• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿರ್ದೇಶಕ ಶೇಷಾದ್ರಿಗೆ ಇಷ್ಟವಾದ ಮುಜುಗರ

By * ಸುಲೋಚನ.ಜಿ.ಎಸ್.ಹೆಗ್ಗೆರೆ,ತುಮಕೂರು
|
Mujugara Book Release in Tumkur
ಮುಜುಗರ ಎಂಬ ಪದ ಇಲ್ಲಿಯವರೆಗೂ ಕೇವಲ ಮಾನವನ ಭಾವನೆಯಾಗಿ ಮಾತ್ರ ಪರಿಭಾವಿಸಬಹುದಾಗಿತ್ತು, ಆದರೆ ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಸಮಾರಂಭವೊಂದು ನಿಜಕ್ಕೂ ಆಶ್ಚರ್ಯಕರ ರೀತಿಯಲ್ಲಿ ಈ ಪದಕ್ಕೆ ಒಂದು ಹೊಸ ಆಯಾಮ ನೀಡಿತ್ತು. ಅಂದರೆ ಒಂದು ಕವನ ಸಂಕಲನ ಕೃತಿಯ ಶೀರ್ಷಿಕೆಯೇ 'ಮುಜುಗರ' ವಾಗಿತ್ತು.

ಸಮಾರಂಭದ ಆದಿಯಲ್ಲೇ ಶ್ರೀಕೃಷ್ಣನ ರಾಸಲೀಲೆಯ ನೃತ್ಯ ಪ್ರಸಂಗದ ಅಭಿನಯದ ಮೂಲಕ ಆತನ ಮುಜುಗರ ಭಾವನೆಯಿಂದಲೇ ಒಂದು ಸುಂದರ ಅಭಿವ್ಯಕ್ತಿ ಹೊರಹೊಮ್ಮಿತು ಎಂಬ ಸಾರವನ್ನು ತಿಳಿಸಲಾಗಿದೆ. ತುಮಕೂರಿನ ಭೂಮಿ ಬಳಗದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಈ ಕೃತಿಯ ಕರ್ತೃವಾದ ರಘನಂದನ್ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ತಾನೊಬ್ಬ ತಿಕ್ಕಲು ವ್ಯಕ್ತಿ ಎಂದು ಹೇಳಿಕೊಳ್ಳುತ್ತಾ ತನ್ನ ಸಮಗ್ರತಿಕ್ಕಲುತನವನ್ನೇ ಈ ಕೃತಿ ಪ್ರತಿನಿಧಿಸುತ್ತಿದೆ ಎಂದರು.

ಮುಜುಗರ ಪಡಬೇಡಿ:ಇವರ ಪ್ರಕಾರ ನಾಚಿಕೆ ಹಾಗೂ ಅವಮಾನಗಳ ನಶೆ ಒಡೆದಾಗ ಮುಜುಗರದ ಭಾವನೆಗರಿಬಿಚ್ಚುತ್ತದೆ, ಹೃದಯದ ಭಾವನೆಗಳನ್ನು ಬಂಧಿಸುವ ವ್ಯಂಗ್ಯ ಹಾಗೂ ಅಂತರಂಗದ ಮಜಲುಗಳನ್ನೇ ಬದಲಿಸುವ ಅವಮಾನಕ್ಕಿಂತಲೂ ಮುಜುಗರವೇ ವ್ಯಕ್ತಿತ್ವವನ್ನು ಮರೆಸುತ್ತದೆ ಎಂಬ ನಿಲುವನ್ನು ತಳೆದಿದ್ದಾರೆ.

