ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರಸಿಯಲ್ಲಿ 'ಯಾರೂ ನೆಡದ ಗಿಡ' ನೆಡಬನ್ನಿ

By Prasad
|
Google Oneindia Kannada News

Yaroo Nedada Gida
ಶಿರಸಿ, ಅ. 28 : ಕವಿ ಗಣೇಶ ಹೊಸ್ಮನೆಯವರ ಕವನ ಸಂಕಲನ 'ಯಾರೂ ನೆಡದ ಮರ' ಇದೇ ಭಾನುವಾರ ಅಕ್ಟೋಬರ್ 31ರಂದು ಶಿರಸಿಯಲ್ಲಿ ಬಿಡುಗಡೆಯಾಗುತ್ತಿದೆ.

ಶಿರಸಿಯ ಚಿಂತನ ಉತ್ತರಕನ್ನಡ, ಕವಿ-ಕಾವ್ಯ ಬಳಗ ಮತ್ತು ಗದಗದ ಲಡಾಯಿ ಪ್ರಕಾಶನದ ಸಹಯೋಗದಲ್ಲಿ ಪುಸ್ತಕ ಬಿಡುಗಡೆಯಾಗುತ್ತಿದೆ. ಪುಸ್ತಕ ಅನಾವರಣಗೊಳ್ಳುವ ಸ್ಥಳ : ಹೊಟೇಲ್ ಮಧುವನದ ಆರಾಧನಾ ಸಭಾಂಗಣ. ಸಮಯ : ಮಧ್ಯಾಹ್ನ 3.30ಕ್ಕೆ.

ಕೃತಿಯನ್ನು ಬಿಡುಗಡೆ ಮಾಡುತ್ತಿರುವವರು ಕಾರ್ಕಳದ ಕವಯಿತ್ರಿ ಜ್ಯೋತಿ ಗುರುಪ್ರಸಾದ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶಕರಾದ ಬಸವರಾಜ ಸೂಳಿಭಾವಿ ಅವರು ವಹಿಸುತ್ತಿದ್ದಾರೆ. ಕೆರೆಕೋಣದ ಮಾಧವಿ ಬಂಡಾರಿ ಅವರು ಕೃತಿಯ ಕುರಿತು ಮಾತನಾಡಲಿದ್ದಾರೆ. ಅತಿಥಿಗಳಾಗಿ ಕವಿಗಳಾದ ಡಾ. ರಾಜು ಹೆಗಡೆ ಮತ್ತು ಸುಬ್ರಾಯ ಸಿ. ಹೆಗಡೆ ಅವರು ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದ ನಿರ್ವಹಣೆಯನ್ನು ಸಿಂಧು ಹೆಗಡೆ ಮಾಡಲಿದ್ದಾರೆ.

ಪುಸ್ತಕ ಬಿಡುಗಡೆಯೆಂದರೆ ಬೆಂಗಳೂರು, ಅದರಲ್ಲೂ ಬಸವನಗುಡಿಯ ಬಿಪಿ ವಾಡಿಯಾರ್ ರಸ್ತೆಯಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್! ನಗರದ ಇತರೆಡೆ ಕೂಡ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯುತ್ತದಾದರೂ ಐಐಡಬ್ಯೂಸಿಯನ್ನು ಹಿಂದಿಕ್ಕಲು ಸಾಧ್ಯವೇ ಇಲ್ಲ. ಪುಸ್ತಕ ಬಿಡುಗಡೆ ಮಟ್ಟಿಗೆ ಐಐಡಬ್ಯೂಸಿ ಪುಸ್ತಕ ಬಿಡುಗಡೆ ಮಾಡುವವರ ಮತ್ತು ಕಾರ್ಯಕ್ರಮಕ್ಕೆ ಬಂದು ಪುಸ್ತಕ ಕೊಳ್ಳುವವರ ನೆಚ್ಚಿನ ತಾಣ.

ಇಂಥ ಸಂದರ್ಭದಲ್ಲಿ ಮಲೆನಾಡ ಮಡಿಲಲ್ಲಿರುವ ಶಿರಸಿಯಲ್ಲಿ ಪುಸ್ತಕ ಬಿಡುಗಡೆಯಾಗುತ್ತಿರುವುದು ಕನ್ನಡಿಗರಿಗೆ ಸಂತಸದ ಸಂಗತಿ. ಹೇಗಿದ್ದರೂ ವಾರಾಂತ್ಯ. ಇನ್ನೆರಡು ದಿನಗಳ ರಜಾ ಹಾಕಿ ಶಿರಸಿಯ ಪ್ರಕೃತಿ ಸೌಂದರ್ಯವನ್ನು ಸವಿಯಲು ಸಖತ್ ಅವಕಾಶ. ಹೋಗಿ ಬನ್ನಿ.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್</a> | <a href=ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" title="ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X