ಹೈ.ಕರ್ನಾಟಕದ ಥೂಛೀ ಮಂದಿ

vishwaradhya sathyampete
ಗುಲ್ಬರ್ಗಾ, ರಾಯಚೂರು, ಬೀದರ್, ಬಳ್ಳಾರಿ ಹಾಗೂ ಕೊಪ್ಪಳ. ಈ ಐದು ಹೈದರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ ಸೇರಿದ ಜಿಲ್ಲೆಗಳು. ಈ ಜಿಲ್ಲೆಗಳನ್ನು ಹಾಳು ಕೊಂಪೆಗಳನ್ನಾಗಿ ಮಾಡಿ ತಮ್ಮ ಸ್ವಂತ ಏಳಿಗೆಯಲ್ಲಿ ಸಾರ್ಥಕತೆಯನ್ನು ಕಂಡುಕೊಂಡ ಭಾಗದ ಕೆಲವು ದಂಡಪಿಂಡಗಳ ದರ್ಶನ ಮಾಲಿಕೆ - 1.

*ವಿಶ್ವಾರಾಧ್ಯ ಸತ್ಯಂಪೇಟೆ

ಇಡೀ ಭಾರತ ದೇಶದ ಒಕ್ಕೂಟ ವ್ಯವಸ್ಥೆ ಆಗಸ್ಟ 15 ರಂದು ಮಾತ್ರ ತನ್ನ ಸ್ವಾತಂತ್ರೋತ್ಸವವನ್ನು ಆಚರಿಸಿಕೊಂಡರೆ ಕರ್ನಾಟಕ ರಾಜ್ಯದ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳು ಎರಡೆರಡು ಸಲ ತಮ್ಮ ಸ್ವಾತಂತ್ರೋತ್ಸವವನ್ನು ಆಚರಿಸಿಕೊಳ್ಳುತ್ತವೆ. ಇದು ಆಧುನಿಕ ಕರ್ನಾಟಕದ ಹೆಮ್ಮೆಗಳಲ್ಲೊಂದು ! ಆಗಸ್ಟ್ 15 ರಂದು ಒಂದು ಸಲ. ಸೆಪ್ಟೆಂಬರ್ 17 ರಂದು ಇನ್ನೊಂದು ಸಲ.

ಹೈದ್ರಾಬಾದ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ಪ್ರಾಂತಗಳಾದ ಮೇಲಿನ ಜಿಲ್ಲೆಗಳನ್ನು ಆತ ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದ. ಇಡೀ ದೇಶದ ಜನತೆ 1947 ಆಗಸ್ಟ 15 ರಿಂದ ಸ್ವಾತಂತ್ರ್ಯದ ಸವಿಯನ್ನು ಅನುಭವಿಸುತ್ತಿದ್ದರೆ ಹೈದ್ರಾಬಾದ್ ಕರ್ನಾಟಕದ ಜನತೆ ಮಹ್ಮದ ರಜ್ವಿ ಎಂಬ ಕಿರಾತಕ ಮಂತ್ರಿ ಹಾಗೂ ಹೈದ್ರಾಬಾದ್ ನಿಜಾಮನ ಕೈಯ್ಯಲ್ಲಿ ಮುಲುಗುಡುತ್ತಿತ್ತು. ಸರದಾರ ವಲ್ಲಭಬಾಯಿ ಪಟೇಲ್ ಹೈದ್ರಾಬಾದ್ ನಿಜಾಮನ ಮೇಲೆ ಒತ್ತಡ ತರದೆ ಹೋಗಿದ್ದರೆ ಸೆಪ್ಟೆಂಬರ್ 17 ರಂದೂ ಕೂಡ ಹೈದ್ರಾಬಾದ ಕರ್ನಾಟಕ ಪ್ರಾಂತ ಮುಕ್ತವಾಗುತ್ತಿರಲಿಲ್ಲ.

ಇದೇನೆ ಇರಲಿ. ಹೈದ್ರಾಬಾದ ನಿಜಾಮನ ಕೈಯೊಳಗಿಂದ ಹೊರಬಂದ ಈ ಪ್ರಾಂತ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಹೊಂದಿರುವ ಪ್ರಗತಿಯನ್ನು ನೆನೆದರೆ ಯಾರಿಗಾದರೂ ಹೊಟ್ಟೆ ಉರಿಯುತ್ತದೆ. ಇದರ ದೈನೇಸಿತನವನ್ನು ಕುರಿತು ಬರೆಯುವುದಕ್ಕೆ ಕೂಡ ಬೇಸರವೆನಿಸುತ್ತದೆ. ನಮ್ಮ ರಾಜ್ಯ ಅತ್ಯಂತ ಚಿಕ್ಕ ರಾಜ್ಯಗಳಲ್ಲಿ ಒಂದು. ಇವುಗಳಲ್ಲಿರುವ ಜಿಲ್ಲೆಗಳು ಒಂದಕ್ಕಿಂತ ಮತ್ತೊಂದು ತಾಮುಂದೆ ತಾಮುಂದೆ ಎಂದು ಅಭಿವೃದ್ಧಿಯ ಪಥದಲ್ಲಿ ಮುಂದುವರೆಯುತ್ತಿದ್ದರೂ ಹೈದ್ರಾಬಾದ ಕರ್ನಾಟಕದ ಈ ಜಿಲ್ಲೆಗಳು ಇನ್ನೂ ಸಂಡಾಸ ಯಾವ ದಿಕ್ಕಿದೆ ಎಂದು ಹುಡುಕುತ್ತಿರುವುದು ದೌರ್ಭಾಗ್ಯ.

