ಅಂದು ಉಪನ್ಯಾಸಕಿ, ಇಂದು ಸಾಹಿತ್ಯ ಪ್ರಸಾರಕಿ
ಬೆಂಗಳೂರು, ಮಾ, 8: ಅಯ್ಯೋ ಎಷ್ಟು ಹುಡುಕಿದ್ರೂ ಸಿಕ್ತಾ ಇಲ್ಲಾ ಮಾರಾಯಾ, ಸಪ್ನ ಬುಕ್ ಹೌಸೂ ನೋಡಿದೆ, ಅಂಕಿತ ಪ್ರಕಾಶನಕ್ಕೂ ಹೋಗಿ ಬಂದೆ ಎಲ್ಲಿಯೂ ಸಿಕ್ತಾ ಇಲ್ಲ. ನನಗೆ ನೇಮಿಚಂದ್ರರ 'ಯಾದ್ ವಶೇಮ್' ಬೇಕಿತ್ತು ಎಂದು ಸ್ನೇಹಿತನೊಬ್ಬ ಹೇಳಿದಾಗ ನಾನು ಸಹ ನೀರುತ್ತರವಾಗಿದ್ದೆ.
ಹಳೆ ಚಂದಾಮಾಮ ಓದಬೇಕಿತ್ತು, ನನ್ನ ಮಗನಿಗೆ ಅದನ್ನು ತೋರಿಸಿ ನೀತಿ ಕತೆಗಳ ಬಗ್ಗೆ ತಿಳಿಹೇಳಬೇಕಿತ್ತು. ವಿಕ್ರಮಾದಿತ್ಯ ಬೇತಾಳದ ಸರಣಿ ಓದೋ ಮಜಾನೇ ಬೇರೆ ಎಂದು ಅಕ್ಕ ಹೇಳಿದಾಗ ಈಗೆಲ್ಲಿ ಚಂದಾಮಾಮ? ನಿನ್ನ ಮಗನಿಗೆ ರಾತ್ರಿ ಆಕಾಶ ತೋರಿಸು, ಎಂದು ಬೈದಿದ್ದು ನೆನಪಿದೆ.[ಸಹನೆಯ ಸಾಕಾರ ಮೂರ್ತಿಗಿರಲಿ ನಮ್ಮದೊಂದು ಸಲಾಮ್]
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ ವಿಡಿಯೋ ನೋಡಿ:
ಆದರೆ ಈ ಎಲ್ಲ ಪುಸ್ತಕಗಳ ಜತೆಗೆ ಅಪರೂಪದ ಸಾಹಿತ್ಯ ಭಂಡಾರವೇ ಇರುವ ಪುಸ್ತಕದ ಅಂಗಡಿಯೊಂದು 'ಶ್ರೀ ಬುಕ್ ಬಜಾರ್' ಹೆಸರಿನಲ್ಲಿ ಸಾಹಿತ್ಯ ಹಂಚುತ್ತಿದೆ. ಇದರಲ್ಲೇನು ವಿಶೇಷ ಎಲ್ಲ ಪುಸ್ತಕ ಅಂಗಡಿಯಂತೆ ಇದು ಎಂದು ಮೂಗು ಮುರಿಯೋದು ಬೇಡ. ಈ ಅಂಗಡಿಯ ಸಂಪೂರ್ಣ ಹೊಣೆ ಹೊತ್ತಿರುವುದು ಒಬ್ಬ ವಯೋವೃದ್ಧ ಮಹಿಳೆ.
ಬೆಂಗಳೂರು ಶ್ರೀನಿವಾಸನಗರದ ನಿವಾಸಿ ಸುಲೋಚನಾ ಕತ್ರಿಗುಪ್ಪೆಯ ಬಿಗ್ ಬಜಾರ್ ಪಕ್ಕದಲ್ಲಿ ಕಳೆದ 4 ವರ್ಷಗಳಿಂದ ಶ್ರೀ ಬುಕ್ ಬಜಾರ್ ಹೆಸರಿನಲ್ಲಿ ಅಂಗಡಿಯೊಂದನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅಂಗಡಿಗೆ ಆಕರ್ಷಕ ಬೋರ್ಡ್ ಬ್ಯಾನರ್ ಗಳಿಲ್ಲ. ಆದರೆ ಒಳಗೆ ಜ್ಞಾನ ಭಂಡಾರವೇ ಅಡಗಿದೆ.
ಈಕೆ ಪುಸ್ತಕ ಮಾರಾಟ ಮಾಡುತ್ತಾಳೆ ನಿಜ, ಆದರೆ ಅದರಲ್ಲಿ ಅಪಾರ ಲಾಭ ಗಳಿಸಬೇಕೆಂಬ ಉದ್ದೇಶವಿಲ್ಲ. ಮರೆಯಾಗುತ್ತಿರುವ ಪುಸ್ತಕ ಪ್ರೀತಿಯ ನಡುವೆ ಅದನ್ನೇ ನಂಬಿಕೊಂಡು ಸಾಹಿತ್ಯ ಹಂಚುತ್ತಿರುವ ಮಹಿಳೆಗೊಂದು ಸಲಾಂ ಹೇಳಲೇಬೇಕು ......

