ಕ್ರಿಕೆಟಿಗರು ತಿನಿಸಲಿ ಸವಿಬೆಲ್ಲ
ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಕ್ಷಣಗಣನೆ ಆರಂಭಗೊಂಡಿದೆ. ಈ ಸಂದರ್ಭದಲ್ಲಿ ಭಾರತೀಯ ತಂಡಕ್ಕೊಂದು ಶುಭಹಾರೈಕೆ...
- ಚಂದ್ರಗೌಡ ಕುಲಕರ್ಣಿ(ಕಡದಳ್ಳಿ), ತಾಳಿಕೋಟೆ.
ಬೇಸಿಗೆ ಬಿಸಿಲಲಿಕೆರೆಬಿಯನ್ ದ್ವೀಪದಿ
ನಡೆದಿದೆ ಕ್ರಿಕೆಟ್ ಸೆಣಸಾಟ!
ಕಾಂಗರೂ ಕಿವಿ
ಭಾರತ ಪಾಕ್
ಮಾಡುತಲಿರುವವು ಆರ್ಭಟ!
ಆಫ್ರಿಕ ಲಂಕಾ
ಇಂಗ್ಲೆಂಡ ಬಾಂಗ್ಲಾ
ಗೆಲ್ಲುವರಾರು ಯಾವ ಬಲ್ಲ!
ಭಾರತ ತಂಡ
ವಿಶ್ವ ಕಪ್ ಗೆಲಿದು
ತಿನಿಸಲಿ ನಮ್ಗೆ ಸವಿಬೆಲ್ಲ!
ಸಚಿನ್ ಉತ್ತಪ್ಪ
ಧೋನಿ ಗಂಗೂಲಿ
ಸಿಡಿಸಲಿ ಬೌಂಡರಿ ಸಿಕ್ಸರ!
ಪಟ್ ಪಟ್ ಚಟ್ ಚಟ್
ಗಳಿಸಲಿ ವಿಕೆಟ್
ಇರ್ಫಾನ್ ಮುನಾಫ್ ಅಗರ್ಕರ!
ಸ್ಪಿನ್ ಮಾಂತ್ರಿಕ
ಕುಂಬ್ಳೆ ಭಜಿಗೆ
ಒಲಿಯಲಿ ಇಂಡೀಜ ಅಂಕಣ!
ಬೌಲಿಂಗ್ ಬ್ಯಾಟಿಂಗ್
ಎರಡಲೂ ಮಿಂಚಲಿ
ಯುವರಾಜ್ ಸೆಹವಾಗ್ ಸಚಿನ್!
ಚಾಪೆಲ್ ಮಂತ್ರ
ದ್ರಾವಿಡ ತಂತ್ರ
ಫಲಿಸಲಿ ಇಲ್ಲದೆ ಪ್ರತಿ ದಾಳಿ!
ನೂರ್ ಕೋಟಿ ಜನರ
ಆಸೆಯು ಫಲಿಸಲಿ
ಬೆರಗಾಗಿ ನೋಡಲಿ ಎದುರಾಳಿ!












Click it and Unblock the Notifications