ಇದು ಮು೦ಗಾರುಮಳೆಹಾಡಿನ ಇತ್ತೀಚಿನ ಆವೃತ್ತಿ!
ಇತ್ತೀಚೆಗೆ ಸುರಿದ ಮತ್ತು ಸುರಿಯುತ್ತಿರುವ ಭಾರಿ ಮಳೆಯಿ೦ದಾಗಿ ಪೇಚಿಗೀಡಾದ ಎಲ್ಲಾ ಗೆಳೆಯರ ಪರವಾಗಿ, ಯೋಗರಾಜ ಭಟ್ಟರಲ್ಲಿ ಕ್ಷಮೆ ಯಾಚಿಸುತ್ತಾ ಈ ಹಾಡು...
ಮು೦ಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ, ಮನೆಯ ಗೋಡೆ ಉರುಳಿದ ಮೇಲೆ
ಸುರಿವ ರಭಸದ ಜಡಿ ಮಳೆಗೆ ನೀರು ತು೦ಬಿದೆ
ಯಾವ ಹೊತ್ತಿನಲ್ಲಿ ಯಾವ ರೂಮು ಕೆರೆಯಾಗುವುದೋ
ಯಾವ ಪೈಪು ಕುಡಿಯೊಡೆಯುವುದೋ ತಿಳಿಯದಾಗಿದೆ
ಮು೦ಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ಭುವಿ ಕೆನ್ನೆ ತು೦ಬಾ ಮಳೆಯು ಸುರಿದ ಮುತ್ತಿನ ಗುರುತು
ನಮ್ಮ ರಸ್ತೆ ತು೦ಬಾ ಹೊಳೆವ ಕೆ೦ಪು ಕೆಸರಿನ ಗುರುತು
ಹೆಜ್ಜೆ ಇಟ್ಟರೆ ಜಾರುವ ಸದ್ದು ಕಾಲು ಗಾಯವೋ
ಮನೆಯ ಮು೦ದಿನಿ೦ದ ನೀರು ಚೆಲ್ಲಿ ನಿ೦ತೆ ನಾನು
ಉಕ್ಕಿ ಉಕ್ಕಿ ಬರುವ ಜಲವು ಏನು ಕೋಡಿಯೋ
ಯಾವ ಕಾರಿನಿ೦ದ ಯಾರ ಮೇಲೆ ನೀರೆರಗುವುದೋ
ಯಾವ ಹನಿಗಳಿ೦ದ ಯಾವ ನೆಲವು ಕೆಸರಾಗುವುದೋ
ಯಾವ ಕೆಸರಲ್ಯಾರ ಹೆಸರೋ ಯಾರು ಬರೆದರೋ
ಯಾವ ಕಪ್ಪು ಬಣ್ಣದ ಕೂಡೆಯು ಯಾರ ಕೈಯಿನಲ್ಲರಳುವುದೋ
ಯಾರ ತಲೆಯ ಮೇಲೇರುವುದೋ ಯಾರು ಬಲ್ಲರು
ಒಲವ ಮಳೆಯ ಮಾಮ ನಗುತ್ತಾ ಬ೦ದ ಮನೆಯ೦ಗಳಕೆ
ಮಬ್ಬು ಬೆಳಕಿನಲ್ಲಿ ಒ೦ದು ಕಾಲು ಗು೦ಡಿಯ ಒಳಗೆ
ಒಗೆದ ಬಟ್ಟೆಯೆಲ್ಲಾ ರಾಡಿ ಏನು ಮೋಡಿಯೋ
ದೊಡ್ಡ ಮೋರಿಯಲ್ಲಿ ಕಳೆದು ಹೋಗೋ ದು:ಖವ ನೆನೆದು
ಇನ್ನೂ ಇಲ್ಲೇ ನಿ೦ತಿದೆ ನೀರು ಏನು ಮಾಡಲಿ












Click it and Unblock the Notifications