ಒಸಾ-ಮಾ ಒಸಾ-ಮಾ
- ಕೆ. ತ್ರಿವೇ-ಣಿ ಶ್ರೀನಿ-ವಾ-ಸ-ರಾ--ವ್, ನ್ಯೂಜ-ರ್ಸಿ
ಎಲ್ಲೆಡೆ ಇದೇ ಹೆಸರು ಒಸಾಮಾ ಒಸಾಮಾಕ್ರೌರ್ಯದಲಿ ನೀನು ನಿಜಕ್ಕೂ ನಿಸ್ಸೀಮ
ಮುಗಿಸಿ ನಗುತಿಹೆ ಮಾರಣಹೋಮ
ನಿನ್ನ ಸೋದರನೇನೋ ಆ ಕಾಲ ಯಮ
ಬೆಟ್ಟಗುಡ್ಡಗಳಲ್ಲಿ ತರಬೇತಿ ಶಿಬಿರ
ಸಾವಿನ ಬಾಯಾಳು ನುಗ್ಗಲು ಸಮರ
ಕೇಳದೆ ಜನರ ಚೀರಾಟ ಹಾಹಾಕಾರ
ಮುಟ್ಟಿದ್ದೆಲ್ಲ ಬೂದಿಯಾಗಿಸುವ ಭಸ್ಮಾಸುರ
ಜನರ ಕೊಲ್ಲಲು ವಿಧ ವಿವಿಧ ಪ್ರಯೋಗ
ಹೊಸಹೊಸ ರೂಪದಿ ನೂರಾರು ರೋಗ
ಮಾನವತೆ ಮಮಕಾರಕ್ಕೆ ಇನ್ನೆಲ್ಲಿದೆ ಜಾಗ ?
ಕ್ಷಣ ಕ್ಷಣಕೂ ಕ್ಷೀಣಿಸುತ್ತಿದೆ ವಿಶ್ವಶಾಂತಿಯ ರಾಗ
ನೀನರಿವ ಭಾಷೆಯಾಂದೇ ಗನ್ನು ಚೂರಿ ಚಾಕು
ಆಡುವ ಕೂಸುಗಳ ಕೈಗೆ ಕೊಟ್ಟೆ ಬಂದೂಕು
ನೆರೆಹೊರೆಯ ಸಂಬಂಧ ಆಗಿದೆ ಸಿಕ್ಕು ಸಿಕ್ಕು
ನಿಲ್ಲಿಸು ಅಟ್ಟಹಾಸ ಇನ್ನು ಸಾಕು ಸಾಕು
ಬಯಸಿಹೆ ಇಂಗ್ಲೆಂಡ್ ಅಮೆರಿಕವ ಮಾಡಲು ಹಣ್ಣಣ್ಣು
ತಣ್ಣಗಿಹ ಭಾರತಕ್ಕೂ ನಿನ್ನ ಕೆಂಗಣ್ಣು
ಸಾಮ ದಾನ ಭೇದಕೂ ತೆರೆಯದೆ ನಿನ್ನ ಕಣ್ಣು
ಈಗ ದಂಡನೆಯ ಫಲವ ನೀನೇ ಉಣ್ಣು
ಇದ್ದರೆ ಇರಲಿ ಬಿಡಿ ದೇಶದೇಶದ ನಡುವೆ
ಗಡಿ ನಿಯಂತ್ರಣ ರೇಖೆ
ಮನಸು ಮನಸಿನ ನಡುವೆ ಹೃದಯ ಹೃದಯದ ನಡುವೆ
ಧರ್ಮ, ಮತ, ಭಾಷೆಗಳ ನಿರ್ಬಂಧವೇಕೆ ?
ಸರ್ವಧರ್ಮದ ತಿರುಳು ಶ್ವೇತ ಶಾಂತಿಯ ಹೂವು
ಯಾವ ದೈವಕು ಸಮ್ಮತವಲ್ಲ ಸಾವು ನೋವು
ಇಸ್ಲಾಮಿನ ನೆಪದಿ ಉಗ್ರತೆಯ ಹಾವು
ಶಿಕ್ಷಿಸದೆ ಸಲವುಹನಾ ನಿನ್ನ ಅಲ್ಲಾಹು ?












Click it and Unblock the Notifications