ನಗರ ಕಾವ್ಯ
*ಪ್ರೀತಿಯ ಜನಾರ್ಧನ
ಕಾಲೇಜು ಹುಡುಗೀರ
ಮುಖದ ತುಂಬೆಲ್ಲ
ಮೊಡವೆ.
ಇತ್ತಿತ್ತಲಾಗಿ ಅವರಿಗಿಲ್ಲ
ಯಾವುದೇ ಗೊಡವೆ
ಏಕೆಂದ್ರೆ ಅದು ಈಗ
ಫ್ಯಾಷನ್ ಎಂಬ
ಒಡವೆ!
*
ಈ ಬೆಂಗ್ಳೂರಲ್ಲಿ
ಜೀವನವು ನಿಜಕ್ಕೂ
ಜೋಕಾಲಿ
ಇದ್ದರೆ
ನೂರಾರು
ಖಯಾಲಿ !
*
ನಗರದಲ್ಲಿ ಎಲ್ಲೆಲ್ಲೂ
ಕೊಲೆ-ಸುಲಿಗೆ
ದರೋಡೆ-ಅತ್ಯಾಚಾರ
ಸಾಂಗ್ಲಿಯಾನ ಹೇಳ್ತಿದ್ರಂತೆ
ಸಾಂತಿ ಇಲ್ಲ , ಸಂಬ್ರಾಂ ಇಲ್ಲ
ಇದೆಲ್ಲೀದು ಗಾಚಾರ...
*
ಹಲವು ಮೂಲಗಳಿಂದ
ಕದ್ದು ನಿರ್ಮಿಸಿದ
ಚಲನಚಿತ್ರವನ್ನ
ಒಂದೇ ಮಾತಲ್ಲಿ
ವಿವರಿಸಿ ಹೇಳಿದರೆ
ಚಲನ‘ಚಿತ್ರಾನ್ನ’!












Click it and Unblock the Notifications