ಚುಕ್ಕಿ ಚುಕ್ಕೀ...
ಯಾಕಿಟ್ಟರೀ ಚುಕ್ಕಿ?
ಯಾರಿಟ್ಟರೀ ಚುಕ್ಕಿ?
ಸುತ್ತಿಯಲಿ ಹೊಡೆದು
ಉಳಿಯಲಿ ಕಡೆದು
ತತ್ತಿಯಿಂದಲೆ ಸಿಡಿದು
ಜೀವಾತ್ಮವ ಪಡೆದಿಹಗೆ
ಯಾಕಿಟ್ಟರೀ ಚುಕ್ಕಿ?
ಯಾರಿಟ್ಟರೀ ಚುಕ್ಕಿ?
ಬತ್ತಿಯ ಹೊಸೆದು
ಬೀಜದಿ ಎಣ್ಣೆಯ ಪಡೆದು
ಕೋಣೆಯಲಿ ಪಸರಿಸಿಹ
ಪ್ರಕಾಶವೀವ ದಿವ್ಯ ಚೇತನಕೆ
ಯಾಕಿಟ್ಟರೀ ಚುಕ್ಕಿ?
ಯಾರಿಟ್ಟರೀ ಚುಕ್ಕಿ?
ಬೈತಲೆ ನಡುವೆ ಸಿಂಧೂರ ಇಕ್ಕಿ
ಕೆನ್ನೆಯ ಮೇಲೆ ಕಪ್ಪು ಸಿಕ್ಕಿ
ಹೃದಯದ ಒಳಗೆ ಹೆಕ್ಕಿ ಹೆಕ್ಕಿ
ಆನಂದ ಬಾಷ್ಪವ ಬಿಕ್ಕಿ ಬಿಕ್ಕಿ
ಯಾಕಿಟ್ಟರೀ ಚುಕ್ಕಿ?
ಯಾರಿಟ್ಟರೀ ಚುಕ್ಕಿ?
ಪುಟ್ಟ ಜೀವಕೆ ಆತ್ಮವನಿಕ್ಕಿ
ಆರೈಸಿ ಪೂರೈಸಿ ಮಾನವತ್ವವನಿಕ್ಕಿ
ಸಲಹಿಸಿ ಕಲಿಸಿ ಮುದ್ದಲಿ ಬೆಳೆಸಿ
ಸ್ವತಂತ್ರದಿ ಹಾರಲು ಕಲಿಸಿ
ಯಾಕಿಟ್ಟರೀ ಚುಕ್ಕಿ?
ಯಾರಿಟ್ಟರೀ ಚುಕ್ಕಿ?
ಜೀವನ ಯಾತ್ರೆಯ ಪೂರೈಸಿ
ಹಣೆಯ ಚುಕ್ಕಿಯ ಅಳಿಸಿ
ಎಲ್ಲಿಗೋ ಪಾದವ ಬೆಳೆಸಿ
ತುಳಿದ ಹಾದಿಯ ಚಿಹ್ನೆಯ ಉಳಿಸಿ
ಯಾಕಿಟ್ಟರೀ ಚುಕ್ಕಿ?
ಯಾರಿಟ್ಟರೀ ಚುಕ್ಕಿ?












Click it and Unblock the Notifications