ಸುಖದ ಗಾಳಿ ಬೀಸುವ ಗಳಿಗೆ

ದುಃಖದ ಕೊಯಿಲು
ಕೊಯ್ಯುವಳು
ಬಿಸಿಲ ಹಾಡಿನ ಹುಯ್ಲು
ಚಂಚಲ ಕಣ್ಣೊಳಗೆ
ಹೃದಯದಲ್ಲಿದ್ದವನೀಗ
ದಾರಿ ಹೋಕನ ಹಾಗೆ!
ಹೋ! ಆತನ ಜೇಬಲಿ
ಹೂ ಕಣ್ಣಲಿ ಹನಿ
ನಕ್ಷತ್ರಗಳ ಸೋನೆ ಬೇರೆ
ಭಿನ್ನ ಹಾಸಿಗೆಗಳಲಿ
ದೂರ ನಿದ್ರೆಯ ಹೊರಳು
ವಿರಹಿ ಷಹನಾಯಿ
ನಾದದ ಮೊರೆ
ಸರಿದ ಕಾಲಕೆ
ಗಾಯಗಳಿಗೆ ಮುಲಾಮು ಬಳಿತ
ದಿರಿಸುಗಳಿಗೆ ತೇಪೆ ಹೊಲಿಗೆ
ಬಿರುಸು ಹೆಜ್ಜೆಗಳಿಗೆ ತಾಳ್ಮೆ ಪಾಠ
ಮೂಲೆಯಲಿ ಬರಲು ಕಡ್ಡಿಗೆ
ಬೆಂಕಿ ಬಸ್ಮ ಉರಿವ ಹಣೆಗೆ
ಕಾಣದ ಚಂಡಿ ಕೂಸಿಗೆ
ಈರ್ವರ ಚಾಚು ತೋಳು
ಪಾಪಪೀಡಿತ ಮನಸು
ಗಳನು ಸಂತಯಿಸು
ರಾತ್ರಿಯೇ, ಸಂತಯಿಸು












Click it and Unblock the Notifications