ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಟ್ಟೂರರಿಗೆ ಕರ್ನಾಟಕರತ್ನ?

By Staff
|
Google Oneindia Kannada News

ತೊಂಭತ್ತೆಂಟು ವರ್ಷಗಳು ನನಗೆ ಲೆಕ್ಕವೇ ಇಲ್ಲ !
ನಿವೃತ್ತ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್‌ ಅವರ ಈ ಮಾತು ಅವರನ್ನು ಬಲ್ಲವರಾರಿಗೂ ಅಚ್ಚರಿಯಾಗಿ ತೋರಲಿಲ್ಲ . ಕಾರ್ಯಕ್ರಮಗಳಿಗೆ 98ರ ಇಳಿವಯಸ್ಸಿನಲ್ಲೂ ಸಮಯಕ್ಕೆ ಸರಿಯಾಗಿ ಬರುವ, ಬೆನ್ನು ಬಾಗಿದ್ದರೂ ವೇದಿಕೆ ಏರಲು ಯಾರ ನೆರವನ್ನೂ ಬಯಸದ ನಿಟ್ಟೂರರಿಗೆ ಅವರೇ ಮಾದರಿ. ಉತ್ಸಾಹಕ್ಕಿಂತ ಉಬ್ಬಸವೇ ಜಾಸ್ತಿಯಾಗಿರುವ ಉದ್ಯಮ ನಗರಿಯ ಮಂದಿಯ ಪಾಲಿಗವರು ಅಚ್ಚರಿ, ಚೈತನ್ಯದ ಝರಿ!

ಅದು ನಿಟ್ಟೂರರ 99 ನೇ ಜಯಂತಿ ಆಚರಣೆಯ ಕಾರ್ಯಕ್ರಮ. ವೈಎಂಸಿಎ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಈ ಕಾರ್ಯಕ್ರಮವನ್ನು ಪ್ರಗತಿಪರ ಚಿಂತನ ವಕೀಲರ ವೇದಿಕೆಯ ಗೆಳೆಯರು ಪ್ರೀತಿಯಿಂದ ಏರ್ಪಡಿಸಿದ್ದರು. ಸಭಾಂಗಣದ ತುಂಬ ಅಭಿಮಾನಿಗಳು, ಹಿತೈಷಿಗಳು ಕಿಕ್ಕಿರಿದು ನೆರೆದಿದ್ದರು.

ಕಳೆದ 98 ವರ್ಷಗಳನ್ನು ಉತ್ಸಾಹ, ಚಟುವಟಿಕೆ ಹಾಗೂ ದೇಶದ ಬಗೆಗಿನ ಕಾಳಜಿಯನ್ನು ಮೈಗೂಡಿಸಿಕೊಂಡು ಪೂರೈಸಿದ್ದೇನೆ. ನನಗೆ ಸದಾ ಕ್ರಿಯಾಶೀಲನಾಗಿರಬೇಕೆಂಬ ಬಯಕೆ. ನನ್ನಲ್ಲಿ ಉತ್ಸಾಹವನ್ನು ತುಂಬುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡುತ್ತಲೇ ಇವೆ ಎಂದು ನಿಟ್ಟೂರರು ಭಾವುಕತೆಗೆ ಸಂದರು. ಜನ್ಮದಿನದ ಶುಭಾಶಯಗಳಿಗೆ ಧನ್ಯವಾದ ಸಲ್ಲಿಸಿದ ಅವರು, ನಿಮ್ಮಗಳ ಸ್ನೇಹ ಶ್ರೀಮಂತಿಕೆ ನನಗೆ ಅಂದುಕೊಂಡದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದೊರೆತಿದೆ, ವಿಫುಲ ಅನುಭವವನ್ನು ಕಟ್ಟಿಕೊಟ್ಟಿದೆ ಎಂದು ಸಂತೋಷಿಸಿದರು.

ನಿಟ್ಟೂರರಿಗೆ ಕರ್ನಾಟಕ ರತ್ನ ಕೊಡಲು ಶಿಫಾರಸು

ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಇನ್ನೊಂದು ಹೆಸರಾದ ನಿಟ್ಟೂರು ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ಶಿಫಾರಸು ಮಾಡುವುದಾಗಿ ನಿವೃತ್ತ ನ್ಯಾಯಮೂರ್ತಿಗಳಿಗೆ ಶುಭಾಶಯ ಕೋರಿದ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಹೇಳಿದರು.

ಕುಂದದ ಉತ್ಸಾಹದ ನಿಟ್ಟೂರು ಶ್ರೀನಿವಾಸರಾವ್‌ ಅವರು ಮುಂದಿನ ಪೀಳಿಗೆಗೆ ಮಾದರಿ ಎಂದು ಅಲ್ಲಂ ವೀರಭದ್ರಪ್ಪ ಬಣ್ಣಿಸಿದರು. ಕೊಳದ ಮಠದ ಶಾಂತವೀರ ಸ್ವಾಮೀಜಿ, ನ್ಯಾಯಮೂರ್ತಿ ಕೆ.ಶ್ರೀಧರರಾವ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ಇನ್ಫೋ ಇನ್‌ಸೈಟ್‌)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X