ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ರತ್ನ ಸರ್ ಎಂವಿ.. ಬಗ್ಗೆ ಕವನ

By ನಾಗೇಶ, ಮೈಸೂರು
|
Google Oneindia Kannada News

ಹೆಸರಲ್ಲೆ ತುಂಬಿ ತುಳುಕೊ ಶಿಸ್ತೆ
ಬದುಕಿರುವಾಗಲೆ ಆಗಿ ದಂತಕಥೆ
ನಮ್ಮ ಶತಾಯುಷಿ ವಿಶ್ವೇಶ್ವರಯ್ಯ
ಹುಟ್ಟಿಗೆ ಅಭಿಯಂತರ ದಿನ ನ್ಯಾಯ ||

ಮೋಕ್ಷಗುಂಡುಂ ವಿಶ್ವೇಶ್ವರಯ್ಯ ಹಟ್ಟಿ
ಕೋಲಾರದ ಮುದ್ದೇನಹಳ್ಳಿಯ ಜಟ್ಟಿ
ಬಡತನಕು ಶಿಸ್ತ ಲೇಪಿಸಿದ ಜೀವನ
ಕಾಪಿಟ್ಟ ದಿವಾನ, ವಿದ್ಯಾರ್ಥಿ ವೇತನ ||

ಸಿವಿಲೆಂಜಿನಿಯರುಗಾರಿಕೆ ಬೊಂಬಾಯಿ
ಸರ್ಕಾರವೆ ಬೆರಗು ಬಿಟ್ಟಂತೆ ಬಿಟ್ಟ ಬಾಯಿ
ಸ್ವನಿಯಂತ್ರಿ ಖಡಕ್ವಾಸ್ಲಾ ಕವಾಟ ಬೆಕ್ಕಸ
ಸುಕ್ಕೂರ ನೀರು ಚರಂಡಿ ವ್ಯವಸ್ಥೆ ಪರುಷ || [ವಿಶ್ವೇಶ್ವರಯ್ಯ ಜನ್ಮದಿನ: ಉಸಿರಾಡುವ ಅಂಚೆಚೀಟಿ ಕಂಡ ಕನ್ನಡಿಗ]

Bharat Ratna Mokshagundam SIR M Visvesvaraya Engineer's Day Poem

ಸ್ವಯಂಚಾಲಿತ ಜಲನಿಯಂತ್ರಿತ ದ್ವಾರದಾನ್ವೇಷಾ
ಏಡನ್ ನೀರ ಯೋಜನೆ ಹೈದ್ರಾಬಾದ್ ಪ್ರವಾಹ
ಪೇಟೆಂಟಿತ ಫ್ಲಡ್ ಗೇಟ್ ಗ್ವಾಲಿಯರ್ ಕೆಆರೆಸ್ಸುಗಳಲ್ಲಿ
ಗರಿಷ್ಠ ನೀರು ಶೇಖರಿಸಿಡೆ ಅಣೆಕಟ್ಟಿಗಾಗಿಸಿ ಖಯಾಲಿ ||

ಕಡೆಗೂ ಕರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಣ್ಣು
ಮನಗಂಡು ಪ್ರತಿಭೆ ಹೊರನಾಡಿನ ಭಾಗ್ಯ ಸಾಕಿನ್ನು
ಮುಖ್ಯ ಎಂಜಿನಿಯರಾದರು ತಾಯ್ನಾಡಿನ ದಿವಾನ
ಆರ್ಥಿಕ ಅಭಿವೃದ್ಧಿ ಸರ್ವತೋಮುಖ ಪ್ರಗತಿ ಯಾನ ||

ಮೈಸೂರ ವಿಶ್ವವಿದ್ಯಾಲಯ, ಭದ್ರಾವತಿಗೆ ಉಕ್ಕು
ಹಿಂದುಸ್ತಾನ್ ಏರೊನಾಟಿಕ್ಸು, ಮೈಸೂರು ಬ್ಯಾಂಕು
ನ್ಯಾಯ ವಿಧಾಯಕ ಸಭೆ, ಪ್ರಜಾ ಪ್ರತಿನಿಧಿ ಸಭೆಗೂ
ಅಡಿಪಾಯ ಹಾಕಿದ ಶಿಲ್ಪಿ, ಒಂದೆ ಎರಡೆ? ಪುನುಗು ||

ಶಿಕ್ಷಣ ಮಹತ್ವ ಅರಿತು ವಿದ್ಯಾಸಂಸ್ಥೆಗಳ ಸ್ಥಾಪಿಸುತ
ರೈಲುಬಂಡಿ ಹಳಿಗಳ, ನಾಡಿನತ್ತ ಬರಿಸಿದದೇ ಚಿತ್ತ
ಹೋಟೆಲು, ಪುಸ್ತಕ ಭಂಢಾರ, ಸಾಬೂನ ಕಾರ್ಖಾನೆ
ಮೈಸೂರ ವಾಣಿಜ್ಯ ಮಂಡಳಿ, ಕಾಗದ, ಗಂಧದ ಎಣ್ಣೆ ||

ಗ್ರಾಮೀಣ ನ್ಯಾಯಾಲಯ, ಗ್ರಾಮಪಂಚಾಯತಿ,ರೇಷ್ಮೆ
ಮಲೆನಾಡಭಿವೃದ್ಧಿ ಮಂಡಳಿ, ಚರ್ಮ ಹದ ಕಾರ್ಖಾನೆ
ಆರೇ ವರ್ಷಗಳ ಸಾಧನೆ, ಅರವತ್ತಕು ಆಗದ ಸಮಸ್ತ
ಕನ್ನಡಕೆ ಮೊದಲ ಭಾರತ ರತ್ನ, ಸರ್ ಎಂವಿ ದೈವದತ್ತ ||

ನೂರೆರಡು ವಸಂತಗಳು, ಶಿಸ್ತೇ ಪ್ರತಿ ಗಳಿಗೆ ಬದುಕಲು
ಕೇಳಿದ್ದರಂತವರ ತಲೆಯ ಸಾವಿನ ತರುವಾಯದಲೂ !
ನಾಡ ಸರ್ವಾಂಗೀಣ ಪ್ರಗತಿ, ಅಸ್ತಿಭಾರ ಹಾಕಿದ ರೀತಿ
ಬದುಕೆ ಅನ್ವರ್ಥನಾಮ, ನಮ್ಮ ನಡುವೆ ಬದುಕಿದ ಪ್ರಭೃತಿ ||

- ನಾಗೇಶ
(ಮಾಹಿತಿ ಕೃಪೆ: ಶೈಲಜಾ ಕೇಕಣಾಜೆಯವರ ಸರ್ ಎಂವಿ ಕುರಿತ ಬರಹದಿಂದ ಆಯ್ದುಕೊಂಡಿದ್ದು)

English summary
Bharat Ratna Mokshagundam SIR M Visvesvaraya Engineer's Day Poem by Nagesh Mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X