ಸಾಂಸ್ಕೃತಿಕ, ಸಾಮಾಜಿಕ, ನೈತಿಕ, ಶೈಕ್ಷಣಿಕ ಹೀಗೆ ಕ್ಷೇತ್ರ ಯಾವುದಾದರೂ ಸಹ ಒಂದಿಲ್ಲೊಂದು ರೀತಯ ಮುಜುಗರದ ಸನ್ನಿವೇಶವನ್ನು ಎದುರಿಸುತ್ತಲೇ ಇರುತ್ತಾರೆ, ಈ ಭಾವನೆ ಎಲ್ಲೆ ಮೀರಿದಾಗ ಬಹಳ ಅಮೂಲ್ಯವಾದ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾರೆ, ಸಮಯ ಮಾನವನ ಕೈ ತಪ್ಪಿದಾಗ ಏನಾಗುತ್ತದೆ ಆತನಿಗೆ ಎಂಬುದನ್ನು ಅರ್ಥೈಸುವುದೇ ಮುಜುಗರ ಕೃತಿ ಎಂದು ರಘನಂದನ್ ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಾರೆ.

ಇವರ ಈ ಕವನ ಸಂಕಲನವು 16 ಸಮಕಾಲೀನ ವಿಚಾರಗಳನ್ನು ಒಳಗೊಂಡಿದ್ದು ಅವುಗಳಲ್ಲಿ ಪ್ರೇಮ, ಕಾಮ, ವಿರಹ, ಭಯ, ಅಸೂಯೆ, ಸಾಮಾಜಿಕ ಅವ್ಯವಸ್ಥ, ಭಯೋತ್ಪಾದನೆ, ಹೀಗೆ ನಾನಾ ಮುಖಗಳನ್ನು ವಿಡಂಬನಾತ್ಮಕವಾಗಿ, ಹಸಿಹಸಿ ಛಾಯಾಚಿತ್ರಗಳು, ರೇಖಾಚಿತ್ರಗಳು, ಗದ್ಯ, ಪದ್ಯಗಳ ಮೂಲಕ ಒಂದು ದೃಶ್ಯಕಾವ್ಯವನ್ನು ತಮ್ಮ ಕೃತಿಯಲ್ಲಿ ಚಿತ್ರಿಸಿದ್ದಾರೆ.

ವಿಶೇಷವಾಗಿ ಈ ಕೃತಿಯು ಅರೆನಗ್ನತೆ ಛಾಯಾಚಿತ್ರಗಳ ಮುಖೇನ ವ್ಯಕ್ತಿತ್ವದ ವಿವಿಧ ರೂಪಗಳನ್ನು ಕಟ್ಟಿಕೊಟ್ಟಿದೆ ಎಂದಿದ್ದಾರೆ. ತಮ್ಮ ಮಾತಿನ ಅಂತ್ಯದಲ್ಲಿ ಮುಜುಗರವನ್ನು ಪ್ರತಿಯೊಬ್ಬ ವ್ಯಕ್ತಿಯು ಸ್ವೀಕರಿಸಿ ಅದನ್ನು ಆರೋಗ್ಯಕರ ರೀತಿಯಲ್ಲಿ ಸ್ವೀಕರಿಸಿ ತಮ್ಮ ಬೆಳವಣಿಗೆ ಕಾಣಬೇಕು ಎಂದು ನುಡಿದರು.

ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಚಂದ್ರಪ್ಪನವರು ಈ ಕೃತಿಯಲ್ಲಿನ ಒಂದೊಂದು ದೃಶ್ಯಗಳು ಕೃತಿಗೆ ಸಿಂಬಾಲಿಕ್ ಆಗಿವೆ ಎಂದಿದ್ದಾರೆ,ಕನ್ನಡ ಸಾಹಿತ್ಯಕ್ಕೆ ಉತ್ತಮ ರೂಪಕತ್ವದ ಕೃತಿ ನೀಡಿದ ರಘುನಂದನ್‌ರವರನ್ನು ಅಭಿನಂದಿಸಿದರು.

