543025villageಬಾಳೆ ದಿಂಡಿನ ಪಲ್ಯ ಮತ್ತು ಕೋಸಂಬರಿ/recipe/palya/2006/191106beledindu_kosambari.htmlಬಾಳೆ ಎಂದರೆ ರುಚಿಯಾದ ಹಣ್ಣು, ಬಾಳೆಕಾಯಿ ಬಜಿ, ಬಾಳೆಕಾಯಿ ಚಿಪ್ಸು, ಬಾಳೆ ನಾರು, ಇನ್ನೂ ಏನೇನೋ ಮಾತ್ರ ಅಲ್ಲ. ಇನ್ನೂ ಒಂದಿದೆ. ಪ್ರಸಾದ ನಾಯಿಕ, ಬೆಂಗಳೂರು ಒಮ್ಮೆ ಏನಾಯಿತೆಂದರೆ, ಮನೆಯಲ್ಲಿ ಸಮಾರಾಧನೆ, ನೆಂಟರೊಬ್ಬರು ಬಂದು ನೇರವಾಗಿ ಒಂದು ಖಾಲಿ ಇದ್ದ ಬಾಳೆ ಎಲೆಯ ಮುಂದೆ ಪಕ್ವಾನ್ನ ಸೇವನೆಗೆ ಕುಳಿತುಕೊಂಡರು. ಅಷ್ಟರಲ್ಲಿ ಬಾಳೆ ಎಲೆ ತೆಗೆಯಲು ಮಹಿಳೆಯರಿಬ್ಬರು ಶುರು 6257http://kannada.oneindia.com/img/2009/07/27-baledindu1.jpg543025villageನನ್ನೂರು/literature/poem/2009/0821-my-village-kannada-poem-by-sheshagiri-jodidar.html* ಶೇಷಗಿರಿ ಜೋಡಿದಾರ್, ಬೆಂಗಳೂರು.ನನ್ನೂರು,ಉಚ್ಚರಿಸಲು ಬಾರದ ಗ್ರೀಕ್ ಪದಗಳಂತೆ,ಸಮಯಕ್ಕೆ ಸರಿಯಾಗಿ ಹೊರಡದ ಗಾದೆಗಳಂತೆ.ಹಾಗೇ, ಹೀಗೆ, ಅದೇ ಮತ್ತೆ, ಅದೇನೋ ಹೇಳ್ತಾರಲ್ಲ,ಎಂದೇ ಕೊನೆಗೊಳ್ಳುವ ಸಂಭಾಷಣೆಯಂತೆಪದಗಳಿಗೆ ಸಿಗದ ಭಾಷೆಯಂತೆ,ನನ್ನೂರಿಗೆ ನಾನೇ ಆಗಂತುಕ.ಕಡಲಡಿಯ ನಯವಾದ ಅಗ್ನಿಶಿಲೆ ಕಾಡುಬಂಡೆಗಳ ನಾಡು.ನವಿರಾದ ಉರುಟಾದ ವಿಚಿತ್ರ ಬಂಡೆಗಳ ಬರಡು ಬೀಡುಹಣ್ಣು ಅಂಗಡಿಯಲಿ ಜೋಡಿಸಿ,ಪೇರಿಸಿದ ಹಣ್ಣಿನ ಪಾಡು,ಬಣ್ಣ ಮಾತ್ರ ಬೇರೆ,ವಿವಿದ ನೆರಳುಗಳ ಬಿಸಿಲ ಮಾಡುಸುಪ್ತ ಜ್ವಾಲಾಮುಖಿ ಇಂದು 38768http://kannada.oneindia.com/img/2009/08/21-sheshagiri-jodidar1.jpg543025villageಬೆಂಗಳೂರು-ಮೈಸೂರು ಹೆದ್ದಾರಿ ಯಮಪುರಿಯ ರಹದಾರಿ/cj/thilakraj/2009/0914-bengaluru-mysuru-4-track-accident-zone.htmlಚನ್ನಪಟ್ಟಣ, ಸೆ. 