ಡಾಲರ್ ಹಕ್ಕಿ
ಇದು ಇಂದಿನ ಭಾರತದ ಮೂರರಲ್ಲಿ ಒಂದು ವಿದ್ಯೆಯನ್ನೇ ನಂಬಿದವರ ಮನೆಯಲ್ಲಿ ಇರುವ ವೃದ್ಧರ ಅಳಲು! ಸಂಜೆಯ ಬದುಕನ್ನು ಹಸನಾಗಿಸುವ ದೃಷ್ಟಿಯಿಂದ ಮುಂದಿನ ದಿನಗಳನ್ನು ತಳ್ಳುತ್ತಿರುವ ವೃದ್ಧರ ನಿರೀಕ್ಷೆಯ ಮೊರೆ ಕುಡಿಗಳಿಗೆ ಕೇಳುವುದೇ?
* ಶಾಂತಾ ನಾಗರಾಜ್, ಬೆಂಗಳೂರು
ಅಂದಚೆಂದದ ಹಕ್ಕಿ ಪಂಚರಂಗಿನ ಗಿಳಿ
ಡಾಲರ್ ಬಲೆಗಳ ಹೊತ್ತಿಯೇ ತಿರುಗುತ್ತಾವೆ
ಅಕ್ಕಗಳಿರಾ ಅಣ್ಣಗಳಿರಾ ಬಚ್ಚಿಟ್ಟುಕೊಳ್ಳಿರೇ
ನಿಮ್ಮ ಮುತ್ತಿನ ಚೆಂಡುಗಳನ್ನು
'ಅವರ್‍ನ ಬಿಟ್ಟು ಇವರ್‍ನ ಬಿಟ್ಟು ಇವರ್ಯಾರು'
ಕೊಕ್ಕು ಮುರಿವಾ ಪರಿ ಹೆಕ್ಕಿ ತೆಗೆದಾ ಮಣಿ
ರೆಕ್ಕೆಯೊಳಗೇ ಬಚ್ಚಿಟ್ಟುಕೊಂಡು ಹಾರಿ
ಸಿಕ್ಕಸಿಕ್ಕೆಡೆಗಳಲಿ ತಕ್ಕಂತೆ ಸಿಂಗರಿಸಿ
'ಪೋಗದಿರೆಲೋ ರಂಗಾ ಬಾಗಿಲಿಂದಾಚೆಗೆ'
ನೆಂದಧ್ವನಿ ಅಕ್ಕನದು ಏಕನಾದದ ಗುಂಗು
ಹಾಸಿರುವ ನಡೆಮುಡಿಯ ತುಂಬೆಲ್ಲ ನಿಟ್ಟುಸಿರು
ವೃದ್ಧಾಶ್ರಮದ ತುಂಬ ಅಣ್ಣನೇಕಾಂತದ ಚಿಗುರು
ಹಕ್ಕಿಯೇ ಬಲೆಬೀಸಿ ಊರುಗೋಲುಗಳ ಕಿತ್ತು
ಸಂಜೆ ತುಂಬಿದ ಬದುಕು ಖಾಲಿ.....ಖಾಲಿ.....












Click it and Unblock the Notifications