ಝೆನ್ ಕಥೆ: 'ನಗುವ ಬುದ್ಧ'ನ ಉತ್ತರ

ಲಾಫಿಂಗ್ ಬುದ್ಧ ಎಲ್ಲರಿಗೂ ಅಚ್ಚುಮೆಚ್ಚು. ನಗುಮೊಗದ ಬುದ್ಧನ ವಿಗ್ರಹ ಮನೆಯಲ್ಲಿದ್ದರೆ ಒಳಿತು ಎಂಬ ನಂಬಿಕೆಯಿದೆ. ದಪ್ಪ ಹೊಟ್ಟೆಯ, ನಗುಮುಖದ, ಕುಳ್ಳ ದೇಹದ ವ್ಯಕ್ತಿಯೊಬ್ಬ ದೊಡ್ಡ ಗಂಟನ್ನು ಹೊತ್ತಿರುವ ಬೊಂಬೆ ಯಾರಿಗೆ ಇಷ್ಟವಾಗುವುದಿಲ್ಲ. ಈಗ ಬೇರೆ ಬೇರೆ ಅವತಾರಗಳಲ್ಲಿಯೂ ನಗುವ ಬುದ್ಧ ಸಿಗುತ್ತಾನೆ. ಎರಡೂ ಕೈ ಎತ್ತಿ ಜೋರಾಗಿ ನಗುತ್ತಿರುವ ಬೊಂಬೆಯ ರೂಪದಲ್ಲೂ ಸಿಗುತ್ತದೆ. ಈತನಿಗೆ ನಗುವ ಬುದ್ಧ ಎಂದು ಹೆಸರಿಟ್ಟಿದ್ದು ಚೀನೀಯರು.

ಈ ನಗುವ ಬುದ್ಧ ಕಲ್ಪನೆಯ ಕೃತಿಯಲ್ಲ. ಈತ ಝೆನ್ ಗುರು ಹೋಟಿ. ಅವನು ತಾಂಗ್ ವಂಶಸ್ಥರ ಆಳ್ವಿಕೆಯ ಕಾಲದಲ್ಲಿ ಬದುಕಿದ್ದ. ಅವನಿಗೆ ತಾನು ಝೆನ್ ಗುರು ಎಂದು ಹೇಳಿಕೊಳ್ಳುವ ಬಯಕೆಯಿರಲಿಲ್ಲ. ತನ್ನ ಸುತ್ತ ಶಿಷ್ಯರು ಸೇರಬೇಕೆಂಬ ಹಂಬಲ ಕೂಡ ಇರಲಿಲ್ಲ.

ಯಾವಾಗಲೂ ಹೆಗಲ ಮೇಲೆ ಬಟ್ಟೆಯ ಗಂಟೊಂದನ್ನು ಹೊತ್ತು ಬೀದಿಗಳಲ್ಲಿ ನಡೆಯುತ್ತಿದ್ದ. ಅದರಲ್ಲಿ ಮಿಠಾಯಿ, ಹಣ್ಣು, ಮುಂತಾದ ತಿನಿಸುಗಳಿರುತ್ತಿದ್ದವು. ತನ್ನನ್ನು ಸುತ್ತುವರಿದು ಆಟವಾಡುವ ಮಕ್ಕಳಿಗೆ ಅವುಗಳನ್ನು ಹಂಚಿ ಕಾಲ ಕಳೆಯುತ್ತಿದ್ದ.

Zen Stories Laughing Buddha Hotei Happy Chinaman

ಝೆನ್ ಪಂಥದ ಅನುಯಾಯಿ ಯಾರಾದರೂ ಕಂಡರೆ ಕೂಡಲೇ ಕೈ ಚಾಚಿ 'ನನಗೆ ಒಂದು ಕಾಸು ಕೊಡಿ' ಎಂದು ಹಿಂಜರಿಕೆಯಿಲ್ಲದೆ ಕೇಳುತ್ತಿದ್ದ. ದೇವಾಲಯಕ್ಕೆ ಮರಳಿ ಇತರರಿಗೆ ಪಾಠ ಹೇಳಿಕೊಡು ಎಂದು ಯಾರಾದರೂ ಕೇಳಿದರೂ ಆತ ಮತ್ತೆ ಕೈ ಚಾಚಿ "ಕಾಸು ಕೊಡಿ" ಎನ್ನುತ್ತಿದ್ದ.

ಹೀಗೇ ಒಂದು ದಿನ ತನ್ನ ಆಟ-ಕೆಲಸದಲ್ಲಿ ಆತ ತೊಡಗಿಕೊಂಡಿದ್ದ. ಆಗ ಇನ್ನೊಬ್ಬ ಝೆನ್ ಗುರು ಅಲ್ಲಿಗೆ ಬಂದು "ಝೆನ್‌ನ ಮಹತ್ವವೇನು?" ಎಂದು ಹೋಟಿಯನ್ನು ಕೇಳಿದ.

ಹೋಟಿ ಥಟ್ಟನೇ ತನ್ನ ಹೆಗಲಮೇಲಿದ್ದ ಗಂಟನ್ನು ನೆಲಕ್ಕೆ ಹಾಕಿ ಮೌನವಾಗಿ ನಿಂತ. ಮೌನವೇ ಅವನ ಉತ್ತರವಾಗಿತ್ತು.

'ಮುಂದೆ', ಮತ್ತೊಬ್ಬ ಕೇಳಿದ, 'ಝೆನ್ ಸಾಕ್ಷಾತ್ಕಾರವಾಗುವುದು ಎಂದರೇನು?'.

ನಗುವ ಬುದ್ಧ ಹೋಟಿ ಗಂಟನ್ನು ಮತ್ತೆ ಭುಜದ ಮೇಲೆ ಇರಿಸಿಕೊಂಡು ನಗುನಗುತ್ತಾ ಅಲ್ಲಿಂದ ಹೊರಟ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+