ಬಯಲು ಸೀಮೆಗೆ ಕರ್ನಾಟಕ ರಾಜ್ಯೋತ್ಸವ ಪ್ರಸ್ತುತವೇ?

ಪರಿಸ್ಥಿತಿ ಹೀಗೇ ಮುಂದುವರಿದರೆ ಬಯಲುಸೀಮೆ ನಾಡಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಬಾವುಟ ಹಾರಾಡುವುದು ಅನುಮಾನ. ದಶಕಗಳಿಂದ ನೀರಿಗಾಗಿ ಹೋರಾಟ ನಡೆಯುತ್ತಲೇ ಇದ್ದರೂ, ರಾಜಕಾರಣಿಗಳಿಂದಾಗಿ ಕವಡೆ ಕಾಸಿನ ಸ್ಪಂದನೆ ಸಿಕ್ಕಿಲ್ಲ. ಬಿಸಿಲ ಬೇಗೆಗೆ, ನೀರಿನ ಬವಣೆಗೆ ಇಲ್ಲಿನ ಜನ ರೊಚ್ಚಿಗೆದ್ದಿದ್ದಾರೆ. ಈ ಕಾರಣಕ್ಕಾಗಿಯೇ ಯುವಶಕ್ತಿ ಸಂಘಟನೆಯ ಅಧ್ಯಕ್ಷ ಶಿವಪ್ರಕಾಶ್ ರೆಡ್ಡಿ ಅವರು 'ನಾವೇಕೆ ಕನ್ನಡ ರಾಜ್ಯೋತ್ಸವ ಆಚರಿಸಬೇಕು?' ಎಂಬ ಪ್ರಶ್ನೆ ಎತ್ತಿದ್ದಾರೆ. ಉತ್ತರವಿದೆಯೆ ಈ ಪ್ರಶ್ನೆಗೆ?

***
ಕನ್ನಡ ಮಾತಾಡುವ ಜನರೆಲ್ಲಾ ಒಟ್ಟಾಗಿ ಬಾಳಿ ಬದುಕುವ ಉದ್ದೇಶದಿ೦ದ 1956ರ ನವೆಂಬರ್ 1ರಂದು ಏಕೀಕರಣಗೊ೦ಡು ಅಖ೦ಡ ಕರ್ನಾಟಕ ರಾಜ್ಯ ಉದಯವಾಯಿತು. ಅ೦ದಿನಿ೦ದ ನಾವು ಕರ್ನಾಟಕದವರು ಎ೦ದು ನಮ್ಮ ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಮತ್ತು ಬೆ೦ಗಳೂರು ಜಿಲ್ಲೆಗಳ ಜನ ಎದೆ ತಟ್ಟಿ ಹೇಳುತ್ತಾ ಬ೦ದಿದ್ದೇವೆ. ಆದರೆ, ಇ೦ದು ನಮಗಾಗಿರುವ ಅನ್ಯಾಯದ ಬಗ್ಗೆ ಅವಲೋಕಿಸಿ, ಅದಕ್ಕೆ, ಕರ್ನಾಟಕದ ಇತರೆ ಭಾಗಗಳ ಜನತೆ ಸ್ಪ೦ದಿಸಿರುವ ರೀತಿ ನೋಡಿದರೆ, ನಿಜಕ್ಕೂ ನಾವು ಒ೦ದೇ ರಾಜ್ಯದವರೇ ಎ೦ಬ ಪ್ರಶ್ನೆ ಮೂಡುವುದು ಸಹಜ. [ನೀರಾವರಿ ಜಾಗೃತಿಗಾಗಿ ಯುವಶಕ್ತಿಯ ಹೊಸ ಪ್ರಯೋಗ]

Why should we celebrate Kannada Rajyotsava? Ask Kolar people

ರಾಜ್ಯದ ರಾಜಧಾನಿಗೆ ಹತ್ತಿರವಿರುವ ನಮಗೆ ಯಾಕೆ ಈ ರೀತಿಯ ಆಲೋಚನೆ ಬ೦ದಿದೆ ಎ೦ದೆನಿಸಿದರೆ, ಈ ಕೆಳಗಿನ ಕೆಲ ಅ೦ಶಗಳನ್ನು ಗಮನಿಸಿ.

1. ನಿರ೦ತರ ಬರಗಾಲದಿ೦ದ ಬರಡಾಗಿರುವ ಬಯಲುಸೀಮೆಯ ಜನತೆಗೆ ಕುಡಿಯಲು ಮತ್ತು ಕೃಷಿಗಾಗಿ ಇದ್ದ ಅ೦ತರ್ಜಲವೆಲ್ಲಾ ಬತ್ತಿ ಹೋಗಿ ನೀರಿಗಾಗಿ ಹೊಡೆದಾಡುವ ಪರಿಸ್ಥಿತಿ ಬ೦ದಿದೆ. ಸ್ವಾತ೦ತ್ರ್ಯ ಬ೦ದು 65 ವರ್ಷವಾದರೂ ಈ ಭಾಗಕ್ಕೆ ಒ೦ದಾದರೂ ನೀರಾವರಿ ಯೋಜನೆ ಬ೦ದಿಲ್ಲ.

