ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತ್ತೆಯ ಬೆನ್ನೇರಿ ಬಂತು ಪುಸ್ತಕ ವಿಲಾಸ!

By Staff
|
Google Oneindia Kannada News

Yohannes Gebregeorgis
* ಟಿಜಿಎಸ್, ಮೈಸೂರು

ಒಳ್ಳೆಯ ಗ್ರಂಥಾಲಯ ಒಂದು ವಿಶ್ವವಿದ್ಯಾಲಯಕ್ಕೆ ಸಮಾನ ಎನ್ನುತ್ತಾರೆ. ಜ್ಞಾನಪ್ರಸಾರದಲ್ಲಿ ಪುಸ್ತಕಗಳ ಹಾಗೂ ಗ್ರಂಥಾಲಯಗಳ ಪಾತ್ರಕ್ಕೆ ಸಾಟಿಯೇ ಇಲ್ಲ ಎನ್ನಬಹುದೇನೋ.

ಆದರೆ ಓದುವ ಆಸಕ್ತಿ ಇದ್ದರೂ ಪುಸ್ತಕಗಳೇ ಸಿಗದಿರುವುದು ಅನೇಕ ಸ್ಥಳಗಳಲ್ಲಿರುವ ಸಮಸ್ಯೆ. ಊಟತಿಂಡಿಗೇ ಪರದಾಡುವ ಸ್ಥಿತಿ ಇರುವಲ್ಲಿ ಗ್ರಂಥಾಲಯ ಹೇಗೆತಾನೆ ಬಂದೀತು? ಅದೂ ಬರಗಾಲ ಬಡತನ ಹಸಿವುಗಳಿಂದಲೇ ಗುರುತಿಸಿಕೊಳ್ಳುವ ಇಥಿಯೋಪಿಯಾದಂಥ ದೇಶದಲ್ಲಿ?

ಈ ಕಷ್ಟದ ಪ್ರಶ್ನೆಗೆ ಸುಲಭದ ಉತ್ತರ ಅಲ್ಲಿ ಕತ್ತೆಯ ಬೆನ್ನೇರಿ ಬಂದಿದೆ!

ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಇದೀಗ ಕತ್ತೆ ಗಾಡಿಯ ಮೇಲಿನ ಮೊಬೈಲ್ ಲೈಬ್ರರಿ ಓಡಾಡುತ್ತಿದೆಯಂತೆ. ಇಂತಹ ವಿಶಿಷ್ಟ ಪ್ರಯತ್ನಕ್ಕೆ ಕೈಹಾಕಿರುವುದು 'ಇಥಿಯೋಪಿಯನ್ ಬುಕ್ಸ್ ಫಾರ್ ಚಿಲ್ಡ್ರನ್ ಆಂಡ್ ಎಜುಕೇಷನಲ್ ಫೌಂಡೇಷನ್' ಎಂಬ ಸಂಸ್ಥೆ. ಇಥಿಯೋಪಿಯಾದ ಸ್ಥಳೀಯ ಭಾಷೆಗಳಲ್ಲಿ ಮಕ್ಕಳ ಪುಸ್ತಕಗಳನ್ನು ಪ್ರಕಟಿಸಿರುವ ಈ ಸಂಸ್ಥೆ ಇದೀಗ ಕತ್ತೆ ಗಾಡಿಗಳ ಮೂಲಕ ಮಕ್ಕಳಿಗೆ ಪುಸ್ತಕ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಬಿಬಿಸಿ ವರದಿ ಮಾಡಿದೆ.

ಗ್ರಂಥಾಲಯಗಳಿಲ್ಲದ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಈ ಕತ್ತೆಗಾಡಿ ಈಗಾಗಲೇ ಬಹಳ ಜನಪ್ರಿಯತೆ ಗಳಿಸಿದೆ. ಓದುವುದರಲ್ಲಿ ಮಕ್ಕಳ ಆಸಕ್ತಿ ಹಾಗೂ ಅವರ ಕಲಿಕಾ ಸಾಮರ್ಥ್ಯ ಎರಡರಲ್ಲೂ ಪ್ರಗತಿ ಕಂಡುಬಂದಿದೆ ಎಂದು ಶಿಕ್ಷಕರು ಹೇಳುತ್ತಾರೆ. ಅಮೆರಿಕಾದಲ್ಲಿ ನೆಲಸಿರುವ ಇಥಿಯೋಪಿಯನ್ Yohannes Gebregeorgis ಹೆಸರಿನ ವ್ಯಕ್ತಿಯೊಬ್ಬ ಈ ಅಭಿನಂದನೀಯ ಪ್ರಯತ್ನ ಕೈಗೊಂಡಿದ್ದಾನಂತೆ. ಅಂದಹಾಗೆ ಈತ ಸಿಎನ್ಎನ್ ಸಂಸ್ಥೆಯ ಆರಿಸಿದ ಹೀರೋಗಳಲ್ಲಿ ಒಬ್ಬಾತ.

ಇಂಥದ್ದೇ ಇನ್ನೊಂದು ವಿಶಿಷ್ಟ ಪ್ರಯತ್ನ ಕೀನ್ಯಾದ ಈಶಾನ್ಯ ಭಾಗಗಳಲ್ಲಿ ನಡೆದಿದೆ. ಈ ಪ್ರದೇಶದ ಜನರಿಗೆ ಪುಸ್ತಕಗಳನ್ನು ತಲುಪಿಸಲು ಕೀನ್ಯಾ ನ್ಯಾಷನಲ್ ಲೈಬ್ರರಿ ಒಂಟೆಗಳನ್ನು ಬಳಸುತ್ತಿದೆಯಂತೆ. ಒಂಟೆಯೋ ಕತ್ತೆಯೋ, ಓದುವ ಆಸಕ್ತಿಯಿರುವವರಿಗೆ ಪುಸ್ತಕ ತಲುಪುತ್ತಿದೆಯಲ್ಲ! ಅಷ್ಟು ಸಾಕು, ಏನಂತೀರಿ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X