ನಲ್ಮೆಯ ಅಪ್ಪನ ಬಗ್ಗೆ ಬರೆಯಲೊಂದು ಅದ್ಭುತ ಅವಕಾಶ!

Posted By:
Subscribe to Oneindia Kannada

ಮೈತ್ರಿ ಪ್ರಕಾಶನದ ವತಿಯಿಂದ 'ಅಪ್ಪ' ಈ ಅದ್ಭುತದ ಎರಡನೇ ಆವೃತ್ತಿ ಸದ್ಯದಲ್ಲಿಯೇ ಹೊರಬರಲಿದೆ. ಇದಕ್ಕಾಗಿ ಸಹೃದಯ ಕನ್ನಡಿಗರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ. ಖ್ಯಾತ ನಾಮರು ಕೂಡ ಲೇಖನಗಳ ಕೊಡುಗೆ ನೀಡಲಿದ್ದಾರೆ.

ಈ ಮೊದಲು ಸಂಪಾದಕ ಹಾಗೂ ಮಿತ್ರ ಗುರುಪ್ರಸಾದ ಕುರ್ತಕೋಟಿ ಅವರ ಸಂಪಾದಕತ್ವದಲ್ಲಿ "ಎಲ್ಲರಂಥವನಲ್ಲ ನನ್ನಪ್ಪ" ಕೃತಿ ತಂದಿದ್ದು, ಅದು ಅಭೂತಪೂರ್ವ ಯಶಸ್ಸು ಗಳಿಸಿದೆ. ಇದರಿಂದ ಸ್ಫೂರ್ತಿಗೊಂಡು ಎರಡನೇ ಆವೃತ್ತಿ ಹೊರಬರುತ್ತಿದೆ.

ಅಪ್ಪಾ... ಐ ಲವ್ ಯೂ ಪಾ.. ಅಪ್ಪನೇ ಆಕಾಶದ ಪ್ರತಿರೂಪ

ಆವಾಗ "ನಾನೂ ಬರೀತಿದ್ದೆ", "ನನಗೂ ಏನೋ ಹೇಳುವುದಿತ್ತು" ಅಂತೆಲ್ಲ ಹಲಬಿ ನಿರಾಶರಾದವರಿಗೆ ಈ ಅವಕಾಶ ತೆರೆದಿದೆ. ಇದು ನಿಮ್ಮ ಪುಸ್ತಕ. ನಿಮ್ಮ ಅಪ್ಪನ ಬಗ್ಗೆ, ಅವನೊಡನೆ ಕಳೆದ ಕ್ಷಣಗಳ ಬಗ್ಗೆ, ಅವನೊಡನೆ ಹಂಚಿಕೊಳ್ಳದೇ ಉಳಿದ ಅನಿಸಿಕೆಗಳ ಬಗ್ಗೆ, ಅವನೊಡನೆ ಆಡದೇ ಉಳಿದು ಹೋದ ಮಾತುಗಳ ಬಗ್ಗೆ..

An opportunity to write about your father

ಹಾಗೆಯೇ, ಅಪ್ಪನೊಂದಿಗೆ ಸಮಯ ಕಳೆಯಲಾಗಲಿಲ್ಲವೆಂಬ ಪಶ್ಚಾತ್ತಾಪಗಳ ಕುರಿತು, ಕಳೆದ ಪ್ರತಿ ಸಂತಸದ ಘಳಿಗೆಗಳ ಕುರಿತು ನಿಮಗೆ ಅನಿಸಿದ ಭಾವನೆಗಳನ್ನು ದಾಖಲಿಸಿ ನಮಗೆ ಕಳುಹಿಸಿ.. ಅಪ್ಪನ ಕುರಿತು ಸಂಭ್ರಮಿಸಿ.. ಇದೋ ನಿಮಗೆ ಪ್ರೀತಿಯ ಕರೆಯೋಲೆ.

ಮಗಳು ಬರೆದ ಲೇಖನ ಓದಿ ಅಪ್ಪನ ಕಣ್ಣಲ್ಲಿ ಅಶ್ರುಧಾರೆ!

ಹೋದಸಲ 37 ಲೇಖನಗಳು ಬಂದಿದ್ದವು. ಈ ಸಲ 50 ಲೇಖನಗಳಿಗೆ ಅವಕಾಶವಿದೆ. ಅಂತೆಯೇ ಈ ಸಲ ಕೆಲವು ಖ್ಯಾತ ಲೇಖಕರು ಕೂಡ ತಮ್ಮ ಅಪ್ಪಂದಿರ ಕುರಿತು ಬರೆಯಲಿದ್ದಾರೆ. ಅಂತಹ ಖ್ಯಾತನಾಮರ ಜೊತೆ ನಿಮ್ಮ ಲೇಖನವೂ ಇದ್ದರೆ ಎಷ್ಟು ಛಂದ ಅಲ್ಲವೆ?

ಸಂಕ್ರಾಂತಿ ವಿಶೇಷ ಪುಟ

ನಿಮ್ಮ ಅನಿಸಿಕೆ 1,000 ಪದಗಳ ಒಳಗಿರಲಿ, ನುಡಿ ಅಥವಾ ಯುನಿಕೋಡ್ ಬಳಸಿ ಟಂಕಿಸಿ. ಹೊರದೇಶದ ಕನ್ನಡ ಲಿಪಿ ಮರೆತು ಹೋದವರೂ ಕೂಡ ಇಂಗ್ಲಿಷಿನಲ್ಲಿ ಬರೆದು ಕಳಿಸಿ (ಅನುವಾದ ನಮ್ಮದಾಗಿರುತ್ತದೆ).

ನಿಮ್ಮ ಲೇಖನ ಫೆಬ್ರವರಿ 28ರ ಒಳಗೆ ತಲುಪಿಸಿ. ಕಳುಹಿಸಬೇಕಾದ ವಿಳಾಸ : Appapustaka@gmail.com

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here is a golden opportunity to write anything your beloved father. One can share his or her humble relationship with father. Mythri Prakashana has invited writers to send article before 28th February. Hurry up.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