ಕಾಯುತ್ತಿರುವೆ ನಿನಗಾಗಿ. ...
ನೀ ಬಂದಾಗ ನಿನ್ನೆಯ ವರೆಗೆ
ಕಾಯುತಿಹೆ ನಿನಗಾಗಿ
ಬರಬಾರದೆ ನೀ ಇಲ್ಲಿಗೆ
ಕುದಿಯುತಿಹುದು ನನ್ನ ಒಡಲು
ಕಾಣದಾಗಿದೆ ನಿನ್ನ ಕುರುಹು
ಇಂದು
ಕೇಳಿ ನನ್ನ ಕೂಗು
ಬಂದೆ ನೀ ಧರೆಗಿಳಿದು
ತಣಿಯಿತು ನನ್ನ ಒಡಲು
ತನುವೆಲ್ಲ ಸಂತಸದ ಹೊನಲು
ಎಂದೆಂದು ಇರಲಿ ನಿನ್ನ ಕರುಣ
ಇದೇ ನನ್ನ ನಮನ












Click it and Unblock the Notifications