ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡುಗೆಮನೆ 'ಹೈಯ್ಕು'ಗಳು

By ಶಾಂತಾ ನಾಗರಾಜ್
|
Google Oneindia Kannada News

Shantha Nagaraj
1 ಹಾಲು - ಗಂಡ

ಈ ಹಾಲಿನ ಹಣೆಬರಹವೇ ಹೀಗೆ
ಮುಂದೆನಿಂತರೆ ತಳಬಿಟ್ಟು ಏಳುವುದಿಲ್ಲ;
ಒಂದು ಕ್ಷಣ ಹೊರಹೋದಿರೋ ಉಕ್ಕಿ ಒಲೆ ಆರಿಸುತ್ತದೆ
ಥೇಟ್ ಗಂಡನ ಪ್ರೀತಿಯ ಹಾಗೆ!
ಬೇಕಾದಾಗ ಇಲ್ಲ; ಬೇಡವಾದಾಗ ಮಹಾಪೂರ!!

2 ಕ್ರಿಯಾಪದಗಳು - ಅಡಿಗೆಮನೆ

ಕುದಿವ, ಸಿಡಿವ, ಕೊಯ್ಯುವ
ಬೇಯುವ,ಸೀಯುವ,ಹುರಿಯುವ
ಕೊಚ್ಚುವ, ಸುಡುವ, ಹೆಚ್ಚುವ
ಪದಗಳು ಅಡುಗೆಮನೆಗೇ ಸೀಮಿತವೇನಲ್ಲ;
ಕೆಟ್ಟಗಂಡನ ಹೃದಯದಲ್ಲೂ ಹೊರಳಾಡುತ್ತಿರುತ್ತವೆ!

3 ಅತ್ತೆ - ಸೊಸೆ

ಗಂಡಸರು ಜಗಳಕ್ಕೆ ಕೊಡುವ ಪ್ರತಿಮೆ
ಒಂದೇ; 'ಅತ್ತೆ - ಸೊಸೆ'
ಇವರಿಗೇನು ಗೊತ್ತು? ಜೊತೆಯಲ್ಲಿ ಏಗುವ ಸಂಕಟ?
ಈ ನೆಂಟು ಬೆಂಕಿ - ನೀರಿನ ಹಾಗೆ
ಒಂದು ಮತ್ತೊಂದನ್ನು ಕುದಿಸುತ್ತದೆ,
ಮತ್ತೊಂದು ಒಂದನ್ನು ಆರಿಸಿ
ವ್ಯಕ್ತಿತ್ವವನ್ನೇ ಅಳಿಸಲು ಪ್ರಯತ್ನಿಸುತ್ತದೆ!!

4 ಬಾಳೆ - ಬದನೆ

ಬಾಳೆ ಬದನೆಗೆ ಕಪ್ಪಾಗಲು ಬೇಯಲೇ ಬೇಕೆಂದಿಲ್ಲ
ಹೆಚ್ಚಿಟ್ಟರೂ ಸಾಕು! ಗಂಡನಿಗೂ ಅಷ್ಟೆ ಬಯ್ಯಲು
ಹೆಂಡತಿ ತಪ್ಪೇನೂ ಮಾಡಬೇಕಿಲ್ಲ
ಸುಮ್ಮನೇ ಎದುರಿಗಿದ್ದರೂ ಸಾಕು!!

5 ಹಾಲು - ಆಲ್ಕೊಹಾಲು

ತಳಸೀದುಹೋದ ಹಾಲು
ಗಂಡಸಿನ ಉದರ ಸೇರಿದ
ಆಲ್ಕೊಹಾಲು, ಎರಡೂ ದುರ್ನಾಥ!!
ಮರುದಿನವೂ ಪರಿಸರವನ್ನು
ಪಸರಿಸಿರುತ್ತದೆ!!

6 ಅಕ್ಕ - ಅಡುಗೆ

'ಅಕ್ಕ ಜಾಣೆಯೆಂದು ಅಡುಗೆಗೆ ಕರೆದರೆ
ಚಕ್ಕೋತನ ಸೊಪ್ಪುಗೆ ಮೊಳಕಾಲುದ್ದ ನೀರಿಟ್ಟಳಂತೆ'
ಅಂತ ಆಡಿಕೊಂಡರು ಗಾದೆಗಳಲ್ಲಿ!
ಇಂದಿನ ಅಕ್ಕ ಹಾಗೇನಿಲ್ಲ; ಅನ್ನುತ್ತಾಳೆ
"ನಾನು ರೊಟ್ಟಿ ಬೇಯಿಸುತ್ತೇನೆ,
ಗಲ್ಲಿಗೊಂದು 'ಹಳ್ಳಿಮನೆ' ಇದೆ
ತನ್ನಿ ಅಲ್ಲಿಂದ ಪಾಲಕ್ಕು ಪನ್ನೀರ"!!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X