ಬ್ರಯಾನ್ ಡೈಸನ್-ನ ಮೂವತ್ತು ಕ್ಷಣದ ಭಾಷಣ
"ನಿಮ್ಮ ಬದುಕನ್ನು ಒಂದು ಆಟದಂತೆ ಊಹಿಸಿಕೊಳ್ಳಿ. ಈ ಆಟದಲ್ಲಿ ನೀವು ಸರ್ಕಸ್-ನಲ್ಲಿ ಮಾಡುವಂತೆ ಐದು ಚೆಂಡುಗಳನ್ನು ಗಾಳಿಯಲ್ಲಿ ತೂರುತ್ತಾ, ಕೈಯಲ್ಲಿ ಕ್ಯಾಚ್ ಹಿಡಿಯುತ್ತಿದ್ದೀರಿ. ಒಂದೊಂದು ಚೆಂಡನ್ನು ಕೆಲಸ, ಕುಟುಂಬ, ಆರೋಗ್ಯ, ಸ್ನೇಹಿತರು ಮತ್ತು ನಿಮ್ಮ ಚೈತನ್ಯ ಎಂದು ಕಲ್ಪಿಸಿಕೊಳ್ಳಿ.
ಈ ಆಟವಾಡುತ್ತಾ, ನೀವು ಬೇಗನೆ ಅರಿತುಕೊಳ್ಳುವ ಅಥವಾ ಅರಿತುಕೊಳ್ಳಬೇಕಾದ ವಿಷಯವೆಂದರೆ ನಿಮ್ಮ ಕೆಲಸವೆಂಬೋ ಚೆಂಡು, ರಬ್ಬರಿನ ಚೆಂಡು, ಅದು ಕೆಳಗೆ ಬಿದ್ದರೂ ಮತ್ತೆ ಎತ್ತರಕೆ ಪುಟಿಯಬಲ್ಲದು. ಆದರೆ ಕುಟುಂಬ, ಆರೋಗ್ಯ, ಸ್ನೇಹಿತರು ಮತ್ತು ನಿಮ್ಮ ಚೈತನ್ಯವೆಂಬೊ ಚೆಂಡುಗಳು ಗಾಜಿನಿಂದ ಮಾಡಿರೋ ಚೆಂಡುಗಳು, ಒಮ್ಮೆ ಕೆಳಗೆ ಬಿದ್ದರೆ ಫಿನಿಶ್! ಮತ್ತೆ ಸರಿಪಡಿಸಲಾಗದಷ್ಟು ಒಡೆದುಹೋಗುತ್ತದೆ, ಚೂರಾಗಿಹೋಗುತ್ತದೆ ಅಥವಾ ವಿರೂಪಗೊಳ್ಳುತ್ತವೆ. ಏನಾದರೂ ಅವು ಒಮ್ಮೆ ಕೆಳಗೆ ಬಿದ್ದರೆ ಮೊದಲಿನ ರೂಪದಲ್ಲಿ ಉಳಿಯುವುದಿಲ್ಲ.
ಇದನ್ನು ನೀವು ಆದಷ್ಟು ಬೇಗ ಅರ್ಥಮಾಡಿಕೊಳ್ಳಬೇಕು ಮತ್ತು ತುಂಬಾ ಜತನದಿಂದ ಕುಟುಂಬ, ಆರೋಗ್ಯ, ಸ್ನೇಹಿತರು ಮತ್ತು ನಿಮ್ಮ ಚೈತನ್ಯವನ್ನು ಕಾಪಾಡಿಕೊಳ್ಳಬೇಕು."

ಆಫೀಸಿನ ಸಮಯದಲ್ಲಿ ತುಂಬಾ ದಕ್ಷತೆಯಿಂದ ಕೆಲಸ ಮಾಡಿ, ಸರಿಯಾದ ಸಮಯಕ್ಕೆ ಆಫೀಸಿಗೆ ಹೋಗಿ, ಸಂಪೂರ್ಣ ಸಾಮರ್ಥ್ಯ ಬಳಸಿ ಕೆಲಸ ಮುಗಿಸಿ ಮತ್ತು ಸಮಯಕ್ಕೆ ಸರಿಯಾಗಿ ಆಫೀಸಿನಿಂದ ಹೊರಡಿ. ನಿಮ್ಮ ಕುಟುಂಬಕ್ಕಾಗಿ, ಸ್ನೇಹಿತರಿಗಾಗಿ, ನಿಮ್ಮ ಹವ್ಯಾಸಗಳಿಗಾಗಿ ನಿಮ್ಮ ಸಮಯ ಮೀಸಲಿಡಿ. ಮುಖ್ಯವಾಗಿ ನಿಮ್ಮ ದೇಹದ ಅವಶ್ಯಕತೆಗೆ ತಕ್ಕಂತೆ ವಿರಮಿಸಿ, ಚೆನ್ನಾಗಿ ನಿದ್ದೆ ಮಾಡಿ.
ನೆನಪಿಡಿ, ಜೀವನ ಮೌಲ್ಯಗಳಿಗೆ ಬೆಲೆ ಬರುವುದು, ನೀವು ಅವುಗಳನ್ನು ಗೌರವಿಸಿದಾಗ, ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ.
***
ನಮ್ಮ ಜೀವನದಲ್ಲಿ ಯಾವುದು ಮುಖ್ಯ, ಯಾವುದರ ಬೆಲೆ ಎಷ್ಟು ಎಂಬ ಮರು-ಮೌಲ್ಯಮಾಪನ, ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಬ್ರಯಾನ್ ಡೈಸನ್-ನ ಮಾತುಗಳಂತೂ ನಮಗೆ ಮಾರ್ಗದರ್ಶನಕ್ಕೆ ದಾರಿದೀಪವಾಗಿ ಇದ್ದೇ ಇವೆ. ಹೆಚ್ಚು ತಡಮಾಡದೆ ತಣ್ಣಗೆ ಕುಳಿತು ನಮ್ಮ ಜೀವನದ ಅಗತ್ಯಗಳ ವಿಮರ್ಶೆ ಮಾಡುವ ಶುಭಸಂಕಲ್ಪ ಮಾಡೋಣವೇ? [ಲೇಖಕರ ಈಮೇಲ್ : [email protected]] [connect with Gunamukha on facebook : https://www.facebook.com/#!/gunamukha]
ಶುಭಸಂಕಲ್ಪ - ನೋವ್ವೆ ಅನಾರೋಗ್ಯ ಸಂತೋಷವೇ ಆರೋಗ್ಯ, ಶುಭಸಂಕಲ್ಪದೊಂದಿಗೆ ಗುಣಮುಖರಾಗುವುದೇ ಭಾಗ್ಯ!
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications