ಮಾಸ್ಕ್‌ ಕೋವಿಡ್‌ನಿಂದ ಜನರನ್ನು ದೂರವಿಡಲು ಸಹಕಾರಿ ಎಂದು ತಿಳಿಸಿದೆ.

 ಕೊರೊನಾ ಸೋಂಕು + 2 ಡೋಸ್ ಲಸಿಕೆ ಗರಿಷ್ಠ ರಕ್ಷಣೆ ನೀಡುತ್ತದೆ; ಅಧ್ಯಯನ ಕೊರೊನಾ ಸೋಂಕು + 2 ಡೋಸ್ ಲಸಿಕೆ ಗರಿಷ್ಠ ರಕ್ಷಣೆ ನೀಡುತ್ತದೆ; ಅಧ್ಯಯನ

ಮಾಸ್ಕ್‌ನ ಪರಿಣಾಮಕಾರಿತ್ವದ ಬಗ್ಗೆ ತಿಳಿಯುವ ನಿಟ್ಟಿನಲ್ಲಿ ಆಕ್ಸ್‌ಫರ್ಡ್ ಸಂಶೋಧಕರು ಯುಕೆಯಲ್ಲಿ ಜನಸಂಖ್ಯೆ ಆಧಾರಿತ ಅಧ್ಯಯನವನ್ನು ನಡೆಸಿದ್ದಾರೆ. ಅಧ್ಯಯನವನ್ನು ನಡೆಸಿದ ಆಕ್ಸ್‌ಫರ್ಡ್‌ನ ಲೆವರ್‌ಹುಲ್ಮ್ ಸೆಂಟರ್ ಫಾರ್ ಡೆಮೊಗ್ರಾಫಿಕ್ ಸೈನ್ಸ್ ಅಕ್ಟೋಬರ್‌ 25 ರಂದು ಈ ಅಧ್ಯಯನದ ವರದಿಯನ್ನು ಪ್ರಕಟ ಮಾಡಿದ್ದು, "ಮಾಸ್ಕ್‌ ಧರಿಸಿದವರಿಗೆ ಕೊರೊನಾ ವೈರಸ್‌ ಸೋಂಕು ಹರಡಿರುವುದು ತೀರಾ ಕಡಿಮೆ," ಎಂದು ಉಲ್ಲೇಖ ಮಾಡಿದೆ.

 4,09,009 ಮಂದಿಯ ಮಾದರಿ ಸಂಗ್ರಹ!

4,09,009 ಮಂದಿಯ ಮಾದರಿ ಸಂಗ್ರಹ!

"ಯುಕೆಯಲ್ಲಿ ಸಾಂಕ್ರಾಮಿಕ ರೋಗದ ಮೊದಲ ವರ್ಷದಲ್ಲಿ ಕೋವಿಡ್ -19 ಸೋಂಕುಗಳಿಗೆ ಔಷಧೀಯವಲ್ಲದ ಮಧ್ಯಸ್ಥಿಕೆಗಳ ಅನುಸರಣೆಯ ಮೇಲೆ ಪರಿಣಾಮ ಬೀರುವ ಅಂಶಗಳು" ಎಂಬುವುದು ಅ ಅಧ್ಯಯನದ ವಿಷಯವಾಗಿದೆ. ಈ ಅಧ್ಯಯನಕ್ಕಾಗಿ 72,866 ನಿವಾಸಿಗಳಿಂದ 4,09,009 ಮಂದಿಯ ಮೂಗು ಹಾಗೂ ಗಂಟಲಿನ ಮಾದರಿಯನ್ನು ಸಂಗ್ರಹ ಮಾಡಲಾಗಿದೆ. ಈ ಪೈಕಿ 1,00,138 ಮಂದಿ 18 ರಿಂದ 64 ವರ್ಷಕ್ಕಿಂತ ಒಳಪಟ್ಟವರು ಆಗಿದ್ದಾರೆ. ಕಳೆದ 2020 ರ ಮೇ 10 ರಿಂದ 2021 ರ ಫೆಬ್ರವರಿ 2 ರವರೆಗಿನ ಮಾದರಿಯನ್ನು ಸಂಗ್ರಹ ಮಾಡಲಾಗಿದೆ. "ಮನೆಯ ಹೊರಗಡೆ ಮಾಸ್ಕ್ ಧರಿಸಿರುವುದ ಮಹಿಳೆಯರಲ್ಲಿ 2020 ರ ಕ್ರಿಸ್‌ಮಸ್‌ ಸಂದರ್ಭದಲ್ಲಿ ಸೋಂಕು ಪ್ರಮಾಣ ತೀರಾ ಕಡಿಮೆ ಆಗಿದೆ," ಎಂದು ಈ ಅಧ್ಯಯನವು ಹೇಳಿದೆ.

 ಸೋಂಕಿಗೆ ಒಡ್ಡಿಕೊಳ್ಳುವವರು ಯಾರು?

ಸೋಂಕಿಗೆ ಒಡ್ಡಿಕೊಳ್ಳುವವರು ಯಾರು?