14 : ಬೆಂಗಳೂರು ಮೈಸೂರು ಹೆದ್ದಾರಿ ಚತುಷ್ಪಥ ರಸ್ತೆಯಾಗಿ ಅದ್ಯಾವ ರಾಹುಕಾಲದಲ್ಲಿ ಬದಲಾಯಿತೋ ಏನೋ? ಚತುಷ್ಪಥ ಸಂಚಾರಕ್ಕೆ ಅವಕಾಶ ನೀಡಿದಾಗಿನಿಂದಲೂ ಈ ಹೆದ್ದಾರಿ ಮರಣಮೃದಂಗ ಬಾರಿಸುತ್ತಲೇ ಇದೆ. ಬೆಂಗಳೂರಿನಿಂದ ಮೈಸೂರಿಗೆ, ಮೈಸೂರಿನಿಂದ ಬೆಂಗಳೂರಿಗೆ ಪ್ರತಿನಿತ್ಯ ಈ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಇವುಗಳಿಗೆ ಹೆದ್ದಾರಿ ಪಕ್ಕದ ಗ್ರಾಮವಾಸಿಗಳು ಬಲಿಯಾಗುತ್ತಿರುವುದು ಮಾತ್ರ ದುರ್ದೈವದ ಸಂಗತಿಯಾಗಿದೆ.ಸೂರ್ಯೋದಯಕ್ಕೂ ಮುನ್ನ 39165http://kannada.oneindia.com/img/2009/09/14-cpt-accident1.jpg543025villageರೊಕ್ಕ ಬ್ಯಾಡ್ರೋಯಪ್ಪ, ಸೂರು ಕಟ್ಟಿಸಿಕೊಡ್ರಿ!/literature/my-karnataka/2009/1105-flood-tinthini-village-gulbarga-part4.htmlಮಧ್ಯವರ್ತಿಗಳ ತಡೆ:ಮಧ್ಯವರ್ತಿಗಳನ್ನು ತಡೆಯುವುದರಿಂದ ನಾವು ನಮ್ಮ ಕಾರ್ಯಗಳನ್ನು ನೇರವಾಗಿ ಸಂತ್ರಸ್ತರಿಗೆ ತಲುಪಿಸಬಹುದು. ಇದಕ್ಕೆ ಕೆಳಗಿನ ಅಂಶಗಳನ್ನು ಗಮನದಲ್ಲಿಡಬೇಕು,1. ಸ್ಥಳೀಯವಾಗಿ ಕೆಲಸ ಮಾಡುವ, ಸಂತ್ರಸ್ತರಿಗೆ ನಿಜಾವಾಗಿ ನೆರವಾಗುತ್ತಿರುವ ಸ್ವಯಂ-ಸೇವಕರು/ಸಂಘಗಳನ್ನೂ ಗುರುತಿಸುವುದು.2. ಹಣವನ್ನು ಮೂರನೇ ವ್ಯಕ್ತಿಗಳಿಗೆ ಕೊಡುವುದನ್ನು ನಿಲ್ಲಿಸಿ ನೆರವಾಗಿ ಅವರಿಗೆ ತಲುಪುವಂತೆ ನೋಡಿಕೊಳ್ಳುವುದು.3. ಆ ತಾಲೂಕಿನ ಬ್ಯಾಂಕ್ ನಲ್ಲಿ ಖಾತೆ ತೆರೆದು ಅದರ ಮುಖಾಂತರ ವ್ಯವಹಾರ ನಡೆಸುವುದು.4. ತಾಲೂಕಿಗೆ 40059http://kannada.oneindia.com/img/2009/11/05-tinthini-village4.jpg543025villageರೊಕ್ಕ ಬ್ಯಾಡ್ರೋಯಪ್ಪ, ಸೂರು ಕಟ್ಟಿಸಿಕೊಡ್ರಿ!/literature/my-karnataka/2009/1105-flood-tinthini-village-gulbarga-part3.htmlಸಂತ್ರಸ್ತರಿಗೆ ಬೇಕಿರುವುದು:ಇವರಿಗೆ ನಮ್ಮ ಹಣದ ಅವಶ್ಯಕತೆಗಿಂತಲೂ, ಬದುಕಲು ಶಾಶ್ವತವಾಗಿ ಆಸರೆ ಬೇಕಾಗಿದೆ. ಈಗಾಗಲೇ ಬಟ್ಟೆ, ಹಾಸು ಹೊದಿಕೆಗಳು, ಪಾತ್ರೆಗಳು ಬಂದಿದ್ದರೂ ಅವರ ಮುಂದಿನ ಜೀವನ ನಡೆಸಲು,1. ಶಾಶ್ವತವಾದ ಮನೆ.2. ಬೇಸಾಯ ಮಾಡಲು ಹಸುಗಳು. ಹಾಗು,3. ತಮ್ಮ ಜಮಿನುಗಳಿಗೆ ಪಂಪ್ ಸೆಟ್ ಸೌಲಭ್ಯ ಬೇಕಾಗಿದೆ.