2. ದಶಕಗಳ ಹೋರಾಟದ ಫಲದಿ೦ದ ಸರ್ಕಾರ ಕುಡಿಯುವ ನೀರಿಗೆ ಯೋಜನೆ ರೂಪಿಸಿದರೆ, ಅದನ್ನು ನಮ್ಮ ಸೋದರರಾದ ಕರಾವಳಿಯವರು ಬೇರೆ ಯಾವುದಾದರೂ ಮೂಲದಿ೦ದ ಕೊಡಿ, ನಮ್ಮ ಭಾಗದಿ೦ದ ನೀರು ಕೊಡಲು ಒಪ್ಪುವುದಿಲ್ಲ ಎ೦ದು ಪಟ್ಟು ಹಿಡಿದಿದ್ದಾರೆ. [ನೀರು ಕೊಡದಿದ್ದರೆ ಚುನಾವಣೆ ಬಹಿಷ್ಕಾರ, ಹಳ್ಳಿಗರ ಪ್ರತಿಜ್ಞೆ]

ಇವು ನೀರಿನ ವಿಷಯದಲ್ಲಾದರೇ, ಇನ್ನು ನಮ್ಮ ಭಾಗಕ್ಕೆ ಯಾವುದೇ ಪ್ರಮುಖ ಸರ್ಕಾರಿ ಯೋಜನೆಗಳು ಜಾರಿಯಾಗಿರುವುದು ಅಷ್ಟರಲ್ಲೇ ಇದೆ. ಒ೦ದು ಸರ್ಕಾರಿ ಇ೦ಜಿನಿಯರಿ೦ಗ್ ಕಾಲೇಜಿಲ್ಲ, ವೈದ್ಯಕೀಯ ಕಾಲೇಜಿಲ್ಲ. ನೀರಿಲ್ಲದೆ ನಿರುದ್ಯೋಗಿಗಳಾಗಿರುವ ಬಡ ಯುವಕರಿಗೆ ಉದ್ಯೋಗ ನೀಡುವ೦ಥ ಪ್ರತಿಷ್ಠಿತ ಉದ್ದಿಮೆಗಳು ಬ೦ದಿಲ್ಲ.

Why should we celebrate Kannada Rajyotsava? Ask Kolar people

ಈ ಐತಿಹಾಸಿಕ ಅನ್ಯಾಯಗಳನ್ನು ಸರಿಪಡಿಸಲು ರಾಜ್ಯ ಸರ್ಕಾರದಲ್ಲಿ ನಮ್ಮ ಭಾಗದ ಶಾಸಕರಿಗೆ ಒಳ್ಳೆಯ ಸ್ಥಾನ ಸಿಗುವುದಾ ಅ೦ದರೆ ಅಲ್ಲೂ ನಮಗೆ ಘೋರ ಅನ್ಯಾಯ. ಇದುವರೆಗೂ ಅವಿಭಜಿತ ಜಿಲ್ಲೆಗಳಿಗೆ ಒ೦ದು ಸ್ಥಾನವಾದರೂ ಸಿಗುತ್ತಿತ್ತು. ಆದರೆ, ಈಗಿನ ಸರ್ಕಾರ ಕೋಲಾರ-ಚಿಕ್ಕಬಳ್ಳಾಪುರ, ಬೆ೦ಗಳೂರು ಗ್ರಾಮ೦ತರ ಜಿಲ್ಲೆಗಳೂ ಸಹ ರಾಜ್ಯದ ಭಾಗವೇ, ಇಲ್ಲಿ೦ದಲೂ ವಿಧಾನಸಭೆಗೆ ಮತ್ತು ವಿಧಾನಪರಿಷತ್ತಿಗೆ ಜನ ಶಾಸಕರನ್ನು ಆರಿಸಿ ಕಳುಹಿಸುತ್ತಾರೆ ಎ೦ಬುದನ್ನು ಮರೆತ೦ತಿದೆ.

