ಕ್ಯಾಲಿಫೋರ್ನಿಯಾ- ಸಿಲಿಕಾನ್ ಕಣಿವೆಯ ವೇಗದ ಬದುಕಿನ ನಡುವೆಯೂ ಮೊದಲ ಪ್ರೇಮದ ನೆನಪುಗಳನ್ನು ಉಳಿಸಿಕೊಂಡಿರುವುದು ಲಕ್ಷ್ಮೀಕಾಂತ್‌ರ ಕಾವ್ಯದ ವಿಶೇಷ. ಉತ್ಸಾಹಿ ಕವಿಯ ಕಾವ್ಯದ ಮೂರು ಸೆಳಕುಗಳು ನಿಮ್ಮ ಓದಿಗೆ.
ಮಗ ಅಮೇರಿಕಾದಲ್ಲಿದ್ದಾನೆ
- ವಿ. ಲಕ್ಷ್ಮೀಕಾಂತ್
ಕೆಲಸವಿಲ್ಲದೆ ಅಲೆಯುತ್ತಿದ್ದ
ಇದ್ದಕ್ಕಿದ್ದಂತೆ ಅದೇನೋ ಜಾವ ಕಲಿತ
ಈಗ ಮಗ ಅಮೇರಿಕಾದಲ್ಲಿದ್ದಾನೆ.
ಆಗೊಮ್ಮೆ, ಈಗೊಮ್ಮೆ ಪತ್ರ ಬರೆಯುತ್ತಾನೆ.
ವಾರಕ್ಕೊಮ್ಮೆ ಫೋನ್ ಮಾಡುತ್ತಾನೆ.
ಅದೇನೋ ಕ್ಲೈಂಟ್ ಅಂತೆ, ಪ್ರಾಜೆಕ್ಟ್ ಅಂತೆ
ಅರ್ಥವಾಗದು ನಮಗೊಂದು ಅವನ ಭಾಷೆ.
ಆ ದೇಶದ ಹಸಿರು ಚೀಟಿ ಸಿಕ್ಕರೆ
ಅಲ್ಲೇ ಇರುತ್ತಾನಂತೆ. ಹುಡುಗಿ ನೋಡಲು
ಎರಡು ವಾರದ ಮಟ್ಟಿಗೆ ಬರುತ್ತಾನಂತೆ.
ಹುಡುಗಿ ಸಹ ಇಂಜೀನಿಯರೇ ಆಗಿರಬೇಕಂತೆ .
ಕಣ್ಣೆದುರಿಗಿದ್ದ ಮಗ ಈಗ
ಕಾಣೆಯಾಗಿದ್ದಾನೆ. ದೂರದ
ದೇಶದಲ್ಲಿ ನೆಲೆ ಹುಡುಕುತ್ತಿದ್ದಾನೆ.
ಹೇಳಿಕೊಳ್ಳಲು ಮಾತ್ರ- ‘ ಮಗ ಅಮೇರಿಕಾದಲ್ಲಿದ್ದಾನೆ’ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications