ಕುಡ್ಕನ್ ಗೋಳು
ಈ ಪದ್ಯ ಓದಿದ್ರೆ ರಾಜರತ್ನಂರ ‘ರತ್ನನ್ ಪದ’ಗಳು ಜ್ಞಾಪ್ಕಕ್ಕೆ ಬರುತ್ವಾ? ಇಳಕೊಳ್ಳಾಕೊಂದೂರು... ತಲೆಮ್ಯಾಲೆ ಒಂದ್ಸೂರು...
ನನ್ ಪಾಡಿಗ್ ನಾನ್ ಕುಡ್ಕೊಂಡ್ತೂರಾಡ್ಕೊಂಡ್ ಹೋಗ್ತಿದ್ರೆ....
ಲೇಯ್‌ು ಕುಡ್ಕ...ಲೇಯ್‌ು ಕುಡ್ಕ...ಲೇ ಕುಡುಕ ಅಂತಾರಲ್ಲ...
ನನ್ ಕೂಲಿ ನನ್ ದುಡ್ತ ನಿಮ್ದೇನ್ರೀ ರೋಪ್
ನನ್ನ್ ತಂಟೇಗ್ ಬಂದ್ರೆ ಹುಷಾರ್ ತಗ್ದೇ ಬಿಡ್ತೀನ್ ಶೇಪ್
ಹೊಟ್ಟೆಗ್ ಎಂಡ ಬೀಳಿಲ್ಲಾಲ್ಲಂದ್ರೆ ಜೀವವೋದಂಗೆ
ಎಂಡ ಕುಡೀದ್ ಇರೋಣಾಂದ್ರೆ ಇದ್ರೊ ಸತ್ತಂಗೆ
ನಾನು ಕುಡ್ದು, ಎದ್ದು ಬಿದ್ದು ಹೋದ್ರೆ ಯಾಕ್ರಣ್ಣ ನಂಗೆ ಗುದ್ದು?
ದೊಡ್ಡೋರೆ ಏಳಿಲ್ವಾ, ಎಲ್ಲಾ ರೋಗಕ್ಕೂ ಸಾರಾಯೀನೇ ಮದ್ದು
ಸರ್ಕಾರ ಬೀಳ್ಲಿ ಸರ್ಕಾರ ಏಳ್ಲಿ ನಂದೇನೋಯ್ತದೆ ಗಂಟು?
ಯಾವನಾರ ಸಿಎಮ್ ಆಗ್ಲಿ, ನಂಗೆ ಸಿಕ್ರೆ ಸಾಕು ಪ್ಯಾಕೀಟು
ಐ.ಟಿ. ಬಿ.ಟಿ ಬಗ್ಗೆ ನಂಗೇನ್ ಕೇಳ್ಬೇಡಣ್ಣ
ಸಾರಾಯಿ ದೊರೆ ನೂರ್ವರ್ಷ ಬದುಕ್ಲಿ ಅಷ್ಟೇ ನಂಗ್ ಸಾಕಣ್ಣ
ಯಾರೋ ಹೋಗಿ ಕಂಪ್ಲೇಂಟ್ ಕೊಟ್ರು
ಬಂದ್ಬಿಟ್ಟಾ ಏರಿಯಾ ಇನ್ಸಪೆಟ್ರು!!
ಯಾಕೋ ಕುಡ್ದು ಗಲಾಟೆ ಮಾಡ್ತೀಯಾ ಮಧ್ಯರಾತ್ರಿಲಿಂಗೇ?
ಹತ್ತು ಜೀಪ್ನ ಸ್ಟೇಷನ್‌ನಲ್ಲಿ ತೋರುಸ್ತೀನಿ ಸ್ವರ್ಗ ನಾನಿಂಗೆ
ಯಾಕ್ರಿ ಇನ್ಸ್ ಪೆಕ್ಟ್ರೇ ಕೂಗಾಡ್ತೀರಲ್ಲ ಹಿಂಗೇ
ಟೇಸನ್ ಏನು ಹೊಸ್ದಲ್ಲ್ ನಂಗೆ ಬತ್ತೀನಿ ನಡೀರಿಂಗೇ
ಅಲ್ಲಾಗಿದ್ದು ಮರೆಯೋಕ್ಕೆ ಕುಡ್ದು ಕುಡ್ದು ಆಗಿದ್ದು ನಾನಿಂಗೆ
ಯಾರ್ನೋ ಬಚಾಯ್ಸೋಕ್ ಶಿಕ್ಷೆ ಕೊಡ್ಸಿ ಒಳಗಾಕಿದ್ರಲ್ಲ ನಂಗೆ
ಈ ಪ್ರಪಂಚದಲ್ಲಿ ನಾನೊಬ್ನೆ ಏನೂ? ನೀವ್ ಕುಡ್ಯಾಕಿಲ್ವಾ?
ನೀವ್ ಕುಡ್ಯೊದ್ ಬ್ರಾಂದಿ ವಿಸ್ಕಿ, ನಾನ್ ಕುಡ್ಯೊದ್ ಎಂಡ
ಅದೇನ್ ಹಾಕ್ತೀರಾ ಹಾಕ್ಕೊಳ್ಳ್ರಿ ದಂಡ
ಈ ಕೋರ್ಟಲ್ಲಿ ನಿಮ್ಮಂತೋರೆಲ್ಲ ಈಚೆ ತಿರ್ಗಾಡ್ಕೊಂಡಿರಿ ಇಂಗೇ
ಮೇಲ್ನೋನು ನೋಡ್ಕೋತಾನೆ ಅಲ್ಲೀ ವರ್ಗೆ ನಡ್ಸಿ ನಿಮ್ ದರ್ಬಾರಿಂಗೆ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications