ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಚಿಗುರು ಭೂಮಿ ಬುಕ್ಸ್

By Shami
|
Google Oneindia Kannada News

Nagesh Hegde
ಪತ್ರಕರ್ತ ಮತ್ತು ಅಕ್ಷರ ಪರಿಸರ ತಜ್ಞ ನಾಗೇಶ್ ಹೆಗಡೆ ಅವರ ಇತ್ತೀಚಿನ ಮೂರು ಕೃತಿಗಳು ಜನವರಿ 31ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿವೆ. ಈ ಸಂದರ್ಭದಲ್ಲಿ ಪ್ರೊ.ಬಿ ಕೆ. ಚಂದ್ರಶೇಖರ್, ಕೆವಿ ಅಕ್ಷರ ಮತ್ತು ನೇಮಿಚಂದ್ರ ಅವರು ಪ್ರಸಕ್ತ ಸಾಮಾಜಿಕ ಸನ್ನಿವೇಶಗಳನ್ನು ಕುರಿತು ಮಾತನಾಡಲಿದ್ದಾರೆ. ಜತೆಗೆ 'ಭೂಮ್ತಾಯಿ ಬಳಗ'ದ ಸ್ನೇಹಿತರು ಕೆಲವು ಹಾಡುಗಳನ್ನು ಹಾಡಲಿದ್ದಾರೆ. ಹೊಸ ಕೃತಿಗಳಲ್ಲದೆ, ಅಂಕಿತ ಪ್ರಕಾಶನ ವತಿಯಿಂದ ಮರುಮುದ್ರಣವಾಗಿರುವ ಹೆಗಡೆಯವರ ಇನ್ನಿತರ ಮೂರು ಪುಸ್ತಕಗಳೂ ಅದೇ ವೇದಿಕೆಯಲ್ಲಿ ಬಿಡುಗಡೆ ಆಗುತ್ತಲಿವೆ.

ಹೊಸ ಪುಸ್ತಗಳು : ಅಭಿವೃದ್ಧಿಯ ಅಂಧಯುಗ, ಟಿಪ್ಪೂ ಖಡ್ಗದ ನ್ಯಾನೊ ಕಾರ್ಬನ್, ಕೊಪೆನ್ ಹೇಗನ್ ಋತು ಸಂಹಾರ.
ಮರುಮುದ್ರಣಗಳು : ಇರುವುದೊಂದೇ ಭೂಮಿ, ಪ್ರತಿದಿನ ಪರಿಸರ ದಿನ ಮತ್ತು ಸುರಿಹೊಂಡ -ಭರತಖಂಡ.
ದಿನಾಂಕ, ಸಮಯ : ಜ.31, ಭಾನುವಾರ, ಬೆಳಗ್ಗೆ 10ಕ್ಕೆ.
ಸ್ಥಳ : ಇಂಡಿಯನ್ ಇನ್ ಸ್ಟಿಟ್ಯೂಟ್ ಆಪ್ ವರ್ಲ್ಡ್ ಕಲ್ಚರ್, ಬಿಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು.

ಕಾರ್ಯಕ್ರಮದ ವಿಶೇಷತೆಗಳು :

ಅಂದು ಉದಯವಾಗುತ್ತಿರುವ 'ಭೂಮಿ ಬುಕ್ಸ್' ಒಂದು ವಿಶೇಷ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ. ಪರಿಹಾರ ಅನ್ನಿ ಅಥವಾ ಪಶ್ಚಾತ್ತಾಪವೇ ಅನ್ನಿ, ಭೂಮಿ ಬುಕ್ಸ್ ನಿಂದ ಪ್ರಕಟವಾಗುವ ಪ್ರತಿಯೊಂದು ಪುಸ್ತಕದ ಪ್ರತಿಯೊಂದು ಆವೃತ್ತಿಗೂ ಒಂದೊಂದು ಗಿಡವನ್ನು ನೆಟ್ಟು ಅದನ್ನು ಅರ್ಧಕ್ಕೇ ನಿಲ್ಲಿಸದೆ 'ಪೂರ್ತಿ ಬೆಳೆಸುವ' ಹೊಣೆಗಾರಿಕೆಯನ್ನು ಹೊರಲಿದೆ. ಅಷ್ಟೊಂದು ಕಾಗದವನ್ನು ವಿನಿಯೋಗಿಸಿದ್ದಕ್ಕೆ ಈ ಪ್ರಕಾಶನದವರು ಸಮಾಜಕ್ಕೆ ನೀಡುವ ವಚನ ಅದಾಗಿರುತ್ತದೆ.

