ಸಂಕ್ರಾಂತಿಯ ಸಂಕ್ರಮಣ
ಎಸ್.ಎಲ್.ಸುರೇಂದ್ರ ಕುಮಾರ್, ತುಮಕೂರು
[email protected]
ಸಂಕ್ರಾಂತಿ ಈಗಿಲ್ಲಿ ಸಂಕ್ರಮಣವಾಗಿ ಬಂದಿದೆ
ಸಂಕ್ರಾಂತಿ ನಮಗಿಲ್ಲಿ ಸಂಪ್ರೀತಿಯನ್ನು ತಂದಿದೆ
ಸಂಕ್ರಾಂತಿ ಈಗಿಲ್ಲಿ ಸಂಸ್ಕೃತಿಯ ನೆನಪಿಸಿದೆ
ಸಂಕ್ರಾಂತಿ ನಮಗಿಲ್ಲಿ ಸಡಗರದ ಹಬ್ಬವಾಗಿದೆ
ಸೂರ್ಯನ ಪಥಚಲನೆಯ ಸಂಕ್ರಮಣ
ದುಡಿವ ಜನರೆಲ್ಲ ಹಂಚಿಕೊಳ್ಳಲು ಸಂಪ್ರೀತಿಯ
ಜಗಕೆಲ್ಲ ತಿಳಿಸಿ ಉಳಿಸಲು ಸಂಸ್ಕೃತಿಯ
ನಾವ್ ನಾವೆಲ್ಲ ಕೂಡಾಚರಿಸಲು ಸಡಗರವ
ನೀತಿ ಸಂಯಮ ಯುಕ್ತಿ ಬಕ್ತಿಯಲು
ಅರ್ಥ ಕಾಮ ಧ್ಯೇಯಗಳ ತಿಳಿಸಲು
ಸುಳ್ಳು ಸತ್ಯಗಳ ಪಾಪ ಪುಣ್ಯದಲು
ಧರ್ಮ ಮುಕ್ತಿ ಧ್ಯೇಯಗಳ ಅರುಹಲು
ಎಳ್ಳುಂಡೆ ಕೊಬ್ಬರಿ ಬೆಲ್ಲ ಬೀರಲು ಜನರೆಲ್ಲ
ಸಕ್ಕರಚ್ಚು ಕಬ್ಬು ಕಡಲೆ ಹಂಚಲು ಜಗವೆಲ್ಲ
ಹೊರಟಿಹರು ಅಂದ-ಚೆಂದದಿ ಹೆಂಗಳೆಯರಿಲ್ಲಿ
ಈ ಸೊಬಗು ಕಾಣಲು ಸಂಸ್ಕೃತಿಯ ಸಂಕೇತವಾಗಿ
ಸಂಕ್ರಾಂತಿ ಬಂದಿದೆ
ಸಡಗರವ ತಂದಿದೆ












Click it and Unblock the Notifications