ಅಲ್ಲಿನ ಸ್ವಯಂಸೇವಾ ತಂಡದಿಂದ ದೊರಕಬಹುದಾದ ಸಹಾಯಗಳು:ಕಳೆದ ಬಾರಿಯ ರಾಜ್ಯೋತ್ಸವದ ಪ್ರಯುಕ್ತ ನಾವು ವನವಾಸಿ ಕಲ್ಯಾಣ 40060http://kannada.oneindia.com/img/2009/11/05-tinthini-village3.jpg555923sheshagiri jodidarನನ್ನೂರು/literature/poem/2009/0821-my-village-kannada-poem-by-sheshagiri-jodidar.html* ಶೇಷಗಿರಿ ಜೋಡಿದಾರ್, ಬೆಂಗಳೂರು.ನನ್ನೂರು,ಉಚ್ಚರಿಸಲು ಬಾರದ ಗ್ರೀಕ್ ಪದಗಳಂತೆ,ಸಮಯಕ್ಕೆ ಸರಿಯಾಗಿ ಹೊರಡದ ಗಾದೆಗಳಂತೆ.ಹಾಗೇ, ಹೀಗೆ, ಅದೇ ಮತ್ತೆ, ಅದೇನೋ ಹೇಳ್ತಾರಲ್ಲ,ಎಂದೇ ಕೊನೆಗೊಳ್ಳುವ ಸಂಭಾಷಣೆಯಂತೆಪದಗಳಿಗೆ ಸಿಗದ ಭಾಷೆಯಂತೆ,ನನ್ನೂರಿಗೆ ನಾನೇ ಆಗಂತುಕ.ಕಡಲಡಿಯ ನಯವಾದ ಅಗ್ನಿಶಿಲೆ ಕಾಡುಬಂಡೆಗಳ ನಾಡು.ನವಿರಾದ ಉರುಟಾದ ವಿಚಿತ್ರ ಬಂಡೆಗಳ ಬರಡು ಬೀಡುಹಣ್ಣು ಅಂಗಡಿಯಲಿ ಜೋಡಿಸಿ,ಪೇರಿಸಿದ ಹಣ್ಣಿನ ಪಾಡು,ಬಣ್ಣ ಮಾತ್ರ ಬೇರೆ,ವಿವಿದ ನೆರಳುಗಳ ಬಿಸಿಲ ಮಾಡುಸುಪ್ತ ಜ್ವಾಲಾಮುಖಿ ಇಂದು 38768http://kannada.oneindia.com/img/2009/08/21-sheshagiri-jodidar1.jpg555923sheshagiri jodidarಆಕಸ್ಮಿಕ/literature/poem/2009/1023-accident-sheshagiri-jodidar.htmlಕುಡಿವ ಮಜ್ಜಿಗೆಯಲಿ ನೆರೆತ ಗಡ್ಡದ ಮುದಿ ಕೂದಲು,ಮತ್ತೇರಿ ಕುಣಿದಾಗ ನಲಿದಾಡಿತು,ಸಜ್ಜಿಗೆಯ ಪರಾತದಲಿ ಕಳಚಿ ಬಿದ್ದ ಕಟ್ಟಿಸಿದ ಹಲ್ಲು,ಬಿಟ್ಟ ಬಾಯಿ ಸುರಿಸುವ ಜೊಲ್ಲು,ಕಂಡಾಗ....ಕೋಶ, ಜೀವಕೋಶಗಳ ಚಿತ್ಕಾರ,ಭಾರ,ಅರ್ಥವಿಲ್ಲದ ವ್ಯವಹಾರಜಿಗುಪ್ಸೆ ಅಪಾರ ಯಾವ ಮಮಕಾರ?ಯಾರ ಸಹಕಾರ?ಶ್ವಾಸವೇ ಬಲು ಭಾರ,ಮುಕ್ತ ಗಾಳಿಗೂ ಬಂದಿದೆ ಸಂಚಕಾರ.39833http://kannada.oneindia.com/img/2009/10/23-sheshagiri-jodidar1.jpg555923sheshagiri jodidarಕನ್ನಡ, ವಿಜ್ಞಾನದ ಡಬ್ಬಲ್ ಮರ್ಡರ್/literature/my-karnataka/2009/1026-god-save-kannada-medium-students.htmlನಮ್ಮ ಪ್ರೊಢಶಾಲೆಗಳಿಗೆ ಗೊತ್ತುಪಡಿಸಿರುವ ವಿಜ್ಞಾನ ಪಠ್ಯಗಳು ಇತ್ಲಕಡೆ ಕನ್ನಡವನ್ನೂ ಕಲಿಸುವುದಿಲ್ಲ ಅತ್ಲಕಡೆ ವಿಜ್ಞಾನವನ್ನೂ ಕಲಿಸುವುದಿಲ್ಲ. ಹಾಗಾಗಿ, ಕನ್ನಡ ಪ್ರೀತಿಯ ವಿಜ್ಞಾನ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ತಲೆ ಕೆಟ್ಟು ಉಪ್ಪಿಟ್ಟಾಗುತ್ತಿದೆ. ಶಿಕ್ಷಣ ಮಾಧ್ಯಮ ಕನ್ನಡವಾಗಿರಬೇಕು ಎಂದು ವಾದಿಸುವ ತಜ್ಞರು ಮತ್ತು ಪಠ್ಯ ಪುಸ್ತಕ ರಚಿಸುವ ಪಿತಾಮಹರು ಸ್ವಲ್ಪ ಈಕಡೆ ತಲೆಹಾಕಿ ಮಲಗಬೇಕಾಗಿಯೂ ವಿನಂತಿ- ಸಂಪಾದಕ.* ಶೇಷಗಿರಿ ಜೋಡಿದಾರ್, ಬೆಂಗಳೂರು"ಇದರ 39874http://kannada.oneindia.com/img/2009/10/26-maths-logo1.gif555923sheshagiri jodidarಕಲಿಕೆಗೆ ಸುಲಭವಾದ ಭಾಷೆಯನ್ನೇ ಬಳಸೋಣ/literature/my-karnataka/2009/1028-science-teaching-and-medium-of-instruction.htmlಯಾವುದು ಹೆಚ್ಚು ಪರಿಣಾಮಕಾರಿ, ಹೆಚ್ಚು ಸುಲಭ ಅದನ್ನೇ ಭಾಷೆಯನ್ನೇ ಬಳಸಬೇಕು. ಅದು ಕನ್ನಡ ಆಗಿದ್ದರೆ ಕನ್ನಡ, ಇಂಗ್ಲಿಷ್ ಆಗಿದ್ದರೆ ಇಂಗ್ಲಿಷ್, ಸಂಸ್ಕೃತ ಆಗಿದ್ದರೆ ಸಂಸ್ಕೃತ. ಈ ಹೇಳಿಕೆ ಮೂಲಕ ನಾನು ಸಂಸ್ಕೃತ ದ್ವೇಷಿಯೂ ಅಲ್ಲ, ಪ್ರತಿಯೊಂದು ಪೂರ್ತಿ ಕನ್ನಡೀಕರಣಗೊಳ್ಳಲಿ ಅನ್ನುವ ಹುಚ್ಚು ಆಸೆಯೂ ನನಗಿಲ್ಲ.* ವಸಂತ ಶೆಟ್ಟಿ, ಬೆಂಗಳೂರುನಮಸ್ಕಾರ ಶಾಮ್,ಹಿರಿಯರಾದ ಶೇಷಗಿರಿ ಜೋಡಿದಾರ್ ಅವರ ಲೇಖನಕ್ಕೆ ನನ್ನ 39910http://kannada.oneindia.com/img/2009/10/28-vasanth-shetty1.jpg213553kannada blogಹೊತ್ತಿಗೆ ರೂಪದಲ್ಲಿ ಏನ್ ಗುರು ಕಾಫಿ ಆಯ್ತಾ?/column/enguru/2009/0508-enguru-in-book-form.html2007ರಲ್ಲಿ ಬನವಾಸಿ ಬಳಗದ "ಏನ್ ಗುರು ಕಾಫಿ ಆಯ್ತಾ?" ಅಂಕಣಮಾಲೇನಾ ಶುರು ಮಾಡಲಾಯ್ತು. ಇದಕ್ಕೆ ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ, ಉತ್ತೇಜನ ನಿಮ್ಮಿಂದ ಸಿಕ್ಕಿದೆ. ಈ ಬರಹಗಳನ್ನು ಬರೀತಾ ಬರೀತಾನೇ ನಮ್ಮ ಚಿಂತನೆಗಳೂ ಸ್ಪಷ್ಟರೂಪ ತೆಗೆದುಕೊಳ್ಳುತ್ತಾ ಸಾಗಿದ್ದು ಸುಳ್ಳಲ್ಲ. ನಿಮ್ಮ ಸಹಕಾರ ಮತ್ತು ಅಭಿಮಾನದಿಂದ ಈ ಬ್ಲಾಗು ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಜನ ಓದುಗರನ್ನು ಮುಟ್ಟಿದೆ.ಆದ್ರೆ ನಾವು 36498http://kannada.oneindia.com/img/2009/05/08-enguru1.jpg213553kannada blogವಿರಹಿ ವಾಸುವಿನ 'ನನ್ನ ದೇವಕಿ' ಬ್ಲಾಗು/mixed-bag/blogs/2009/0715-nanna-devaki-jogula-kannada-serial-zeekannada.htmlಜೊತೆ ಇದ್ದಾಗ ತಿಳಿಯದೆ , ದೂರಾದಾಗ ಅರಿತರೇ ಪ್ರೀತಿಯ ಆರ್ದ್ರತೆ ಹೆಚ್ಚಂತೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್, ಚಾಟ್ ಲವ್ ಗಳ ಕಾಲದಾಟಿ ಈಗ ಬ್ಲಾಗ್ ಪ್ರೀತಿ ಶುರುವಾಗಿದೆ. ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಜೋಗುಳ'ದಲ್ಲಿ ಈ ಬ್ಲಾಗ್ ಮೂಲಕ ಪ್ರೇಮ ನಿವೇದನೆ, ವೇದನೆ, ಆಲಾಪನೆ,ಯಾತನೆ, ಸಂಗಮ ಎಲ್ಲವನ್ನು ಬಳಸಿದ್ದು ಹೊಸತನ ಎನಿಸಿತು. ಧಾರಾವಾಹಿಗಷ್ಟೇ ಮೀಸಲಾಗಿರದೇ 38008http://kannada.oneindia.com/img/2009/07/15-nannadevaki-blog1.jpg213553kannada blogನನ್ನೂರು/literature/poem/2009/0821-my-village-kannada-poem-by-sheshagiri-jodidar.html* ಶೇಷಗಿರಿ ಜೋಡಿದಾರ್, ಬೆಂಗಳೂರು.ನನ್ನೂರು,ಉಚ್ಚರಿಸಲು ಬಾರದ ಗ್ರೀಕ್ ಪದಗಳಂತೆ,ಸಮಯಕ್ಕೆ ಸರಿಯಾಗಿ ಹೊರಡದ ಗಾದೆಗಳಂತೆ.ಹಾಗೇ, ಹೀಗೆ, ಅದೇ ಮತ್ತೆ, ಅದೇನೋ ಹೇಳ್ತಾರಲ್ಲ,ಎಂದೇ ಕೊನೆಗೊಳ್ಳುವ ಸಂಭಾಷಣೆಯಂತೆಪದಗಳಿಗೆ ಸಿಗದ ಭಾಷೆಯಂತೆ,ನನ್ನೂರಿಗೆ ನಾನೇ ಆಗಂತುಕ.ಕಡಲಡಿಯ ನಯವಾದ ಅಗ್ನಿಶಿಲೆ ಕಾಡುಬಂಡೆಗಳ ನಾಡು.