ಉದಯೋನ್ಮುಖ ಕತೆಗಾರ ಅಲಕ ತೀರ್ಥಹಳ್ಳಿಗೆ ‘ಛಂದ’ ಪ್ರಶಸ್ತಿ

ಬೆಂಗಳೂರು : ಪ್ರಸಕ್ತ ಸಾಲಿನ ಛಂದ ಪುಸ್ತಕ ಸಂಸ್ಥೆಯ ