ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಟಗುಟ್ಟುವ ಮುದುಕಿಯ ಲೈಫ್ ಇಷ್ಟೇನಾ?

By * ವಿದ್ಯಾಶಂಕರ್ ಹರಪನಹಳ್ಳಿ
|
Google Oneindia Kannada News

Vidyashankar Harapanahalli
ಆಗ ನನಗಿನ್ನೂ ಹದಿನಾರು
ಅವ ಸಿಕ್ಕಿದ, ಕಣ್ಣಲ್ಲೇ ಮಾತು ನೂರಾರು
ನಕ್ಷತ್ರಗಳ ಕಿತ್ತು ಮುಡಿ ಮುಡಿಸುವ ಮಾತೇನು
ಆ ಆವೇಶ, ಪುಳಕ, ಆದರ್ಶ
ಆ ಬೆರಗು, ಆ ಮಧುರ ಅನುಭೂತಿ, ಆ ಸೊಬಗು

ಹೊಯ್! ನನಗೆ ಸಿಕ್ಕೆಬಿಟ್ಟ ನನ್ನ ರಾಜಕುಮಾರ!
ಇನ್ನೇನು ಉಳಿಯಲಿಲ್ಲ ಬದುಕಿನಲಿ
ಅನಂತ ಸಂತೋಷದ ವಿನಃ
ಧನ್ಯೋಸ್ಮಿ! ಧನ್ಯೋಸ್ಮಿ!

ಅದೃಷ್ಟವೋ ದುರಾದೃಷ್ಟವೋ ಆಗಿಹೋಯಿತು
ನನ್ನ ಮದುವೆ ಅವನ ಜೊತೆ
ಎಲ್ಲ ಸಂಭ್ರಮಕ್ಕೂ ಒಂದು ಕೊನೆಯುಂಟು
ಅನಂತ ಪುನಾರವರ್ತನೆಯ ಬದುಕು
ಮಕ್ಕಳು, ಅವರ ಓದು, ಮದುವೆ
ಆಸ್ತಿ ಲೆಕ್ಕಚಾರ, ಅವರ ಪ್ರಮೋಷನ್
ಅವ ದುಡಿತದಲಿ, ಬದುಕಿನ ಓಟದಲಿ ಹಣ್ಣಾದ
ಜೊತೆಗೆ ಬಿಪಿ, ಡೈಯಬಿಟಿಸ್ ಮತ್ತು ನನ್ನ ಮೆನೋಪಾಸ್

ಈಗ ಹಕ್ಕಿಗಳೆಲ್ಲ ಹಾರಿಹೋಗಿ
ಗೂಡಿನಲಿ ನಾವಿಬ್ಬರುಳಿದು ಕಣ್ತೆರೆದು ನೋಡಿದರೆ
ಅವ ಪಿಂಚಿಣಿಗಾಗಿ ಕಾಯುವ ಮುದುಕ
ನಾ ತರಕಾರಿ ಬೆಲೆ ಹೆಚ್ಚಾಯಿತೆಂದು ವಟಗುಟ್ಟುವ ಮುದುಕಿ

English summary
Confessions of an old lady; Manishada, a poem by Vidyashankar in Harapanahalli, Davanagere District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X