ಎರಡನೆಯ ವಿಶೇಷ ಏನೆಂದರೆ ಕರ್ನಾಟಕ ಸರಕಾರದ ಇಬ್ಬರು (ನಿವೃತ್ತ) ಅಭಿವೃದ್ಧಿ ಆಯುಕ್ತರು ಅಂದು ಸಸ್ಯಸ್ವೀಕಾರದೊಂದಿಗೆ ಒಂದು ಘೋಷಣೆ ಮಾಡುವ ನಿರೀಕ್ಷೆ ಇದೆ. ನಮ್ಮ ರಾಜ್ಯದ ಬೇರೆ ಯಾವುದೇ ಪುಸ್ತಕ ಪ್ರಕಾಶಕರು ಹೀಗೇ ವಚನಬದ್ಧರಾಗುವುದಾದರೆ, ತಿಪ್ಪಗೊಂಡನಹಳ್ಳಿಯ ಜಲಾಶಯದ ಬಳಿ ಅದಕ್ಕೆಂದೇ ಒಂದು ಪ್ರತ್ಯೇಕ ಸ್ಥಳವನ್ನು ನಿಗದಿಗೊಳಿಸಿ 'ಪುಸ್ತಕವನ' ನಿರ್ಮಾಣ ಮಾಡಲು ಸರಕಾರವೇ ನೇಮಕ ಮಾಡಿದ 'ಸ್ಫೂರ್ತಿವನ' ಸಮಿತಿ ಅದಕ್ಕೆ ಅನುವು ಮಾಡಿಕೊಡುತ್ತದೆ. ಅದು ಈ ಭೂಮಿಯ ಒಂದು ವಿಶಿಷ್ಟ ತಾಣವಾಗಲಿದೆ.

ಮೂರನೆಯದಾಗಿ, 'ಅಭಿವೃದ್ಧಿಯ ಅಂಧಯುಗ' ಕೃತಿಯ ಸಂಪೂರ್ಣ ಚಿತ್ರಗಳನ್ನು ಲೇಖಕರೇ (ಸಿದ್ಧಪಡಿಸಿರುವುದು. ಕೃತಿಯ ಆರಂಭ ಮತ್ತು ಅಂತ್ಯದ ಲೇಖನಗಳು ಕಥಾಚಕ್ರದ ಮಾದರಿಯಲ್ಲಿವೆ. ಮುನ್ನುಡಿಯಲ್ಲಿ ಅದರ ಬಗೆಗೆ ವಿವರಣೆಯಿದೆ.

ಅಂದು ಬಿಡುಗಡೆಯಾಗುವ ಮೂರೂ ಕೃತಿಗಳಿಗೆ ಪ್ರಕಟನೆಯ ಮುಂಚಿನ ಯಾವ ಹಂತದಲ್ಲೂ ಒಂದೇ ಒಂದು ಹಾಳೆ ಕಾಗದವನ್ನು ಬಳಸಿಲ್ಲ. ಕೊಪೆನ್ ಹೇಗನ್ 'ಋತುಸಂಹಾರ' (ಮೂಲ ಕಾಳಿದಾಸನ ಕೃತಿಯಲ್ಲಿ 'ಸಂಹಾರ' ಅಂದರೆ ಕಟ್ಟುವುದು, ಒಂದುಗೂಡಿಸುವುದು ಎಂಬ ಅರ್ಥವಿದ್ದರೆ ಇಲ್ಲಿ ಸಂಹರಿಸುವುದು ಎಂಬ ಅರ್ಥದಲ್ಲಿ ಶಿರೋನಾಮೆ ನೀಡಲಾಗಿದೆ). ಈ ಪುಸ್ತಕ ಅಚ್ಚಿನ ಮನೆಗೆ ಹೋಗುವ ಐದು ದಿನ ಮುಂಚಿನ ಹಠಾತ್ ಬೆಳವಣಿಗೆಯನ್ನೂ ಕೃತಿಯಲ್ಲಿ ಅಳವಡಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X