ಉಪನ್ಯಾಸಕಿ ಈಗ ಸಾಹಿತ್ಯ ಪ್ರಸಾರಕಿ
ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದ ಸುಲೋಚನಾ, ಪಿಯುಸಿ ಉಪನ್ಯಾಸಕಿಯಾಗಿ ನಿವೃತ್ತಿಯಾದರು. ಸುಲೋಚನಾ ಅವರ ಪತಿ ಎಂ.ಕೆ.ಶ್ರೀನೀವಾಸ್ ಪುಸ್ತಕದ ಅಂಗಡಿ ನಡೆಸಿಕೊಂಡು ಬರುತ್ತಿದ್ದರು. ಆದರೆ 2009 ರಲ್ಲಿ ಅವರು ತೀರಿಕೊಂಡ ಮೇಲೆ ಸಂಪೂರ್ಣರ ಜವಾಬ್ದಾರಿ ಸುಲೋಚನಮ್ಮ ಅವರ ಮೇಲೆ ಬಿತ್ತು.

ಮೊದಲು ಗ್ರಂಥಾಲಯವಾಗಿತ್ತು
1975 ರಲ್ಲಿ ಮಲ್ಲೇಶ್ವರಂ ನಲ್ಲಿ ಶ್ರೀನಿವಾಸ ಅವರು ಚಿಕ್ಕದಾದ ಪುಸ್ತಕದ ಅಂಗಡಿ ಆರಂಭಿಸಿದ್ದರು. ನಂತರ ಜಯನಗರದ ಗಣೇಶ ದರ್ಶಿನಿ ಪಕ್ಕ ಸ್ವಲ್ಪ ದೊಡ್ಡದಾದ ಅಂಗಡಿ ಹಾಕಿದ್ದರು. ಇದೊಂದು ಗ್ರಂಥಾಲಯದಂತೆಯೂ ಕೆಲಸ ಮಾಡುತ್ತಿತ್ತು. ನಿರ್ದಿಷ್ಟ ಶುಲ್ಕ ನೀಡಿ ಪುಸ್ತಕವನ್ನು ಓದಿ ಹಿಂದಿರುಗಿಸಬಹುದಿತ್ತು. ಆದರೆ ಬಾಡಿಗೆ ಹೆಚ್ಚು ಎಂಬ ಕಾರಣಕ್ಕೆ ಅಲ್ಲಿಂದ ಅಂಗಡಿಯನ್ನು ಕತ್ರಿಗುಪ್ಪೆಗೆ ಸ್ಥಳಾಂತರಿಸಲಾಯಿತು.

ಗ್ರಂಥಾಲಯ ವ್ಯವಸ್ಥೆ ಬಂದ್ ಆಗಿದ್ದು ಯಾಕೆ?
ನನಗೆ ಪ್ರತಿದಿನ ಆಗಮಿಸಿ ಅಂಗಡಿ ಬಾಗಿಲು ತೆಗೆಯಲು ಸಾಧ್ಯವಿಲ್ಲ. ಯಾರೋ ಪುಸ್ತಕ ಪಡೆದವರು ಅದನ್ನು ಹಿಂದಿರುಗಿಸಲು ಬೈಕ್ ನಲ್ಲಿ ಆಗಮಿಸುತ್ತಾರೆ. ಆದರೆ ನಾನಿರದ್ದನ್ನು ನೋಡಿ ಕರೆ ಮಾಡಿ ಕೇಳುತ್ತಾರೆ. ನಮ್ಮ ಪೆಟ್ರೋಲ್ ಚಾರ್ಜ್ ಕೋಡೋರು ಯಾರು ಎಂದು ಪ್ರಶ್ನೆ ಮಾಡುತ್ತಾರೆ. ಹಾಗಾಗಿ ಈ ಗೊಂದಲಗಳೇ ಬೇಡ ಎಂದು ಗ್ರಂಥಾಲಯ ರೀತಿಯ ಪದ್ಧತಿ ಬಂದ್ ಮಾಡಿದ್ದೇನೆ ಎಂದು ಸುಲೋಚನಮ್ಮ ಹೇಳುತ್ತಾರೆ.

