Get Updates
Get notified of breaking news, exclusive insights, and must-see stories!

"ದಿ ಕಾಮನ್ ಮ್ಯಾನ್ ಸರ್ಚ್": ಸ್ವಾತಂತ್ರ್ಯ ದಿನದ ಕವನ

ಎಪತ್ತರ ಸ್ವಾತಂತ್ರ್ಯ ಸಂಭ್ರಮದಲ್ಲಿ
ಹುಡುಕುತ್ತಿದ್ದಾನೆ
ಕಾಮನ್ ಮ್ಯಾನ್,
'ಸ್ವಚ್ಛ ಭಾರತ್',
ನದಿ ಕೆರೆಗಳ ಕುಲುಷಿತ ನೀರಿನಲ್ಲಿ,
ನಗರಗಳ ವಾಯು ಮಾಲಿನ್ಯದಲ್ಲಿ,
ಹಳ್ಳಿಗಳ ಬಯಲು ಶೌಚಾಲಯಗಳಲ್ಲಿ.

ಎಪತ್ತರ ಸ್ವಾತಂತ್ರ್ಯ ಸಂಭ್ರಮದಲ್ಲಿ
ಹುಡುಕುತ್ತಿದ್ದಾನೆ
ಕಾಮನ್ ಮ್ಯಾನ್,
'ಜನ್ ಧನ್'
ತೂತಾದ ಕಿಸೆಗಳಲ್ಲಿ,
ಉಳಿತಾಯವಿಲ್ಲದ ಬ್ಯಾಂಕ್ ಖಾತೆಗಳಲ್ಲಿ,
ಸರಕಾರದಿಂದ ಬಾರದಿರುವು ಪರಿಹಾರದಲ್ಲಿ.

Poem titled 'The common man search' on 71st Indian independance day

ಎಪತ್ತರ ಸ್ವಾತಂತ್ರ್ಯ ಸಂಭ್ರಮದಲ್ಲಿ
ಹುಡುಕುತ್ತಿದ್ದಾನೆ
ಕಾಮನ್ ಮ್ಯಾನ್,
'ಭೇಟಿ ಬಚಾವ್ ಬೇಟಿ ಪಡಾವ್'
ಹತ್ಯೆಯಾದ ಭ್ರೂಣಗಳಲ್ಲಿ,
ಅತ್ಯಾಚಾರಕ್ಕೊಳಗಾದ ಹೆಣ್ಣುಗಳಲ್ಲಿ,
ವರದಕ್ಷಿಣೆ ಪೀಡಿತ ಸಂತ್ರಸ್ತೆಯರಲ್ಲಿ,

ಎಪತ್ತರ ಸ್ವಾತಂತ್ರ್ಯ ಸಂಭ್ರಮದಲ್ಲಿ
ಹುಡುಕುತ್ತಿದ್ದಾನೆ
ಕಾಮನ್ ಮ್ಯಾನ್,
'ಅನ್ನ ಭಾಗ್ಯ'
ಬಡವರ ಬೆನ್ನಿಗಂಟಿದ ಹೊಟ್ಟೆಗಳಲ್ಲಿ,
ಶ್ರೀಮಂತರು ಉಂಡು ಬಿಸಾಡಿದ ಎಲೆಗಳಲ್ಲಿ,
ಕಾಳಧನಿಕರ ಅಕ್ರಮ ದಾಸ್ತಾನಿನಲ್ಲಿ.

ಎಪತ್ತರ ಸ್ವಾತಂತ್ರ್ಯ ಸಂಭ್ರಮದಲ್ಲಿ
ಹುಡುಕುತ್ತಿದ್ದಾನೆ
ಕಾಮನ್ ಮ್ಯಾನ್,
'ಸಾಲ ಮನ್ನಾ'.
ಆತ್ಮಹತ್ಯೆಗೊಳಗಾದ ರೈತರ ಹೆಣಗಳಲ್ಲಿ,
ರೈತ ವಿಧವೆಯರ ಗೋಳಿನ ಬಾಳಿನಲ್ಲಿ,
ಅನಾಥರಾದ ಮಕ್ಕಳ ಕಣ್ಣೀರಿನಲ್ಲಿ.

ತಾನೇ ಆರಿಸಿದ ರಾಜಕಾರಣಿಗಳ ದರ್ಪ ದೌಲತ್ತಿನಲ್ಲಿ,
ಅವರ ದೌರ್ಜನ್ಯ ದಬ್ಬಾಳಿಕೆಯ ಆಡಳಿತದಲ್ಲಿ,
ದನಿಯೆತ್ತಿ ಕೇಳಲು ಪಸೆಯಿಲ್ಲ ಅವನಿಗೆ,
ಏನಾದವು? ಯಾರಿಗಾದವು?
ನಿಮ್ಮ
'ಸಬ್ ಕಾ ಸಾತ್, ಸಬ್ ಕಾ ವಿಕಾಸ್'
'ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು'
ಘೋಷಣೆಗಳು?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+