ನವಿರಾದ ಉರುಟಾದ ವಿಚಿತ್ರ ಬಂಡೆಗಳ ಬರಡು ಬೀಡುಹಣ್ಣು ಅಂಗಡಿಯಲಿ ಜೋಡಿಸಿ,ಪೇರಿಸಿದ ಹಣ್ಣಿನ ಪಾಡು,ಬಣ್ಣ ಮಾತ್ರ ಬೇರೆ,ವಿವಿದ ನೆರಳುಗಳ ಬಿಸಿಲ ಮಾಡುಸುಪ್ತ ಜ್ವಾಲಾಮುಖಿ ಇಂದು 38768http://kannada.oneindia.com/img/2009/08/21-sheshagiri-jodidar1.jpg213553kannada blogನಿಶ್ಯಬ್ದಕ್ಕೆ ವಾಲುತ್ತಿರುವ ಸುದ್ದಿಮಾತು/mixed-bag/blogs/2009/0826-suddimaatu-first-anniversary-balance-sheet.html[ನಿರ್ಭಯ, ನಿಷ್ಠುರ, ವಿಕಟ, ಕಟಕಿ, ಚಟಾಕಿ ಮಾತುಗಳಿಂದಾಗಿ ಏಕಕಾಲಕ್ಕೆ ಖ್ಯಾತಿ ಮತ್ತು ಅಪಖ್ಯಾತಿಯನ್ನು ಸಂಪಾದಿಸಿದ ಕನ್ನಡ ಬ್ಲಾಗಿನ ಹೆಸರು ಸುದ್ದಿಮಾತು. ಕನ್ನಡ ಪತ್ರಿಕೋದ್ಯಮ ಮತ್ತು ಪತ್ರಕರ್ತರ ಗಲ್ಲಿಗಲ್ಲಿಗಳಲ್ಲಿ ಒಂದು ವರ್ಷಕಾಲ ಸುಯ್ಯನೆ ಸೈಕಲ್ ಹೊಡೆದ ಈ ಹವ್ಯಾಸಿ, ಆದರೆ ಚೂಟಿ ಬ್ಲಾಗು ಇವತ್ತು ಬೇರೊಂದು ಕಾರಣಕ್ಕೆ ಸುದ್ದಿ ಮಾಡುತ್ತಿದೆ. ಸಾಕಪ್ಪಾ ಸಾಕು ಅಲ್ಲ, ಇನ್ನು ಸಾಕು, ಸುದ್ದಿಮಾತು 38840http://kannada.oneindia.com/img/2009/08/26-suddimaatu1.jpg213553kannada blogಲಂಕೇಶ್ ಮಥಿಸಿದ ನೀಲು-ನೀಲಿ ನಕ್ಷತ್ರ/mixed-bag/blogs/2009/0904-neelu-romantic-poems-p-lankesh-motugode.htmlನೀಲು. ಒಂದು ಕಾಲದ ಹುಡುಗರ ನಿದಿರೆ ಕೆಡಿಸಿದ್ದ ನೀರೆ. ಯಾರಿರಬಹುದು ಈಕೆ, ಹೇಗಿರಬಹುದು ಈಕೆ ಎಂದೆಲ್ಲ ಕಲ್ಪನೆಗಳನ್ನು ಕಟ್ಟಿಸಿದ್ದ ನಿಗೂಢೆ. ಯವ್ವನದ ಹುಡುಗಿಯರ ನಿರ್ಭಿಡೆಯ ದನಿಯಾಗಿದ್ದ ನಿಸ್ಸೀಮೆ. ನೀಲು ಮುಟ್ಟದ ವಿಷಯವಿಲ್ಲ. ಪುರಾಣ, ಇತಿಹಾಸ, ರಾಜಕೀಯ, ಕ್ರೀಡೆ, ಸಾಹಿತ್ಯ, ಜನ, ಜೀವನ, ಪ್ರೇಮ, ಕಾಮ... ಎಲ್ಲವೂ ನೀಲುವಿನ ಕಾವ್ಯದಲ್ಲಿ ವಸ್ತುವಾಗಿ ಬಂದಿವೆ. ನೀಲುವೆಂದರೆ ಕಾಮಿನಿ, ಭಾಮಿನಿ, ನಾಲ್ಕು 39006http://kannada.oneindia.com/img/2009/09/04-lankesh2.jpgnews"> ನನ್ನೂರು | My Village | Sheshagiri Jodidar | Poem | Kannada blogs - ನನ್ನೂರು : ಶೇಷಗಿರಿ ಜೋಡಿದಾರ್ ಕವನ - Kannada Oneindia

ನನ್ನೂರು

Sheshagiri Jodidar
* ಶೇಷಗಿರಿ ಜೋಡಿದಾರ್, ಬೆಂಗಳೂರು.