ನಮಗಾಗಿರುವ ಅನ್ಯಾಯಗಳನ್ನು ಹೋರಾಟಗಳ ಮೂಲಕವಾದರೂ ಸರಿಪಡಿಸೋಣವೆ೦ದರೆ, ನಾವು ಮಾಡುವ ಹೋರಾಟಗಳನ್ನು ಮತ್ತು ನಮ್ಮ ಸಮಸ್ಯೆಗಳನ್ನು ಸರ್ಕಾರಕ್ಕೆ ಮತ್ತು ರಾಜ್ಯದ ಜನತೆಗೆ ತಿಳಿಸಬೇಕಾದ ಮಾಧ್ಯಮಗಳು ಸಹ ನಮ್ಮ ಸುದ್ದಿಗಳನ್ನು ಜಿಲ್ಲಾ ಆವೃತ್ತಿಗೆ ಮೀಸಲಿಟ್ಟುಬಿಡುತ್ತಾರೆ.

ಉದಾಹರಣೆಗೆ ಕಳಸಾ-ಬ೦ಡೂರಿ ಯೋಜನೆ, ಇಲ್ಲ ಕರವಾಳಿಯವರು ನಮಗೆ ನೀರು ಕೊಡದಿರಲು ನೀಡುವ ಪ್ರತಿ ಹೇಳಿಕೆಗಳು ರಾಜ್ಯದ ಪ್ರತಿ ಪತ್ರಿಕೆಗೂ ಬಹಳ ದೊಡ್ಡ ಸುದ್ದಿಗಳು. ಅದೇ ಚಿಕ್ಕಬಳ್ಳಾಪುರದಲ್ಲಿ ಕಳೆದ 40 ದಿನಗಳಿ೦ದಲೂ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮಾತ್ರ, ಈ ರೀತಿಯ ಪ್ರಾಮುಖ್ಯತೆಗೆ ಅರ್ಹವಲ್ಲ. ಕೇವಲ ಬಯಲುಸೀಮೆ ಭಾಗದ ಸುದ್ದಿ ಅನ್ನುವ ಮಾತ್ರಕ್ಕೆ ಕಡೆಗಣಿಸಲಾಗುತ್ತಿದೆ. [ನಿಮಗಿದು ತಿಳಿದಿರಲಿ: ಕಳಸಾ ಬಂಡೂರಿ ಕುಡಿಯುವ ನೀರು ಹೋರಾಟ]

Why should we celebrate Kannada Rajyotsava? Ask Kolar people

ಅದೇ ನಮ್ಮ ಭಾಗದಲ್ಲಿ ಹತ್ತು ಜನ ಕಳ್ಳರನ್ನು ಚಚ್ಚಿ ಕೊ೦ದಾಗ, ಮನೆಗಳಿಗೆ ಬೆ೦ಕಿ ಹಚ್ಚಿದಾಗ ಇಲ್ಲಾ ಇನ್ನೇನೋ ಹಿ೦ಸಾತ್ಮಕ ಘಟನೆಗಳಾದಾಗ ಮಾತ್ರ ರಾಜ್ಯ - ರಾಷ್ಟ್ರಮಟ್ಟದ ಸುದ್ದಿಗಳಾಗುತ್ತವೆ. ಆದ್ದರಿ೦ದ ನಮ್ಮ ಭಾಗದ ಜನತೆಗೆ ಅಹಿ೦ಸಾತ್ಮಕ ಹೋರಾಟಗಳಿಗೆ ಬೆಲೆ ಇಲ್ಲ ಅನ್ನುವ ಭಾವನೆ ಬ೦ದಿದೆ.

ಕರ್ನಾಟಕ ರಾಜ್ಯಕ್ಕೆ ಇಬ್ಬರು 'ಭಾರತ ರತ್ನ' ತ೦ದ ಪುತ್ರರನ್ನು, ಸಾಹಿತ್ಯ, ಉದ್ಯೋಗ, ಕ್ರೀಡೆ, ರಾಜಕೀಯ, ಶಿಕ್ಷಣ ಇನ್ನು ಹಲವು ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ಸಲ್ಲಿಸಿರುವ ನಮ್ಮ ಭಾಗದಲ್ಲಿ೦ದು ನಾವು ನಿಜವಾಗಿಯೂ ಅಖ೦ಡ ಕರ್ನಾಟಕದವರೇ? ಎ೦ಬ ಅನುಮಾನ ಕಾಡುತ್ತಿದ್ದು, ಇನ್ನು ಮುಂದೆ ರಾಜ್ಯೋತ್ಸವವನ್ನು ಬಹಿಷ್ಕರಿಸಬೇಕು ಎ೦ಬ ಕೂಗು ಎಲ್ಲ ಕಡೆ ಕೇಳಿ ಬರುತ್ತಿದೆ. ಈ ಕಡೆಗಣನೆಯ ಭಾವನೆ ಪ್ರಬಲವಾಗುವ ಮುನ್ನ ರಾಜ್ಯದ ಜನತೆ ಮತ್ತು ಸರ್ಕಾರ ಎಚ್ಚೆತ್ತುಕೊಳ್ಳುವುದು ಸೂಕ್ತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+