ಗುಲ್-ಮೊಹರ್..
ಕವಿ ನಿಸಾರ್‌ಗೆ ಗೌರವ ಸಲ್ಲಿಸುವ ವಿನೂತನ ಪ್ರಯತ್ನ ‘ಗುಲ್‌ಮೊಹರ್- ಕಾವ್ಯೋತ್ಸವ’ಕ್ಕೆ, ‘ರಸಿಕಾ ಕೇಳೊ’ ತಂಡ ಮುಂದಾಗಿತ್ತು. ಬೆಂಗಳೂರಿನ ಯವನಿಕಾದಲ್ಲಿ ನಡೆದ ಈ ಕಾರ್ಯಕ್ರಮದ ಸಾರ್ಥಕತೆ ಬಗ್ಗೆ ಹೀಗೊಂದು ಕವನ.
mp;#3240; ಮೊಹರುಮೂರು ಘಂಟೆಗಳ ಕಾಲ
ಕಟ್ಟಿಬಿಟ್ಟಿತ್ತು..
ಭೂತ-ಭವಿಷ್-ವರ್ತಮಾನಗಳ
ಸರಾಗವಾಗಿ ಸಾಗಿತ್ತು
ಅನುಭವಾಮೃತದ ರಸಗವಳ..
ಒಂದೊಂದು ಪದ್ಯವೂ
ಮೀದು ಬಂದಂತಿತ್ತು
ಅತಿ ಸರಳ-ಸುಂದರ
ಭಾವ ಸರೋವರದಲಿ..
ಕರೆದೊಯ್ದಿತ್ತು ನಮ್ಮೆಲ್ಲರನು
ನಮ್ಮ ಮನದ ಮೂಲೆ-ಮೂಲೆಯಲಿ
ತನ್ನದೇ ಹಿಡಿತದ
ಅತಿ ವಿರಳ ಶೈಲಿಯಲಿ..
ಕವಿ-ರವಿಯ ಹೋಲಿಕೆಯಲಿ
ಕವಿಯೇ ಮೇಲೆನಿಸದನಿಂದು
ಮತ್ತೊಮ್ಮೆ
ಬಾಳ ಚಿಕ್ಕ-ಚಿಕ್ಕ ಚುಕ್ಕೆಗಳನಾಯ್ದು
ಹೆಣೆದ ಪದಗಳ ರಂಗವಲ್ಲಿಯ ಕಂಡು
ಮನ ಮೂಕ-ವಿಸ್ಮಿತವಾಯ್ತು
ಮಗದೊಮ್ಮೆ..
ಅದೇ ಬಾನು ಅದೇ ಭೂಮಿ
ಅದೇ ಜನ ಅದೇ ಮನ
ಇವುಗಳ ಬಗೆಗಿನ
ಕವಿ-ದೃಷ್ಟಿ ಮಾತ್ರ
ಬಲು ಗಹನ..
ಮನ-ಮನದ ಅಂತರಾಳವ ತಟ್ಟಿ
ನಗಿಸಿ-ಅಳಿಸಿದ ಕವಿಗಿದೋ ನಮನ..
ಈ ಗುಲ್-ಮೊಹರಿನ ನಸುಗೆಂಪು-ನಸುಗಂಪು..
ಅಳಿಯದೇ ಉಳಿಯುವುದು ಎಂದೆಂದೂ..
ಆ ಕವಿ-ಹೃದಯದ ಮೋಡಿಗೆ
ಅದರ ಭಾವಗಳ ಕೋಡಿಗೆ
ಕೊಚ್ಚಿ ಹೋಗಿದೆ ಮನವಿಂದು..
ಕನ್ನಡದ ಬಾನಂಗಳದಲಿ
ನೀನೆಂದೂ ಮರೆಯಲಾರದ
ತೇಜ-ಸಿಂಧು..












Click it and Unblock the Notifications