ಹವ್ಯಕ ಬ್ರಾಹ್ಮಣ ವಿವಾಹಗಳ ಮುಖ್ಯ ವಿಧಿಗಳು

ಓಹ್ .. ಎಂಥಾ ಸುಂದರ ಮಾತುಗಳು. ವಧುವಿನ ಹೃದಯಕ್ಕೆ ಎಷ್ಟು ಸಂತೋಷ, ತೃಪ್ತಿ, ಆನಂದವನ್ನು ನೀಡಿದ ಈ ಮಾತುಗಳಿಗೆ, ನಮ್ಮ ಸಮಾಜ ಒಂದು ನಿರ್ದಿಷ್ಟ ಕಾಲಾವಧಿಯನ್ನು ನೀಡಿ, ಒಂದು ವೇಳೆ ಆಕೆ ಏಕಾಂಗಿಯಾಗಿರುವ ಸಮಯ ದುರದೃಷ್ಟದಿಂದ ಒದಗಿದರೆ, ಆ ಮಂಗಲಸೂತ್ರವನ್ನೂ, ಆಕೆಯ ಸುಮಂಗಲೀತನವನ್ನು ನಿರ್ದಯರಾಗಿ ಕಿತ್ತುಕೊಳ್ಳುವುದೇ? ವರನ ಹೇಳಿಕೆಗೆ ಬೆಲೆ ಇಷ್ಟೆಯೋ? ಇದಕ್ಕೆ ನಾನು ಎನ್ನೆನಲಿ? ಪ್ರೀತಿ, ಕರುಣೆ, ಪ್ರೇಮ, ಪರಸ್ಪರ ವಿಶ್ವಾಸದ ಸಹಜೀವನ ಗೌರವವನ್ನು ಕೊಟ್ಟು-ತೆಕ್ಕೊಳ್ಳುವುದು ಇಂಥಾ ಗುಣವುಳ್ಳ ನಮ್ಮ ಆತ್ಮ ಮತ್ತು ಪರಮಾತ್ಮ ಒಬ್ಬನೇ ಅಲ್ಲವೇ?
ನಾವು ಜ್ಞಾನವನ್ನು ಬೆಳಸಿಕೊಳ್ಳೋಣ, ಒಳ್ಳೆಯವರಾಗಿ ಬಾಳೋಣ, ಸಹಜೀವನದಲ್ಲಿ ಕಷ್ಟ ಸುಖಗಳನ್ನು ಹಂಚಿ ಕೊಳ್ಳೋಣ, ನಾವಿಬ್ಬರು ಒಂದೇ ನಿನ್ನನ್ನು ನಾನು ಎಂದೆಂದೂ ಕೈ ಬಿಡಲಾರೆ, ನೀನು ನನ್ನ ಹೃದಯ ದೇವತೆ, ನನ್ನ ಮನೆಯ ಭಾಗ್ಯಲಕ್ಷ್ಮಿ. ಇಂಥಾ ಹೃದಯಸ್ಪರ್ಶಿ ಮಾತುಗಳ ವಾಗ್ದಾನವನ್ನು ನೀಡಿ, ವರ ವಧುವಿನ ಕೈ ಹಿಡಿದುಕೊಂಡು ಸಪ್ತಪದಿಯನ್ನು ತುಳಿಯುವಲ್ಲಿ ನಮ್ಮ ಹವ್ಯಕ ವಿವಾಹದ ಮುಖ್ಯ ವಿಧಿಗಳು ಮುಗಿಯುತ್ತದೆ. ಹವ್ಯಕರ ವಿವಾಹ ಸಂಪ್ರದಾಯಕ್ಕೂ ಇತರೇ ಬ್ರಾಹ್ಮಣ ವರ್ಗಗಳ ವಿವಾಹ ಸಂಪ್ರದಾಯಕ್ಕೂ ಇರುವ ವ್ಯತ್ಯಾಸವೇನೆಂದರೆ:
(1) ಹವ್ಯಕರ ವಿವಾಹದಲ್ಲಿ ಸಾಕ್ಷಿಗೆ ಬರುವುದು 'ಜಲ', ಅಗ್ನಿ ಅಲ್ಲ.
(2) ಹವ್ಯಕರಲ್ಲಿ ಹೋಮ ನಡೆಯುವುದು ತಾಳಿ ಕಟ್ಟಿದ ನಂತರ.
(3) ಹವ್ಯಕರಲ್ಲಿ ಮಂಗಳಸೂತ್ರಕ್ಕೆ ಬಳಸುವುದು ಒಂದು ತಾಳಿ, ಆದರೆ ಇತರೇ ಬ್ರಾಹ್ಮಣ ವರ್ಗಗಳಲ್ಲಿ ಬಳಸುವುದು ಎರಡು ತಾಳಿ.
ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಹವ್ಯಕರ ಮಕ್ಕಳ ವಿವಾಹದಲ್ಲಿ "ವರದಕ್ಷಿಣೆ" ಎನ್ನುವ ಪದಗಳೇ ಬಳಕೆಯಲ್ಲಿಲ್ಲ. ಇದನ್ನಂತೂ ಇಲ್ಲಿನ ಹವ್ಯಕ ಹೆಣ್ಣು ಮಕ್ಕಳು ಬಹಳ ಸಂತೋಷದಿಂದ ನೆನಪಿಸುತ್ತಾರೆ, ಗೌರವಿಸುತ್ತಾರೆ. ಇದರಿಂದಾಗಿ ಹೆಣ್ಣು ಮಕ್ಕಳಿಗೆ ತಮ್ಮ ತವರಿನ ಸಂಬಂಧಗಳು ಬಹಳ ಶಾಶ್ವತವಾಗಿ ಉಳಿಯುತ್ತದೆ.












Click it and Unblock the Notifications