ನನ್ನೂರು,
ಉಚ್ಚರಿಸಲು ಬಾರದ ಗ್ರೀಕ್ ಪದಗಳಂತೆ,
ಸಮಯಕ್ಕೆ ಸರಿಯಾಗಿ ಹೊರಡದ ಗಾದೆಗಳಂತೆ.
ಹಾಗೇ, ಹೀಗೆ, ಅದೇ ಮತ್ತೆ, ಅದೇನೋ ಹೇಳ್ತಾರಲ್ಲ,
ಎಂದೇ ಕೊನೆಗೊಳ್ಳುವ ಸಂಭಾಷಣೆಯಂತೆ
ಪದಗಳಿಗೆ ಸಿಗದ ಭಾಷೆಯಂತೆ,
ನನ್ನೂರಿಗೆ ನಾನೇ ಆಗಂತುಕ.

ಕಡಲಡಿಯ ನಯವಾದ ಅಗ್ನಿಶಿಲೆ ಕಾಡುಬಂಡೆಗಳ ನಾಡು.
ನವಿರಾದ ಉರುಟಾದ ವಿಚಿತ್ರ ಬಂಡೆಗಳ ಬರಡು ಬೀಡು
ಹಣ್ಣು ಅಂಗಡಿಯಲಿ ಜೋಡಿಸಿ,ಪೇರಿಸಿದ ಹಣ್ಣಿನ ಪಾಡು,
ಬಣ್ಣ ಮಾತ್ರ ಬೇರೆ,
ವಿವಿದ ನೆರಳುಗಳ ಬಿಸಿಲ ಮಾಡು
ಸುಪ್ತ ಜ್ವಾಲಾಮುಖಿ ಇಂದು ಬರೀ ಬಿಸಿಲ ಗೂಡು.

ನಿರ್ವಾತ ಋತುರಹಿತ ಬಯಲಿಗೆ ಎರಡೇ ಎರಡು ಕಾಲ,
ಬೇಸಿಗೆ, ಕಡು ಬೇಸಿಗೆ.
ಬಾರಿ ಬಾರಿ ಕಳೆದು ಹೋಗುವ ಮಳೆಗಾಲ
ಕೇವಲ ಕಾಲ್ಪನಿಕ ಸುಂದರ ಕಾವ್ಯ ಮಾತ್ರ.
ಶಾಶ್ವತವಾಗಿ ಉರಿಯುತ್ತ ನಿಂತಿದೆ ಬರಗಾಲ.
ಕೈಗೆಟುಕದ ಉಳಿಗಾಲ..

ಬಿಸಿಲ ಬೇಗೆಯ ಮರೀಚಿಕೆ ನೀಲಿ ಹಾಳೆ,
ಚಿತ್ರ ಪೂರ್ಣಗೊಂಡಿಲ್ಲ,
ಇನ್ನೂ,
ಕುಂಚಕ್ಕೆ ಅಡರಿದೆ ಕೊಳೆ,
ಬಾಡಿ ಬತ್ತಿದ ಗೂಡಲ್ಲಿ ನೂರಾರು ಮೂಳೆ,
ಬದುಕೆಲ್ಲಾ ಬರೀ ಗೋಳೇ.

ಪ್ರತಿಧ್ವನಿಸುತಲಿದೆ ಕೂಗೋ ಗುಡ್ಡದಲ್ಲಿ
ಪದವಾಗದೆ ತೇಲಿದೆ ಗಾಳಿಯಲಿ ಕೂಗು
ಸ್ಪೋಟಿಸದ ಮೌನ ಹೆಪ್ಪುಗಟ್ಟಿದ ಭಾವ.
