ಮುಗಿಯದು ಅವಳ ಹೊಗಳಿದರೆ!!
ಮನವ ಸೆಳೆದ ರೂಪಸಿ-ಪ್ರೇಯಸಿಯಾಬ್ಬಳ ಕುರಿತು..
- ಯೋಗೇಶ್ ರಾವ್, ಬೆಂಗಳೂರು
ಅದೆಷ್ಟು ಚೆಂದ ಜೊತೆಯಲೆ ಅವಳಿದ್ದರೆ!ಕತ್ತಲು-ಮನ, ಮನೆ, ಅವಳಿಲ್ಲದಿರೆ!
ನನ್ನ ಕಂಡು ಆಕೆ ನಕ್ಕರೆ-
ಕ್ಷಣವೆ; ಕುಡಿದಂತೆ ಹಾಲು ಸಕ್ಕರೆ.
ಬೇಕೆನಗೆ ಅವಳ ಆಸರೆ, ಅವಳಿಲ್ಲದ ಕ್ಷಣ,
ಕ್ಷಣವು - ನಾ ಸಿಕ್ಕಿ ಬಿದ್ದಂತೆ, ವೇದನೆಯ ಸೆರೆ.
ಚೆಲುವೆ, ಬುದ್ದಿವಂತೆ, ಮನಸರಿತವಳು-
ನನ್ನವಳು ಮಿನುಗುವ ತಾರೆ.
ಅವಳ ತೋಳ ಬಂಧನದ ನೋವಿನ ಸುಖವೇ ಬೇರೆ.
ನಗಿಸಿ, ನಕ್ಕುಬಿಡುವಳು, ಚಿಂತೆ ನೂರಿದ್ದರೆ..
ಎಂದೂ ಬೇಸರಿಸಿಕೊಂಡವಳಲ್ಲ ನಾ ಬೈದರೆ,
ಬೈಯಲು ಕಾರಣವೇ ಇರುತ್ತಿರಲಿಲ್ಲ, ಅಂಥ ಚತುರೆ.
ದು:ಖ ಎಂದರೆ ಏನು ಎನ್ನುವಷ್ಟು ಸುಖ ಕೊಟ್ಟ ಅಪ್ಸರೆ,
ಯಾವ ಜನ್ಮವು ಬೇಡ ಅವಳಿಲ್ಲದ ಕ್ಷಣ ನೆನೆದರೆ,
ನನ್ನ ಪಾಲಿಗೆ ಇವಳೇ:- ಭಾಗ್ಯ ಎಂದರೆ!
ಮುಂಜಾನೆ ಎದ್ದು ನಾ ನೋಡುವುದು ಅವಳ ಮೋರೆ.
ಅದಾವ ಮೂಡಿನಲ್ಲಿ ಸೃಷ್ಠಿಸಿದನೋ ಇವಳ ಆ ದೇವರೆ,
ದಿನವು ಅರಳುತ್ತವೆ, ಅವಳ ಹೊಗಳಲು ನೂರೆಂಟು ತಾವರೆ.
ಆ ದೇವರು ಇವಳ ಪ್ರೀತಿ ಮಾಡಿ ಬಿಟ್ಟಾನೆಂಬ ಭಯ ಬೇರೆ!
ಕಂಡಿಲ್ಲ, ಕಾಣುವುದಿಲ್ಲವೇನೊ, ಇಂತವಳ ಈ ಧರೆ.
ಇಬ್ಬರ ಮಾತು ಒಂದೆ, ನಿನ್ನ ಬಿಟ್ಟಿರಲಾರೆ,
ಇಬ್ಬರನ್ನು ಕರೆದೊಯ್ಯಲಿ, ಸಾವು ಬಂದರೆ.
ಇದೇ ಪ್ರೀತಿ ಅರಳಲಿ, ಮುಂದೊಂದು ಜನ್ಮವಿದ್ದರೆ,
ಅದೆಷ್ಟು ಜನುಮದ ಪುಣ್ಯವೊ, ನಾನಿಂದು ಅವಳ ಕೈಸೆರೆ!












Click it and Unblock the Notifications