ಹಾಗಾದರೆ ಈ ಪ್ರದೇಶಗಳಲ್ಲಿಯ ಜಿಲ್ಲೆಗಳು ಮರುಭೂಮಿ ಪ್ರದೇಶವಾಗಿದೆಯೆ ? ಇಲ್ಲಿ ಯಾವುದೆ ಖನಿಜ ಸಂಪತ್ತು ಇಲ್ಲವೆ ? ಮಾನವ ಸಂಪನ್ಮೂಲದ ಕೊರತೆಯೆ ? ಹೀಗೆ ಪ್ರಶ್ನಿಸುತ್ತ ಹೋದರೆ ಸತ್ಯ ಕಣ್ಣಿಗೆ ರಾಚುತ್ತ ಹೋಗುತ್ತದೆ. ಇಲ್ಲಿರುವ ಕಪ್ಪು ಮಣ್ಣಿನ ಭೂಮಿ ಜೋಳವನ್ನು , ತೊಗರಿಯನ್ನು ,ಹತ್ತಿಯನ್ನು ಬೆಳೆಯುವುದಕ್ಕೆ ಹೇಳಿಮಾಡಿಸಿದ ಭೂಮಿ. ನಮ್ಮ ರಾಜ್ಯವೊಂದಕ್ಕೆ ಅಲ್ಲ, ನೆರೆ ರಾಜ್ಯದ ಜನತೆಗೂ ಸಾಕಾಗುವಷ್ಟು ಜೋಳವನ್ನು ಈ ನೆಲ ಬೆಳೆದುಕೊಡುತ್ತದೆ.

ಇಲ್ಲಿಯ ಭೂಮಿಯಲ್ಲಿ ಸಿಗುವ ಸೇದಿ ಫರ್ಸಿಗಳು , ಉಸುಕು ರಾಜ್ಯದಲ್ಲಿಯೆ ಉತ್ತಮ ಗುಣಮಟ್ಟದ್ದಾಗಿದೆ. ಕೆಲವು ಭಾಗಗಳಲ್ಲಿ ಯುರೇನಿಯಂ ನಿಕ್ಷೇಪಗಳೂ ಇರುವ ಬಗ್ಗೆ ಖಚಿತವಾಗಿದೆ. ಇದಲ್ಲದೆ ಇಡೀ ರಾಜ್ಯದಲ್ಲಿಯೆ ಪ್ರಮುಖವಾದ ಹಾಗೂ ದೊಡ್ಡದಾದ ಕೃಷ್ಣೆ ಹಾಗೂ ಭೀಮಾ ನದಿಯನ್ನು ಹೊಂದಿರುವ ಭೂಪ್ರದೇಶ ಈ ಹೈದ್ರಾಬಾದ ಕರ್ನಾಟಕ ಪ್ರದೇಶ. ಆದರೂ ಇದು ಹಿಂದುಳಿದಿದೆ , ಏಕೆ !?

ನೇರವಾಗಿ ಹೇಳಬೇಕೆಂದರೆ ಸ್ವಾತಂತ್ರ್ಯದ ತರುವಾಯ ಬಂದ ಇಲ್ಲಿನ ರಾಜಕಾರಣಿಗಳೆಂಬ ರಕ್ಕಸರು. ಅವರು ಕಾಂಗ್ರೇಸಿಗರಾಗಿರಬಹುದು, ಜನತಾಪಕ್ಷ, ದಳದವರು ಹಾಗೂ ಇತ್ತೀಚಿನ ಬಿಜೆಪಿಯವರೂ ಆಗಿರಬಹುದು. ಯಾರೆ ಅಧಿಕಾರದ ಚುಕ್ಕಾಣಿ ಹಿಡಿದರೂ ಅವರೆಲ್ಲರಲ್ಲಿ ಈ ಪ್ರದೇಶದ ಬಗೆಗೆ ಕನಸುಗಳನ್ನೆ ಇಟ್ಟುಕೊಳ್ಳದವರಾಗಿದ್ದರು. ಅಲ್ಲದೆ ತಮ್ಮ ಸ್ವಹಿತಾಸಕ್ತಿಯೆ ಅವರಿಗೆಲ್ಲ ಮುಖ್ಯವಾಗಿತ್ತು. ಉತ್ತರ ಕರ್ನಾಟಕವನ್ನು ಆಳಿದ, ಆಳುತ್ತಿರುವ, ಮಂದಿಯನ್ನು ಅಳಿಸಿ ತಾವು ನಗುತ್ತಿರುವ ದಂಡ ಪಿಂಡಗಳು ಯಾರು? ಯಾರು ಯಾರದು ?

(ನಿರೀಕ್ಷಿಸಿ-ಸಂ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+