ಸ್ಮರಣೆ

Jyothi Mahadev
ಹೊನಲಿನಲೆಯಂತೆ ನಲಿವ ಕೇಶ ಗಂಗೆ,
ತೆನೆಯ ತೂಗುವ ಬಯಲಂಥ ನಗೆ ತುಂಗೆ;
ಮುಗಿಲು-ಸಾಗರ ಪರಿಧಿ ಹೃದಯ ವೈಶಾಲ್ಯ,
ಅಗಲಿದಾಗಲೆ ಅರಿವು; ಮನವು ನೈರ್ಮಾಲ್ಯ.

ನೆರೆಹೊರೆಯ ಸುಂದರಿಯ ಸೌಂದರ್ಯ ಸೆಳೆದು,
ಅರೆಬಿರಿದ ಕಣ್ಣಲ್ಲೆ ಅವಳತ್ತ ನಡೆದು;
ಮತ್ತು-ಮೆತ್ತೆಗಳ ರಾಜ್ಯದಲಿ ಮೈ ಮರೆಯೆ,
ಸುತ್ತುವುದು ನುಣ್ಣನೆಯ ರೇಶ್ಮೆ ಎಳೆಯೆಳೆಯೆ.

ಹೊಳೆವ ತಿಳಿನೀರ ಕೊಳ ಎಷ್ಟಿದ್ದರೇನೀಗ,
ನಲಿವ ಹೊಂದಾವರೆಗಳಿಲ್ಲವಾದಾಗ;
ಸವೆದ ದಾರಿಯ ಕೊನೆಯ ತಿರುವಿನಲಿ ನಿಂತು,
ಅವಲೋಕಿಸಿದರೊಂಟಿತನ ಜಿಗಿದೆದ್ದು ಬಂತು.

ಮತ್ತೆ ಮರುಕಳಿಸುವುದು ಹೊತ್ತವಳ ನೆನಹು,
ಅತ್ತು ಅತ್ತರು ಸಿಗದು, ಮತ್ತವಳ ಮಡಿಲು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+