ಕೆರೆ ಬಳಗ


ಹೇಗಿದ್ದ ಕೆರೆಗಳು ಹೇಗಾದವು? ನಾವೆಲ್ಲರೂ ಯೋಚಿಸುವ ಸಮಯ ಮತ್ತೆ ಬಂದಿದೆ!

  • ತ್ರಿವೇಣಿ ನಾರಾಯಣ, ಸಾಗರ, ಶಿವಮೊಗ್ಗ
Kere Balaga, a poem by Triveni Narayanaಬೆಳ್ಳಕ್ಕಿ ಹಿಂಡು ಕಟ್ಟಿಕೊಂಡು
ನೀಲಿ ಸೀರೆ ಉಟ್ಟುಕೊಂಡು,
ಹಸಿರು ಸೆರಗು ಹೊದ್ದುಕೊಂಡು
ರವಿಯ ನೋಡಿ ನಾಚಿಕೊಂಡು,
ಕಾಲ ಕಳೆದಿದ್ದೆ ನಾನಾಗ ಸಮೃದ್ಧೆ।।1।।

ಕಮಲದ ಕೈಗಳನ್ನು ಚಾಚಿ
ಜಲದ ಜೀವಿಗಳನ್ನು ಬಾಚಿ
ತಬ್ಬಿಕೊಂಡೆ ಬಿಡದೆ ಪಾಚಿ
ಕಾಲ ಕಳೆದಿದ್ದೆ ನಾನಾಗ ಸಮೃದ್ಧೆ।।2।।

ಭೂತಾಯಿಗೆ ಜಲವನುಣಿಸಿ,
ರೈತ ಮಿತ್ರರನ್ನು ಹರಸಿ,
ಅಂತರ್ಜಲ ತುಂಬಿ ತುಳುಕಿಸಿ,
ಕಾಲ ಕಳೆದಿದ್ದೆ ನಾನಾಗ ಸಮೃದ್ಧೆ।।3।।

ಕುಡಿದವರ ದಾಹ ಇಂಗಿಸಿ
ದಂಡೆಗಳ ತೀರ ಚುಂಬಿಸಿ,
ನೋಡಿದವರ ಮನವ ತಣಿಸಿ,
ಕಾಲ ಕಳೆದಿದ್ದೆ ನಾನಾಗ ಸಮೃದ್ಧೆ।।4।।

ಬುದ್ದಿ ಜೀವಿಗಳ ಉದಯವಾಗಿ
ಆಸೆಗಳ ಪೂರೈಕೆ ಸಾಗಿ
ಬಂಧು ಬಳಗವೆಲ್ಲ ನೀಗಿ
ಕಾಲ ಕಳೆಯುತಿದೆ ನಾನೀಗ ವೃದ್ಧೆ।।5।।

ಕಾರ್ಖಾನೆಗಳ ಜಾಲವೆದ್ದು
ಕೃಷಿ ತ್ಯಜ್ಯ ನುಂಗಿ ಮದ್ದು
ಚರಂಡಿಗಳ ನೀರು ಬಿದ್ದು
ಕಾಲ ಕಳೆಯುತಿದೆ ನಾನೀಗ ವೃದ್ಧೆ।।6।।

ನಿನ್ನ ಜೀವ ಉಳಿಸಿ ನೂರು
ವರ್ಷಕಾಲ ಬೆಳೆಸಿದ್ದಾರು?
ನನ್ನ ನೀರು ಗಿಡದ ಬೇರು,
ಅಲ್ಲವೆಂದು ಹೇಳುವರಾರು?


ಮರಳಿ ಉಳಿಸು ನನ್ನ ಬಳಗ
ತುಂಬಲಯ್ಯ ಧಾನ್ಯ ಕೊಳಗ
ಮತ್ತೆ ತುಂಬು ಯುೌವನ
ಭೂಮಿ ಸೃಷ್ಟಿ ಪಾವನ
ನಿನ್ನ ನೆನೆವೆ ಅನುದಿನ।।7।।

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+