Get Updates
Get notified of breaking news, exclusive insights, and must-see stories!

ಹಿರಿಯ ಕವಿ ಹೆಂಬೆರಾಳು ಶಾಂತರಸ ವಿಧಿವಶ

Shantarasaಗುಲ್ಬರ್ಗ, ಏ.13: ಹಿರಿಯ ಕವಿ ಶಾಂತರಸ ಹೆಂಬೆರಳು ಭಾನುವಾರ ಸಂಜೆ 6.30ಕ್ಕೆ ಗುಲ್ಬರ್ಗದ ತಮ್ಮ ಪುತ್ರನ ಮನೆಯಲ್ಲಿ ನಿಧನರಾದರು. ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶಾಂತರಸರಿಗೆ ಪುತ್ರರಾದ ಡಾ.ದೇವರಾಜ್, ಬಸವಪ್ರಭು ಹಾಗೂ ಪುತ್ರಿಯರಾದ ಕವಯಿತ್ರಿ ಎಚ್.ಎಸ್.ಮುಕ್ತಾಯಕ್ಕ ಹಾಗೂ ಭಾರತಿ ಇದ್ದಾರೆ. ಶಾಂತರಸ ಅವರು ಹಲವು ಗಝಲ್, ರುಬಾಯಿ, ಫರ್ದ್ ಗಳನ್ನು ಉರ್ದುವಿನಿಂದ ಕನ್ನಡಕ್ಕೆ ಅನುವಾದಿಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದರು.

ಶಾಂತರಸರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಹೆಂಬೇರಾಳು ಗ್ರಾಮದಲ್ಲಿ. ಅವರ ತಂದೆ ಚನ್ನಬಸಯ್ಯ ಹಿರೇಮಠ ಕನ್ನಡ ಮತ್ತು ಸಂಸ್ಕೃತ ಪಂಡಿತರಾಗಿದ್ದರು. ಶಾಂತರಸರು ರಾಯಚೂರಿನಲ್ಲಿ ಸತ್ಯ ಸ್ನೇಹಿ ಪ್ರಕಾಶನವನ್ನು ಪ್ರಾರಂಭಿಸಿದ್ದರು. ರಾಯಚೂರಿನ ಹಮ್‌ದರ್ದ್ ಸೊಸೈಟಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ 1981ರಲ್ಲಿ ಅದೇ ಸಂಸ್ಥೆಯ ಜೂನಿಯರ್ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದರು. 1995ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಪಠ್ಯಪುಸ್ತಕ ಸಮಿತಿಯಲ್ಲೂ ಶಾಂತರಸರು ಸೇವೆ ಸಲ್ಲಿಸಿದ್ದಾರೆ.


ಶಾಂತರಸ ಅವರ ಕೃತಿಗಳು:
ಕವನ ಸಂಕಲನ

* ಮಾನಸಗಳ್ಳಿ
* ಬಯಲು ಸೀಮೆಯ ಬಿಸಿಲು
* ಕನ್ನಡ ಗಜಲ್
* ಸಮಗ್ರ ಕಾವ್ಯ

ಕಥಾ ಸಂಕಲನ

* ಬಡೇಸಾಬು ಪುರಾಣ
* ನಾಯಿ ಮತ್ತು ಪಿಂಚಣಿ
* ಸ್ವಾತಂತ್ರ್ಯ ವೀರ
* ಉರಿದ ಬದುಕು
* ಸಮಗ್ರ ಕಥೆಗಳು

ಕಾದಂಬರಿ

* ಸಣ್ಣ ಗೌಡಸಾನಿ

ನಾಟಕ

* ಸತ್ಯಸ್ನೇಹಿ
* ನಂಜು ನೊರೆವಾಲು
* ಮರೆಯಾದ ಮಾರಮ್ಮ
* ಶರಣ ಬಸವೇಶ್ವರ (ರೇಡಿಯೊ ನಾಟಕ)

ಜೀವನ ಚರಿತ್ರೆ

* ಸಿದ್ಧರಾಮ (ಅಮರಾನಂದರೊಡನೆ ಸಹಲೇಖನ)
* ಆಯ್ದಕ್ಕಿ ಮಾರಯ್ಯ ದಂಪತಿಗಳು
* ನಾರದಗಡ್ಡೆ ಚೆನ್ನಬಸವ ಸ್ವಾಮಿಗಳು
* ಬಸರೀಗಿಡದ ವೀರಪ್ಪ
* ಕಲಬುರ್ಗಿಯ ದೊಡ್ಡಪ್ಪ ಅಪ್ಪ

ಪ್ರಬಂಧ

* ಬಹುರೂಪ

ಸಂಶೋಧನೆ

* ಬಸವಪೂರ್ವ ಯುಗದ ಶರಣರು
* ಮೊದಲ ವಚನಕಾರ ಮಾದಾರ ಚನ್ನಯ್ಯ
* ಎಡದೊರೆ ನಾಡಿನ ಅನುಭಾವಿ ಕವಿಗಳು
* ಬಳ್ಳಾರಿ ಜಿಲ್ಲೆಯ ಶಿವಶರಣರು

ಸಂಪಾದನೆ

* ಸಂಗವಿಭು ವಿರಚಿತ ಮೂರು ಶತಕ
* ವೀರಭದ್ರ ಕವಿ ವಿರಚಿತ ಅರವತ್ತುಮೂರು ಪುರಾಣ
* ಕೂಡಲೂರು ಬಸವಲಿಂಗ ಶರಣರ ಸ್ವರವಚನಗಳು
* ಕಲ್ಲೂರು ಲಿಂಗಣ್ಣವೊಡೆಯ ವಿರಚಿತ ಬಾರಮಾಸ

ಸಂಕಲನ ಸಂಪಾದನೆ

* ಮುಸುಕು ತೆರೆ (ವಿವಿಧ ಲೇಖಕರ ಕಥೆ,ಕವನ, ಪ್ರಬಂಧ)
* ಕಲ್ಯಾಣದೀಪ (ಪ್ರಬಂಧಗಳು;ಅಮರಾನಂದರೊಡನೆ)
* ಬೆನ್ನ ಹಿಂದಿನ ಬೆಳಕು (27 ಕವಿಗಳ ಕವಿತೆಗಳು)
* ರಸಿಕ ಚಕ್ರಿ ಹರಿಹರದೇವ (ವಿಮರ್ಶಾತ್ಮಕ ಲೇಖನಗಳು:ಡಾ|ಬಿ.ಸಿ.ಜವಳಿಯವರೊಡನೆ)
* ನಮನ (ಎ.ಸಿ.ದೇವೇಗೌಡರ ಸಂಭಾವನಾ ಗ್ರಂಥ: ಡಿ.ಆರ್.ಬಳೂರಗಿಯವರೊಡನೆ)


(ದಟ್ಸ್‌ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+