Get Updates
Get notified of breaking news, exclusive insights, and must-see stories!

ಮಾತೃವಿಯೋಗ

ಮರ್ಮ ಬಂಧದ ಆರ್ತನಾದವು
ಶೋಕದಿ ಹೊರಹೊಮ್ಮಿದೆ
ಕರ್ಮರಹಿತನ ಮಾಡಿ ಎನ್ನಯ
ಹೃದಯವ ಬಿಮ್ಮಿದೆ

ಮಾತೃ ಕೃಪೆಯ ಬಲದಿ ಸಾಗಿಹೆ
ಜೀವವಿಂದು ಅಳುಕಿದೆ
ನೇತ್ರ ಪುಂಜದ ದೀಪವಾರಿ
ಅಂಧಕಾರದಿ ಬಳುಕಿದೆ

ಓದಿ ನಡೆಯುತ ಹಾದಿ ಹಿಡಿಯುತ
ತಾಯಿಯನ್ನೇ ಅಗಲಿದೆ
ಆದಿ ಅಂತ್ಯದ ಅರಿವು ಮರೆತು
ಮಾಯೆಯಲ್ಲಿ ಮುಳುಗಿದೆ

ತನ್ನತನವನು ತೊರೆದು ತಾಯಿಯು
ಎಲ್ಲರನ್ನು ಪೊರೆದಳು
ಹೊನ್ನ ಬನ್ನದ ಬಯಕೆ ಬೇಡದೆ
ಅನ್ನ ತರ್ಪಣೆ ಗೈದಳು

ಭಯ ಭಕುತಿಯಿಂದ ಶ್ರದ್ಧೆಯಿಂದ
ಹಿರಿಯರನ್ನು ಪೊರೆದಳು
ನಯ ವಿನಯದಿಂದ ಪ್ರೀತಿಯಿಂದ
ಕಿರಿಯರನ್ನು ಪೊರೆದಳು

ಏರು ಇಳಿತದ ಜೀವಮಾನದಿ
ಸಾರಿ ಕಾವ್ಯವ ಬರೆದಳು
ಮೃದುಲ ವಾಣಿಯ ಇಂಪಿನಿಂದ
ಹೃದಯ ಗಾನವ ನುಡಿದಳು

ಯಾವ ರಾಹುಕೇತು ಛಾಯೆಯು
ಅವಳನೇ ಆವರಿಸಿತೊ?
ಸೂಕ್ಷ್ಮಜೀವಿಯ ರಮ್ಯ ವಾಣಿಯ
ತೀಕ್ಷ್ಣದಿ ಅಪಹರಿಸಿತೊ?

ನವಮ ಛಿದ್ರಗಳಿಹ ದೇಹಕೆ
ದಶಮ ಛಿದ್ರವು ದೊರಕಿತು
ಜೀವನೌಕೆಯು ಕಡಲನೇರಿ
ದೇವನತ್ತ ತೇಲಿತು

ಚಾಚಿ ಕರವ ಲಕುಮಿಯತ್ತ
ತಾಯಿ ಶಿರವನೊರೆದಳು
ಉಸಿರನಿತ್ತ ನನ್ನ ತಾಯಿ
ಕೊನೆಯ ಉಸಿರು ಎಳೆದಳು

ಸಾಕು ಸಲುಹಿದ ಮಾತೆ ಇನ್ನು
ನಮ್ಮ ನಗಲಿ ಪೋದಳು
ಮಾರ್ಗದರ್ಶನಕೆಂದು ಬಾನಲಿ
ತಾರೆಯಾಗಿ ನಿಂದಳು

ಪ್ರೇಮಮಯಿ ದಯಾಮಯಿ
ಭಾವಮಯಿ ಸಂಸ್ಕಾರಮಯಿ
ಪೂಜ್ಯಮಯಿ ದೈವಮಯಿ
ತೇಜೋಮಯಿ ಆನಂದಮಯಿ

ಮಾತೃ ವಿಯೋಗದ ಶೋಕದಲ್ಲಿ
ಮಾತೃತ್ವದ ಮರ್ಮವ ಅರಿತೆನು
ಮಾನವನ ಅಸ್ಥಿರತೆಯಲ್ಲಿ
ಮಾನವತೆಯ ಸ್ಥಿರತೆಯ ಕಂಡೆನು


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+