ನಾಣಯ್ಯ ಆತ್ಮಕಥೆ ‘ನೆನಪು ಮಾಸುವ ಮುನ್ನ’ ಬಿಡುಗಡೆ

ಮಡಿಕೇರಿ : ಹಿರಿಯ ಮತ್ತು ಪ್ರಬುದ್ಧ ರಾಜಕಾರಣಿ ಎಂದೇ ಗುರ್ತಿಸಿಕೊಂಡಿರುವ ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರು, ತಮ್ಮ ರಾಜಕಾರಣದ ಏರು-ಇಳಿತಗಳನ್ನು ತಮ್ಮ ಜೀವನ ಚರಿತ್ರೆಯಲ್ಲಿ ದಾಖಲಿಸಿದ್ದಾರೆ.

ನಗರದಲ್ಲಿ ನಡೆದ ಸಮಾರಂಭದಲ್ಲಿ ಎಂ.ಸಿ.ನಾಣಯ್ಯ ಅವರ ಆತ್ಮಕಥೆ ‘ನೆನಪು ಮಾಸುವ ಮುನ್ನ ’ ಪುಸ್ತಕ ಲೋಕಾರ್ಪಣೆಗೊಂಡಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಹಿತಿ ಡಾ.ಸಿದ್ದಲಿಂಗಯ್ಯ ಮಾತನಾಡಿ, ನಾಣಯ್ಯ ಅವರು ಖಾದಿ ತೊಡದೆ ರಾಜಕಾರಣಕ್ಕೆ ಘನತೆ ತಂದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾಣಯ್ಯ ಅವರ ಆತ್ಮಕಥೆಯನ್ನು ಪತ್ರಕರ್ತ ಭಾರಧ್ವಜ ಸಂಗ್ರಹಿಸಿದ್ದು, ಪ್ರಗತಿ ಪ್ರಕಾಶನ ಟ್ರಸ್ಟ್‌ ಪುಸ್ತಕವನ್ನು ಪ್ರಕಟಿಸಿದೆ. ಪ್ರತಿ ಪಕ್ಷದ ಮುಖಂಡ ಡಿ.ಎಚ್‌.ಶಂಕರಮೂರ್ತಿ ಸೇರಿದಂತೆ ವಿವಿಧ ಮುಖಂಡರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+