ನಾನು ಮತ್ತು ನನ್ನ ಚುಟುಕಗಳು
ಶಿವಮೊಗ್ಗ ಜಿಲ್ಲೆಯ ಸಾಗರವಾಸಿಯಾದ ನಾನು, ಸರ್ಕಾರಿ ಪ್ರೌಢಶಾಲೆ,ಪಿಳ್ಳಂಗಿರಿ ಎಂಬಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದುವರೆಗೆ ಸುಮಾರು 500ಕ್ಕು ಹೆಚ್ಚು ಚುಟುಕುಗಳನ್ನು, 25ಕ್ಕು ಮಿಗಿಲಾಗಿ ಕನ್ನಡ ಕವನಗಳನ್ನು ರಚಿಸಿದ್ದೇನೆ.
ಅವುಗಳನ್ನು ಶಿವಮೊಗ್ಗ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಹಾಗು ಸಾಗರ ತಾಲೂಕಿನಲ್ಲಿ ನಡೆದ ರಾಜ್ಯಮಟ್ಟದ ಮಹಿಳಾ ಸಮ್ಮೇಳನಗಳಲ್ಲೂ ವಾಚಿಸಿದ್ದೇನೆ.ಚನ್ನರಾಯ ಪಟ್ಟಣದಲ್ಲಿ ಜರುಗಿದ ರಾಜ್ಯ ಮಟ್ಟದ ಚುಟುಕು ವಾಚನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ಬಾಳೆಹೊನ್ನೂರಿನ ರಂಭಾಪುರಿ ವೀರಸಿಂಹಾಸನ ಮಠದಲ್ಲಿ ನಡೆದ 13ನೇ ಚುಟುಕ ಸಾಹಿತ್ಯ ಸಮ್ಮೆಳನದಲ್ಲಿ ಭಾಗವಹಿಸಿ "ಚುಟುಕಶ್ರೀ" ಪ್ರಶಸ್ತಿ ಪಡೆದಿದ್ದೇನೆ.
ಎಂ. ಅಕ್ಬರ್ ಅಲಿ , ದಿನಕರ ದೇಸಾಯಿಯವರ ಬರಹಗಳಿಂದ ಸ್ಪೂರ್ತಿ ಪಡೆದು ಪರಿಸರ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಚುಟುಕಗಳನ್ನು ರಚಿಸಿದ್ದೇನೆ.ಗೀತ ಕುಸುಮ ಎಂಬ ಹಳ್ಳಿ ಹಾಡುಗಳ ಸಂಗ್ರಹ ನನ್ನ ಕೃತಿ.
ನನ್ನ ಹುಟ್ಟೂರು ಶಿರಸಿ ತಾಲುಕಿನ ಮೂಲೇಮನೆ ಎಂಬ ಹಳ್ಳಿ.. ನನ್ನ ಮನೆ ಸಿದ್ದಾಪುರ ತಾಲೂಕಿನ ದೊಡ್ಮನೆ. ಮಾಜಿ ಮುಖ್ಯ ಮಂತ್ರಿಗಳಾದ ರಾಮಕೃಷ್ಣ ಹೆಗಡೆಯವರ ಮನೆತನದವರು ನಾವು. ನನ್ನ ಮನೆಯವರ ಹೆಸರು ನಾರಾಯಣ ಹೆಗಡೆ. ನನ್ನ ತಂದೆಯವರು ಸೀತಾರಾಮ ಹೆಗಡೆ. ನನ್ನ ನಿವೃತ್ತಿಯ ನಂತರ ಕನ್ನಡ ಸಾಹಿತ್ಯ ಅಧ್ಯಯನ , ಚುಟುಕುಗಳಲ್ಲಿ,ಕವನಗಳಲ್ಲಿ ಮಹತ್ತರ ಸಾಧನೆ ನನ್ನ ಗುರಿಯಾಗಿದೆ.
ತಮಗೆ ನನ್ನ ಚುಟುಕುಗಳು , ಕವನಗಳು ತಮಗೆ ಇಷ್ಟವಾಗುತ್ತದೆಂದು ಭಾವಿಸುವೆ- ನಮಸ್ಕಾರ.
ನಾಮ ರೂಪ ಭೇದಗಳಲ್ಲಿ
ಒಂದೇ ಜೀವಾತ್ಮ
ಕಂಡರು ಕಾಣಲಾರೆ
ಎಂದವರ ಕಥೆ
ಬರಿಯ ವ್ಯಥೆ||1||
ಬಿಳಿ ಮೋಡ ಮುಟ್ಟಿ
ನಮಗೆ ಸಂತೊಷ ತುಟ್ಟಿ
ಪ್ರತಿ ಮನೆಯ ಕದವ ತಟ್ಟಿ
ಸ್ನೆಹದಿ ಮನ ಮುಟ್ಟಿ
ಕಂಡಾರು ಸಮಷ್ಟಿ||2||
ಮದ್ದಿಲ್ಲ ಮನಕೆ
ಹರಿದೋಡಿ ತದಕೆ
ಎಳೆದು ಕಟ್ಟಿ ತೆರೆ
ಭಾಗ್ಯದ ಬಾಗಿಲು
ಬರಲಿ ಹಗಲು||3||
ಕತ್ತಲೆಯಲ್ಲಿ ಯೋಚಿಸಿ,
ಎಲ್ಲರನ್ನೂ ಯಾಚಿಸಿ
ಬಳಿಗೆ ಕರೆ
ಎಂಬುದೆ ಅಂತರಂಗದ ಮೊರೆ||4||












Click it and Unblock the Notifications