ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುದ್ಧ ಮತ್ತು ಶಾಂತಿ!ಕಾಲಿನ ಗಾಯ ಕೆರೆದುಕೊಳ್ಳುವುದರಲ್ಲಿ ಲೋಕ ಕಲ್ಯಾಣವಿದೆ!

By Staff
|
Google Oneindia Kannada News


ಬೆರಗುಗೊಳಿಸುವ ಎಷ್ಟೋ ಸಂಗತಿಗಳು ಎಲ್ಲಿಂದ ಬೇಕಾದರೂ ಬರಬಹುದು. ಎಂದೋ ಓದಿದ ದಿನಪತ್ರಿಕೆಯಾಳಗಿನ ಸುದ್ದಿ, ಪುಸ್ತಕದೊಳಗಿನ ಪಾತ್ರಗಳು, ಎಂದೋ ನೋಡಿದ ಸಿನಿಮಾದ ಘಟನೆಗಳು ಅಸ್ಪಷ್ಟವಾದರೂ ನಮ್ಮನ್ನು ಈಗಲೂ ಕಾಡುತ್ತಿರುತ್ತವೆ! ಅವುಗಳನ್ನು ನಮ್ಮಗಳ ಮಾತಿನಲ್ಲಿ ಬರೆಯೋಣ... ಅವುಗಳ ಜನ್ಮಕ್ಕೆ ಕಾರಣರಾದ ಜನ್ಮದಾತನಿಗೆ ಇಲ್ಲಿಂದಲೇ ನಮಿಸೋಣ. ಇಂತ ಪುಟ್ಟ ಬೆರಗುಗಳನ್ನು ನಮಗೆ ಕಳುಹಿಸಿ. -ಸಂಪಾದಕ.

War and Peace A short story by Natesh Babu H Cಅವನಿನ್ನೂ ಯುವಕ. ಆಗ ತಾನೇ ಮೀಸೆ ಚಿಗುರುತ್ತಿದೆ. ಕಣ್ಣುಗಳ ತುಂಬ ಆದರ್ಶ, ಸಿದ್ಧಾಂತಗಳು ಪ್ರತಿಧ್ವನಿಸುತ್ತಿವೆ. ಲವಲವಿಕೆಯಿಂದ ಪುಟಿಯುತ್ತಿದ್ದಾನೆ. ಒಂದೇ ನೋಟಕ್ಕೆ ಎಂತವರನ್ನು ಬೇಕಾದರೂ ಆತ ಸೆಳೆಯಬಲ್ಲ.

‘ಹೇಳಿ ಸಾರ್‌ ಪ್ರಪಂಚದಲ್ಲಿ ಯುದ್ಧವೇ ಇರಬಾರದು ಅಂದ್ರೆ ಏನ್‌ ಮಾಡಬೇಕು?’ -ಈ ಪ್ರಶ್ನೆಯನ್ನು ಬಹಳ ಜವಾಬ್ದಾರಿಯಿಂದಲೇ ಕೇಳುತ್ತಿದ್ದಾನೆ. ಸಮಾಧಾನಕ್ಕಾಗಿ ಆತನ ಮನಸ್ಸು ಚಡಪಡಿಸುತ್ತಿದೆ. ಇದಾವುದರ ಪರಿವೇ ಇಲ್ಲದಂತೆ, ನಾಡಿನ ಚಿಂತಕ, ಪ್ರಜ್ಞಾವಂತ ಬುದ್ಧಿಜೀವಿ, ಕಾಲಿನ ಗಾಯ ಕೆರೆದುಕೊಳ್ಳುತ್ತಿದ್ದಾನೆ!

‘ಹೇಳಿ ಸಾರ್‌, ಎಲ್ಲರೂ ಧರ್ಮಗ್ರಂಥಗಳನ್ನು ಓದಿದರೆ ಯುದ್ಧಗಳು ನಿಲ್ಲಬಹುದಲ್ವಾ... ಪ್ರೀತಿ ಪ್ರೇಮವನ್ನು ಹೃದಯದ ತುಂಬ ತುಂಬಿಕೊಂಡರೆ ಯುದ್ಧಕ್ಕೆಲ್ಲಿ ಜಾಗವಿದೆ. ಹೇಳಿ ಸಾರ್‌ ನಿಮ್ಮ ಅಭಿಪ್ರಾಯ ನಮಗೆ ಮುಖ್ಯ. ನಿಮ್ಮ ಮಾತಿನ ಮೇಲೆ ಜಗತ್ತಿನ ಭವಿಷ್ಯ ನಿಂತಿದೆ...’ ಯುವಕ ಅವನ ಮುಖವನ್ನು ನೋಡುತ್ತಿದ್ದ.

ಒಂದು ಸಣ್ಣ ಮುಗುಳ್ನಗೆ ಸೂಸಿದ ಆತ ಮತ್ತೆ ತನ್ನ ಕೆಲಸದಲ್ಲಿ ಮಗ್ನನಾದ. ಪಟ್ಟು ಬಿಡದ ಉಡದಂತೆ ಮತ್ತೆ ಯುವಕ ಅದೇ ಪ್ರಶ್ನೆಯನ್ನು ಕೇಳಿದ. ‘ನೀವು ಹೇಳಲೇಬೇಕು ಸಾರ್‌. ನನ್ನ ಈ ಪ್ರಶ್ನೆಯ ಹಿಂದೆ ಮನುಕುಲದ ಕಾಳಜಿಯಿದೆ. ಸಾಕಷ್ಟು ಓದಿಕೊಂಡಿರುವ, ತಿಳಿವಳಿಕೆ ಹೊಂದಿರುವ, ಜೊತೆಗೆ ಹಿರಿಯರೂ ಆದ ನಿಮ್ಮ ಮಾರ್ಗದರ್ಶನ ಸಮಾಜಕ್ಕೆ ಬೇಕು. ಹೇಳಿ ಸಾರ್‌ ಯುದ್ಧಗಳು ಇಲ್ಲದಂತಾಗಲೂ ಏನಾಗಬೇಕು?’

ಕೊನೆಗೆ ಬೇಸತ್ತವನಂತೆ ಅವನು ಬಾಯಿಬಿಟ್ಟ -‘ನೋಡಯ್ಯಾ ಜಗತ್ತಿನಲ್ಲಿ ಯುದ್ಧವೇ ಆಗಬಾರದು ಆಂದ್ರೆ ಒಂದೇ ಉಪಾಯ. ಎಲ್ಲರಿಗೂ ಚರ್ಮದ ಕಾಯಿಲೆ ಬರಬೇಕು. ನನ್ನಂತೆಯೇ ಕಾಲು ಕೆರೆದುಕೊಳ್ಳುತ್ತಾ ಸುಖ ಪಡೆಯಬೇಕು. ಕೆರೆಯೋ ರಗಳೆ ಮುಂದೆ ಯುದ್ಧ ಮಾಡೋಕೆ, ಯುದ್ಧದ ಬಗ್ಗೆ ಯೋಚನೆ ಮಾಡೋಕೆ ಜನಕ್ಕೆ ಟೈಮೆಲ್ಲಿ ಸಿಗುತ್ತೆ ಹೇಳು?’

ಆಗ ಯುವಕನ ಮುಖದಲ್ಲಿ ಮಂದಹಾಸ. ಸಾವಿರ ಕ್ಯಾಂಡಲ್‌ ಬಲ್ಬುನಂತೆ ಅವನ ಮುಖದಲ್ಲಿ ಬೆಳಕಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X