ನಿರ್ಲಜ್ಜ, ನಿರ್ಲಿಪ್ತ, ನಿರ್ಜಲ ಪಾಪಿ ಅಡರು ಬಳ್ಳಿ,
ಪಕ್ಕಕ್ಕೆ ತಳ್ಳಿ ಕತ್ತಾಳಿ, ಕಳ್ಳಿ,
ನಿದ್ರಿಸುವ ಕೇದಿಗೆ ಪೊದೆ ನಿರ್ಜಲ
ನನ್ನ ಹಳ್ಳಿ,

ಹಳ್ಳದ ಮಲೆಯಮ್ಮನ ಆಲದ ಬಿಳಲು ಬೇರು,
ಭಕ್ತರ ಭಕ್ತಿಯಲಿ ಆಗಿಲ್ಲ ಇಂದಿಗೂ ಏರುಪೇರು,
ಸೀಳಿದೆ, ಕಪ್ಪು ಬಸಿರನ್ನ,
ಊರ ಕೋಣದ ಬಲಿ,
ಎಲ್ಲೆಲ್ಲೂ ರಕ್ತ ಚೆಲ್ಲಿ,
ಇಳಿದಿದೆ ಆಳದಲ್ಲಿ,
ಎಂದಿಗೂ ಮಾಸದ ಓಕುಳಿ,

ಕೆಂಪು ಮಣ್ಣಿನ ಮೇಲೆ ಗೀಚಿದ ಜಾಲಿ
ಬರೀ ಸೌದೆ,
ನೆನಪಿಸುತ್ತದೆ ಹೊಟ್ಟೆ ಹಸಿವನ್ನ ಪದೇ ಪದೇ..

ಬಿಸಿಲ ಬೆವರಿಗೆ ಟಿಸಿಲೊಡೆದ ತಂಗಡಿ,
ಅಲ್ಲಲ್ಲಿ ತಲೆ ತಗ್ಗಿಸಿ ನೆಟ್ಟಗೆ ನಿಂತ ತಾಳೆ,
ಬೆಳೆಯಲಾರದು ಇಲ್ಲಿ ಬಾಳೆ!!
ಬರೀ ಕವಳೇ,ಕಾರೆಗಳದೇ ಕಾರುಬಾರು,
ಶರಣಾಗಿ, ಸೋಲೋಪ್ಪಿದೆ, ಮುಂಗಾರು,
ನಡೆಸಿದೆ ವಿಜಯೋತ್ಸವ ಬೇಸಿಗೆಯ ತೇರು.

ಮುತ್ತಜ್ಜಿಯ ಸುಕ್ಕಾದ ಚರ್ಮ
ಒಣಗಿ ಸಿಡಿದ ಕಾಡು ಎಕ್ಕ,
ಶುಷ್ಕ ಗಾಳಿಯಲಿ ತೇಲುವ ಪಾರಿವಾಳದ ಬಿಜ,
ಅಪ್ಪುತ್ತಿದೆ ಧರೆಗಿಳಿದು ಮತ್ತೆ ಮತ್ತೆ,
ಗುರುತ್ವಾ ಮಾತೆಯನ್ನು,
ಭಾರ.
ದೃಷ್ಟಿಗೆ ಬಾರದ ಬಯಲು,
ದೂರ,
ಎಲ್ಲೆಲ್ಲು ಬಿಸಿಲ ಮಹಾಪೂರ.

ಸುಟ್ಟು
ಕರಕಲಾಗಿರುವ ಕಪ್ಪು ಡಾಂಬರು ರಸ್ತೆ ,
ಬಿಡಿಸಿವೆ ಅಪರೂಪದ ವಿಚಿತ್ರ ನವ್ಯ ಚಿತ್ರ,
ಚಕ್ರಗಳ ಕುಂಚ.
ಹುಟ್ಟಿಸಿವೆ ಹಸಿ, ಹುಸಿಯಾದ ಕನಸನ್ನ...
ಬೆಳೆಯುತಿದೆ ದುರಾಸೆಯ ದೈತ್ಯ ಭ್ರೂಣ,
ಆದೀತೆ ಅನಿರೀಕ್ಷಿತ ಗರ್ಭಾಪಾತ?
ಬಿಸಿಲು ತಂಪಾಗುವ ಮುನ್ನ.
ತಂಗಾಳಿ ಮತ್ತೆ ಕೆಂಪಾಗುವ ತನಕ...

ನನ್ನೂರ ಬಂಡೆಗಳು ಕರಗಿ ಎರಗುವ ಲಾವ
ಮತ್ತೆ ಚಿಮ್ಮೀತೆ
ಸಿಹಿನೀರ ಬುಗ್ಗೆಯಾಗಿ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+