ಕೃತಿಗೆ ಮುನ್ನುಡಿ ಬರೆದ ಚಿತ್ರಸಾಹಿತಿ ಕವಿರಾಜ್ ಈ ಕೃತಿಯು ಓದುವ ಮನಸ್ಸುಗಳಿಗೆ ಅರ್ಥಪೂರ್ಣವಾಗಿದೆ. ಸಮಗ್ರ ಕವಿಯಾಗುವ ಎಲ್ಲಾ ಲಕ್ಷಣಗಳು ಇವರಲ್ಲಿದೆ ಎಂದರು. ಈ ಸಂದರ್ಭದಲ್ಲಿ ಅವರಿಗೆ ಕೃತಿಯಲ್ಲಿ ಇಷ್ಟವಾದ ಒಂದು ವಾಕ್ಯವಾದ 'ನಿನ್ನ ಮರೆಸುವ ದೊಂಬಿಯಲಿ ಬದುಕುತಿಹೆ ನಾನು' ಎಂಬುದರ ಅರ್ಥ ವಿವರಣೆ ನೀಡಿದರು.

ಹೊಸ ಬಗೆಯ ಶೀರ್ಷಿಕೆ:
ಅದೇ ರೀತಿ 'ನಾನು ನನ್ನದಲ್ಲದ ಭಗವದ್ಗೀತೆ' ಎಂಬ ವಾಕ್ಯ ಎರಡು ಪೀಳಿಗೆಗಳ ಸಂಘರ್ಷವನ್ನು ತಿಳಿಸುತ್ತದೆ ಎಂದಿದ್ದಾರೆ. ಕೃತಿಯ ವಿಮರ್ಷೆ ಮಾಡಿದ ಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಕನ್ನಡದ ಮಟ್ಟಿಗೆ ಈ ರೀತಿಯ ಶೀರ್ಷಿಕೆ ಹೊಸದು, ಈ ರೀತಿಯ ಹೆಸರು ಇಡಲು ಧೈರ್ಯ ಬೇಕು, ಮನುಷ್ಯನ ಬದುಕಿನಲ್ಲಿ ಹುಟ್ಟಿದಾಗಿನಿಂದ ಸಾಯುವ ತನಕವೂ ಮುಜುಗರದ ಭಾವನೆ ಇದ್ದೇ ಇರುತ್ತದೆ.

ಇದನ್ನು ಧನಾತ್ಮಕವಾಗಿ ಸ್ವೀಕರಿಸಿದರೆ ಮಾತ್ರ ಬೆಳವಣಿಗೆ ಸಾದ್ಯ ಎಂದಿದ್ದಾರೆ, ಮುಜುಗರದ ಭಾವನೆಯನ್ನು ದೂರವಿಟ್ಟು ಹಠ,ಚಲ, ಬದ್ಧತೆ, ಇರುವಂತಹ ವ್ಯಕ್ತಿಗಳೇ ಸಮಾಜದಲ್ಲಿ ಬೆಳೆಯುವುದು ಎಂದರು ಕೃತಿಯಲ್ಲಿ ಅವರಿಗೆ ಇಷ್ಟವಾದ ಕವನ 'ಉತ್ಸಾಹ ಮೈ ಮರೆತಾಗ' ಎಂಬ ಪದಗಳ ಬಗೆಗೆ ತಿಳಿಸಿದರು, ಜೊತೆಗೆ ಈ ಕವನಸಂಕಲನದ ಕೆಲವು ವಿರಹ ಆಧಾರಿತ ಹನಿಗವನಗಳು ಕೆ.ಎಸ್.ನರಸಿಂಹಸ್ವಾಮಿಯವರ ಕವನಸಂಕಲನವನ್ನು ಹೋಲಿಕೆಯನ್ನು ಪ್ರಭಾವಿಸುತ್ತದೆ ಎಂದರು. ವಿಶಿಷ್ಟ ಹೆಸರಿನ ಕೃತಿ ಎಲ್ಲರ ಮನಮುಟ್ಟಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more