ಯುಕೆಯ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲೆವರ್‌ಹುಲ್ಮ್ ಸೆಂಟರ್ ಫಾರ್ ಡೆಮೊಗ್ರಾಫಿಕ್ ಸೈನ್ಸ್‌ನ ಡಾ. ಮೆಲಿಂಡಾ ಸಿ ಮಿಲ್ಸ್‌ ಈ ಅಧ್ಯಯನವನ್ನು ನಡೆಸಿದ ತಂಡದ ಒಂದು ಸಂಶೋಧಕರಾಗಿದ್ದಾರೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. "ಕೋವಿಡ್ ನಡವಳಿಕೆಯ ಕ್ರಮಗಳ ಅನುಸರಣೆಯಲ್ಲಿ ಯಾವುದೇ ಕೊರತೆ ಅಥವಾ ಉಲ್ಲಂಘನೆ ಆದರೆ ಸಾಮಾನ್ಯವಾಗಿ ವರ್ತನೆ ಅಥವಾ ಅದನ್ನು ಆಯ್ಕೆ ಎಂದು ಪರಿಗಣಿಸಿಕೊಂಡು ಹೋಗಲಾಗುತ್ತದೆ. ಕೆಲವೊಂದು ಉದ್ಯೋಗದವರಿಗೆ ಕೆಲವು ನಿರ್ದಿಷ್ಟ ಕಾರಣದಿಂದಾಗಿ ವರ್ಕ್ ಫ್ರಮ್‌ ಹೋಮ್‌ ಮಾಡುವುದಾಗಲಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಣೆ ಮಾಡುವುದು ಆಗಲಿ, ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಉಪಯೋಗ ಮಾಡುವುದನ್ನು ಕಡಿಮೆ ಮಾಡುವುದಾಗಲಿ ಸಾಧ್ಯವಾಗುವುದಿಲ್ಲ. ಇದು ಈ ಜನರು ಕೊರೊನಾ ವೈರಸ್‌ ಸೋಂಕಿಗೆ ಅಧಿಕವಾಗಿ ಒಡ್ಡಿಕೊಳ್ಳುತ್ತಾರೆ ಎಂಬುವುದನ್ನು ಸೂಚಿಸುತ್ತದೆ," ಎಂದು ಡಾ. ಮೆಲಿಂಡಾ ಸಿ ಮಿಲ್ಸ್‌ ಹೇಳುತ್ತಾರೆ.

 ಸಂಶೋಧಕರು ಬೇರೆ ಏನು ಹೇಳುತ್ತಾರೆ?

ಸಂಶೋಧಕರು ಬೇರೆ ಏನು ಹೇಳುತ್ತಾರೆ?

"ನಡವಳಿಕೆಯ ಮಾರ್ಗಸೂಚಿಯನ್ನು ಅನುಸರಿಸಲು ಕೆಲವು ಗುಂಪುಗಳ ಜನರ ಅಸಮರ್ಥತೆಯು ಅಸ್ತಿತ್ವದಲ್ಲಿ ಇರುವ ಆರೋಗ್ಯ ಅಸಮಾನತೆಯನ್ನು ಹೆಚ್ಚಿಸುತ್ತದೆ. ಮಾಸ್ಕ್‌ ಅನ್ನು ಧರಿಸುವುದು ಈ ಆರೋಗ್ಯ ಅಸಮಾನತೆಯನ್ನು ಕಡಿಮೆ ಮಾಡಲು ಸಹಕಾರಿ ಎಂದು ನಮಗೆ ಅಧ್ಯಯನದಲ್ಲಿ ತಿಳಿದು ಬಂದಿದೆ," ಎಂದು ಕೂಡಾ ತಿಳಿಸಿದ್ದಾರೆ. "ನಾವು ಈ ಅಧ್ಯಯನಕ್ಕಾಗಿ ದೊಡ್ಡ ಸಂಖ್ಯೆಯ ಜನರ ಕೋವಿಡ್‌ ಮಾದರಿಯನ್ನು ಸಂಗ್ರಹ ಮಾಡಿದ್ದೆವು. 2020 ರಲ್ಲಿ ಯುಕೆಯಲ್ಲಿ ಮನೆಯಲ್ಲಿ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗದ ಸಂದರ್ಭದಲ್ಲಿಯೂ ಮಹಿಳೆಯರು ಕೊರೊನಾ ವೈರಸ್‌ ಸೋಂಕಿನಿಂದ ರಕ್ಷಿತರಾಗಿದ್ದಾರೆ ಎಂದು ಕಂಡು ಬಂದಿದೆ," ಎಂದು ಡಾ. ಮೆಲಿಂಡಾ ಸಿ ಮಿಲ್ಸ್‌ ಉಲ್ಲೇಖ ಮಾಡಿದರು.

ಮಾಸ್ಕ್‌: ಕೋವಿಡ್‌ನಿಂದ ಸುರಕ್ಷೆ

ಮಾಸ್ಕ್‌: ಕೋವಿಡ್‌ನಿಂದ ಸುರಕ್ಷೆ

ಕೊರೊನಾ ವೈರಸ್‌ ಸೋಂಕಿನಿಂದ ಕಾಪಾಡಿಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದವರು ಮಾಸ್ಕ್‌ ಅನ್ನು ಧರಿಸಿ ತಮ್ಮನ್ನು ತಾವು ಕೊರೊನಾದಿಂದ ರಕ್ಷಿಸಿಕೊಂಡಿದ್ದಾರೆ ಎಂದು ಈ ಅಧ್ಯಯನದಲ್ಲಿ ತಿಳಿಸಲಾಗಿದೆ. ವಯಸ್ಕರಲ್ಲಿ ಅಧಿಕವಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮನೆಯ ಹೊರಗಡೆಯಲ್ಲಿ ಮಾಸ್ಕ್‌ ಧರಿಸಿದವರಿಗೆ ಕೊರೊನಾ ಸೋಂಕು ಬಂದಿದ್ದು ತೀರಾ ವಿರಳ ಎಂದು ಕೂಡಾ ತಿಳಿಸಲಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Masks help keep Covid at bay says Oxford study, To Know more Read on.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X