ಎಲ್ಲವರಂತವನಲ್ಲ ನನ ಗಂಡ
ಈಗಿನ ಗಂಡಂದಿರು ಹೇಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಹಿಂದಿನ ಗಂಡಂದಿರು ಹೇಗಿದ್ದರು ಎಂಬುದನ್ನು ಸಂತ ಶಿಶುನಾಳ ಶರೀಫ ಅವರ ಪದದಲ್ಲಿ ಕಾಣಬಹುದು.
ಬಲ್ಲಿದನು ಪುಂಡ
ಎಲ್ಲವರಂತವನಲ್ಲ ಕೇಳೆ
ಸಣ್ಣು ಸಣ್ಣಿಗೆ ಬೈದು ನನ್ನ
ಎಲ್ಲು ಹೋಗದ ಹಾಂಗ ಮಾಡಿಟ್ಟ
ಕಾಲ್ ಮುರಿದು ಬಿಟ್ಟ
ತುಂಟ ಸವತಿಯ ಸೊಂಟ ಮುರಿ ಹೊಡೆದ
ಒಣ ಪಂಟ ಮಾತಿನ ಗಂಟುಗಳ್ಳರ ಮನೆಗೆ ಬರಗೊಡದ
ಕುಂಟ ಕುರುಡರೆಂಟು ಮಂದಿ ಗಂಟು ಬಿಟ್ಟರೆ
ಅವರ ಕಾಣುತ್ತ ಗಂಟಲಕ್ಕೆ ಗಾಣಾದ ಮೇಲಕ್ಕ ತಕ್ಕವನೆ ಸಿಕ್ಕ
ಅತ್ತೆ ಮಾವರ ಮನೆಯ ಬಿಡಿಸಿದನೆ
ಮತ್ತಲ್ಲಿ ಮೂವರ ಮಕ್ಕಳೈವರ ಮಮತೆ ಕೆಡಿಸಿದನೆ
ಎತ್ತ ಹೋಗದೆ ಕಿತ್ತಬಗಲದೆ ಗೊತ್ತಿನಲ್ಲೆ ಇಟ್ಟು ನನ್ನನು
ಮುತ್ತಿನ ಮೂಗುತಿಯ ಕೊಟ್ಟಾನೆ ಅವನೇನು ದಿಟ್ಟನೆ
ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂತ ಪುರುಷನು ಬಂದು ದೊರಕಿದ
ಪುಣ್ಯ ಫಲದಿಂದ
ಕಾಂತೆ ಬಾರೆಂತೆಂದು ಕರೆದೆ ಕಾಂತ ಮಂದಿರದೊಳಕೆ ಒಯ್ದು
ಭ್ರಾಂತಿ ಭವದುರಿತವನು ಹರಿಸಿದನೆ ಶಿಶುನಾಳದೀಶ












Click it and Unblock the Notifications