ವಿವಿಧ ಆಫರ್ ಗಳಿವೆ
ಕೆಲ ಅಪರೂಪದ ಕಾಮಿಕ್ ಗಳು ಇಲ್ಲಿ ಮಾತ್ರ ದೊರೆಯುತ್ತವೆ. ಕಾಮಿಕ್ ಮತ್ತು ಚಂದಮಾಮ ಪುಸ್ತಕಗಳ ಮೇಲೆ ಒಂದು ಕೊಂಡರೆ ಒಂದು ಉಚಿತ ಎಂಬ ಆಫರ್ ಗಳನ್ನು ಸಹ ಸುಲೋಚನಮ್ಮ ನೀಡಿದ್ದಾರೆ

ಮಕ್ಕಳೆಲ್ಲಿದ್ದಾರೆ?
ಸುಲೋಚನಮ್ಮ ಅವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳಿದ್ದಾರೆ. ಇಬ್ಬರು ವಿದೇಶದಲ್ಲಿ ನೆಲೆಸಿದ್ದು ಪುಸ್ತಕ ಅಂಗಡಿಯನ್ನು ಯಾರಿಗಾದರೂ ಮಾರಾಟ ಮಾಡಿ ತಮ್ಮ ಜತೆಗೆ ಬರುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಸುಲೋಚನಮ್ಮ ಅವರ ಪುಸ್ತಕ ಪ್ರೀತಿ ಅವರನ್ನು ಇಲ್ಲಿಯೇ ಇರಿಸಿಕೊಂಡಿದೆ

ಪುಸ್ತಕ ಜೋಡಣೆ ಹೇಗೆ?
ಹೌದು..ಒಬ್ಬಳೆ ಮಹಿಳೆ ಇಷ್ಟೊಂದು ಪುಸ್ತಕಗಳ ನಿರ್ವಹಣೆಯನ್ನು ಹೇಗೆ ನಿಭಾಯಿಸುತ್ತಾಳೆ? ಎಂಬ ಪ್ರಶ್ನೆ ಮೂಡಬಹುದು. ಇದಕ್ಕೆ ಸುಲೋಚನಮ್ಮ ಹೊಸದೊಂದು ಕ್ರಮ ಕಂಡುಕೊಂಡಿದ್ದಾರೆ. ವಿದ್ಯಾರ್ಥಿಗಳು, ಇಂಜಿನಿಯರ್ ಗಳೇ ಪುಸ್ತಕ ಜೋಡಕರು. ಪುರಸೋತ್ತು ಇದ್ದಾಗ ಆಗಮಿಸುವ ವಿದ್ಯಾರ್ಥಿಗಳಿಗೆ ಪುಸ್ತಕ ಜೋಡಣೆ ಕೆಲಸವನ್ನು ಸುಲೋಚನಮ್ಮ ನೀಡುತ್ತಾರೆ ಜತೆಗೆ ಅವರಿಗೆ ಗಂಟೆ ಲೆಕ್ಕದಲ್ಲಿ ಹಣವನ್ನು ನೀಡುತ್ತಾರೆ.

ಬೆಲೆ ಕಡಿಮೆ
ಇಲ್ಲಿ ಹಳೆಯ ಪುಸ್ತಕಗಳು, ಸಂಸ್ಕೃತ ಗ್ರಂಥಗಳು, ಇಂಗ್ಲಿಷ್ ನೊವೆಲ್ ಗಳು, ರೆಫರೆನ್ಸ್ ಪುಸ್ತಕಗಳು, ಪ್ರೇಮ ಕತೆಗಳು, ಭೈರಪ್ಪ ತೇಜಸ್ಚಿಯವರ ಪುಸ್ತಕಗಳು ಎಲ್ಲವೂ ಇವೆ. ಕನ್ನಡ, ತೆಲುಗು, ತಮಿಳು,ಇಂಗ್ಲಿಷ್ ಭಾಷೆಯ ಸಾಹಿತ್ಯ, ಕಲೆ-ಸಾಹಿತ್ಯ, ಆರೋಗ್ಯ, ಪ್ರವಾಸ ಹೀಗೆ ಎಲ್ಲ ಬಗೆಯ ಕಲೆಕ್ಷನ್ ಇದೆ. ಉಳಿದ ದೊಡ್ಡ ಪುಸ್ತಕ ಅಂಗಡಿಗೆ ಹೋಲಿಸಿದರೆ ಬೆಲೆ ಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ

ಮಾರಾಟಕ್ಕೆ ಸಿದ್ಧನಿಲ್ಲ
ನನಗೆ ಇದರಲ್ಲೇ ತೃಪ್ತಿ ಇದೆ, ಮೈಗೆ ಯಾವ ರೋಗಗಳಿಲ್ಲ. ಯಾರೋ ಬಂದು ಹೋಲ್ ಸೇಲ್ ಮಾದರಿಯಲ್ಲಿ ಪುಸ್ತಕ ಖರೀದಿಸುತ್ತೇನೆ ಎಂದು ಹೇಳಿ ಹೋಗ್ತಾರೆ. ಅಂದಾಜು ಬಂದ ಬೆಲೆಗೆ ಕೇಳ್ತಾರೆ. ಆದರೆ ಇಲ್ಲಿರುವ ಪುಸ್ತಕಗಳ ಒಟ್ಟು ಬೆಲೆ ನನಗೆನೇ ಗೊತ್ತಿಲ್ಲ. ಹಾಗಾಗಿ ಹೋಲ್ ಸೇಲ್ ಮಾದರಿಯಲ್ಲಿ ಮಾರಾಟ ಮಾಡಲು ಸಿದ್ಧನಿಲ್ಲ ಎಂಬುದು ಸುಲೋಚನ ಅವರ ಸ್ಪಷ್ಟ ಮಾತು.

ನೆರವಿಗೆ ನಿಂತವರು
ಸುಲೋಚನ ಅವರ ಹಣಕಾಸು ವ್ಯವಹಾರಗಳಿಗೆ ಮತ್ತು ಅನಿವಾರ್ಯ ಸಂದರ್ಭದಲ್ಲಿ ನೆರವು ನೀಡುತ್ತಿರುವವರು ಅಂಗಡಿ ಜಾಗದ ಮಾಲೀಕ ನಿರಂಜನ್. ಅವರು ಸಹ ಒಬ್ಬ ಪುಸ್ತಕ ಪ್ರೇಮಿ.

ಆನ್ ಲೈನ್ ಐಡಿಯಾನೂ ಇದೆ
ಪುಸ್ತಕಗಳನ್ನು ಆನ್ ಲೈನ್ ಮೂಲಕ ಓದುಗರಿಗೆ ತಲುಪಿಸಬೇಕು ಎಂಬ ಯೋಚನೆಯೂ ಇದೆ. ಕೆಲ ಪ್ರವಾಸಿ ತಾಣದ ಬಗೆಗಿನ ಮಾಹಿತಿ ಒಳಗೊಂಡ ಪುಸ್ತಕಗಳನ್ನು ಮೊದಲ ಪ್ರಯತ್ನವಾಗಿ ಆನ್ ಲೈನ್ ಗೆ ಅಳವಡಿಸಬೇಕೆಂದಿದ್ದೇನೆ. ಇದಕ್ಕೆ ಸಾಫ್ಟ್ ವೇರ್ ಇಂಜಿನಿಯರ್ ಹುಡುಗಿಯೊಬ್ಬಳು ನೆರವಾಗಲಿದ್ದಾಳೆ ಎಂದು ಸುಲೋಚನಮ್ಮ ತಿಳಿಸುತ್ತಾರೆ.

ನೀವು ಧಾವಿಸಬಹುದು
ಪುಸ್ತಕಗಳ ಭಂಡಾರ ಒಂದರ ಮೇಲೊಂದರಂತೆ ಬಿದ್ದಿದ್ದು ಜೋಡಣೆ ಸವಾಲಿನ ಕೆಲಸವಾಗಿ ಪರಿಣಮಿಸಿದೆ. ವಯೋವೃದ್ಧ ಮಹಿಳೆಯೊಬ್ಬರಿಂದ ಅದು ಸಾಧ್ಯವಿಲ್ಲ. ಆದರೆ ಸುಲೋಚನಮ್ಮ ಕೈ ಚೆಲ್ಲಿ ಕುಳಿತುಕೊಂಡಿಲ್ಲ. ನೀವು ಸಹ ಪುಸ್ತಕ ಪ್ರೇಮಿಯಾಗಿದ್ದರೆ 9663880781ಕ್ಕೆ ಕರೆ ಮಾಡಿ ವಯೋವೃದ್ಧ ಮಹಿಳೆಯ ಸಾಹಿತ್ಯ ಪ್ರಸಾರ ಕೆಲಸಕ್ಕೆ ಕೈ ಜೋಡಿಸಬಹುದು.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications