ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತ್ತಲಿನಲ್ಲಿ ಲಾಟೀನು ಹಿಡಿದು ಹೊರಟ ಕುರುಡ ಮತ್ತು ಬೆಳಕು

|
Google Oneindia Kannada News

ಅಂಧನೊಬ್ಬ ತನ್ನ ಸ್ನೇಹಿತನ ಮನೆಯಲ್ಲಿ ಕೆಲವು ದಿನ ಉಳಿದುಕೊಂಡಿದ್ದ. ಬಳಿಕ ತನ್ನ ಊರಿಗೆ ರಾತ್ರಿ ವೇಳೆ ಪ್ರಯಾಣ ಆರಂಭಿಸಿದ. ಕತ್ತಲ ರಾತ್ರಿಯ ಪ್ರಯಾಣವೆಂದು ಸ್ನೇಹಿತ ಆತನಿಗೆ ಲಾಟೀನನ್ನು ನೀಡಿದ.

ಜಪಾನಿನಲ್ಲಿ ಹಿ೦ದಿನ ಕಾಲದಲ್ಲಿ ಜ೦ಬೂ ಮತ್ತು ಕಾಗದದಿ೦ದ ಮಾಡಿದ ಲಾಟೀನಿನ ಒಳಗಡೆ ಇರಿಸಿದ ಮೇಣದಬತ್ತಿಯನ್ನು ಬಳಸುತ್ತಿದ್ದರು.

ಸಮಸ್ಯೆಗೆ ಆತುರದ ಪರಿಹಾರ ಹುಡುಕಿದರೆ ಏನಾಗುತ್ತದೆ? ಈ ಕಥೆ ಓದಿಸಮಸ್ಯೆಗೆ ಆತುರದ ಪರಿಹಾರ ಹುಡುಕಿದರೆ ಏನಾಗುತ್ತದೆ? ಈ ಕಥೆ ಓದಿ

ಆದರೆ ಅದಕ್ಕೆ ಕುರುಡ ಮಿತ್ರ ಆಕ್ಷೇಪ ವ್ಯಕ್ತಪಡಿಸಿದ. 'ನನಗೆ ಲಾಟೀನು ಬೇಕಾಗಿಲ್ಲ, ಕತ್ತಲೆ-ಬೆಳಕು ಎರಡೂ ನನಗೆ ಒಂದೇ' ಎ೦ದ.

Zen Stories A Blind Man And The Lamp Light

'ನಿನ್ನ ದಾರಿ ಕಂಡುಕೊಳ್ಳಲು ನಿನಗೆ ಲಾಟೀನು ಬೇಕಾಗಿಲ್ಲ ಎನ್ನುವುದು ನನಗೆ ಗೊತ್ತು. ಆದರೆ ನಿನ್ನ ಬಳಿ ಉರಿಯುವ ಲಾಟೀನ್ ಇಲ್ಲದಿದ್ದರೆ ಯಾರಾದರೂ ನಿನಗೆ ಡಿಕ್ಕಿ ಹೊಡೆಯಬಹುದು. ಅದಕ್ಕೇ ನೀನು ಇದನ್ನು ತೆಗೆದುಕೊಳ್ಳಲೇಬೇಕು' ಎಂದು ಒತ್ತಾಯಿಸಿದ.

ದಿನದ ಝೆನ್ ಕಥೆ: ಗುರುವಿನ 'ವಿಷದ ಬಾಟಲಿ' ಕಥೆದಿನದ ಝೆನ್ ಕಥೆ: ಗುರುವಿನ 'ವಿಷದ ಬಾಟಲಿ' ಕಥೆ

ಸರಿ ಎಂದು ಒಪ್ಪಿಕೊಂಡ, ಕುರುಡ ಮಿತ್ರ ಲಾಟೀನು ಹಿಡಿದು ತನ್ನ ಊರಿನತ್ತ ಹೊರಟ. ಸ್ವಲ್ಪ ದೂರ ಹೋಗುವಾಗಲೇ ಯಾರೋ ಅಪರಿಚಿತ ಆತನಿಗೆ ದಿಢೀರನೇ ಡಿಕ್ಕಿ ಹೊಡೆದೇ ಬಿಟ್ಟ.

'ನೀನು ಯಾವ ಎಲ್ಲಿಗೆ ಹೋಗುತ್ತಿದ್ದೀಯ ಎ೦ಬ ಪರಿವೆ ಬೇಡವಾ? ಈ ಲಾಟೀನು ನಿನಗೆ ಕಾಣಿಸಲಿಲ್ಲವೇ?' ಎಂದು ಕುರುಡ ಕೋಪದಿಂದ ಅಪರಿಚಿತನಿಗೆ ಕೇಳಿದ.

ದಿನದ ಝೆನ್ ಕಥೆ: ದಂಡನಾಯಕನಿಗೆ ಗುರುವಿನ ಸವಾಲುದಿನದ ಝೆನ್ ಕಥೆ: ದಂಡನಾಯಕನಿಗೆ ಗುರುವಿನ ಸವಾಲು

ಆ ಕಡೆಯಿಂದ ಅಪರಿಚಿತ ಶಾಂತನಾಗಿಯೇ ಪ್ರತಿಕ್ರಿಯಿಸಿದ, 'ಸಹೋದರನೇ, ನಿನ್ನ ಲಾಟೀನ್ ಆರಿ ಹೋಗಿದೆ!'

ನಾವು ಸಾಗುವ ದಾರಿಯಲ್ಲಿ ಎಲ್ಲವೂ ಸರಿ ಇದೆ ಎಂಬ ಭ್ರಮೆಯಲ್ಲಿ ನಡೆಯವವರು ತಮ್ಮೊಳಗಿನ ಮತ್ತು ಹೊರಗಿನ ತಪ್ಪುಗಳನ್ನು ಗಮನಿಸಿರುವುದಿಲ್ಲ. ಬೆಳಕೆನ್ನುವುದು ಬಾಹ್ಯದಲ್ಲಿಯೂ ಪ್ರಜ್ವಲಿಸಬೇಕು, ಒಳಗೂ ನಂದಬಾರದು.
(ಸಂಗ್ರಹ)

English summary
Zen Story of the day: A blind man went back to his hometown with a lantern in the night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X