‘ಸುವರ್ಣ ಕರ್ನಾಟಕ’ : ಸರ್ಕಾರದಿಂದ ತ್ರಿಕೋಶಗಳು
ಬೆಂಗಳೂರು : ಸುವರ್ಣ ಕರ್ನಾಟಕ ಮಹೋತ್ಸವದ ಹಿನ್ನೆಲೆಯಲ್ಲಿ ಸರ್ಕಾರ ವಿವಿಧ ಜಿಲ್ಲೆಗಳ ಗೆಜೆಟಿಯರ್‌ಗಳನ್ನು ಹೊರತರಲು ನಿರ್ಧರಿಸಿದೆ.
ಮೈಸೂರು, ಬೆಳಗಾವಿ, ಬಳ್ಳಾರಿ ಮ್ಯಾನ್ಯುಲ್ ಮತ್ತು ಕೊಡಗು ಜಿಲ್ಲೆಗಳ ಗೆಜೆಟಿಯರ್‌ಗಳು ಪುನರ್ ಮುದ್ರಣಗೊಂಡಿವೆ. ಅಲ್ಲದೇ ಕೋಲಾರ ಜಿಲ್ಲಾ ಗೆಜೆಟಿಯರ್‌ನ ಪರಿಷ್ಕೃತ ಕನ್ನಡ ಆವೃತ್ತಿ, ಗುಲ್ಬರ್ಗಾ ಜಿಲ್ಲಾ ಗೆಜೆಟಿಯರ್‌ನ ಪರಿಷ್ಕೃತ ಆಂಗ್ಲ ಆವೃತ್ತಿಗಳನ್ನು ಪ್ರಕಟಿಸಲಾಗಿದೆ.
ಹಂಪಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ನ.1.2006ರಂದು ‘ ಸುವರ್ಣ ಕರ್ನಾಟಕ ಗೆಜೆಟಿಯರ್(1956-2006)’, ‘ಬೃಹತ್ ಕರ್ನಾಟಕ’ ಮತ್ತು ‘ಸುವರ್ಣ ಪಥ’ ಗೆಜೆಟಿಯರ್‌ಗಳನ್ನು ಹೊರತರುವ ಪ್ರಯತ್ನ ನಡೆದಿದೆ.
(ಇನ್ಫೋ ವಾರ್ತೆ)












Click it and Unblock the Notifications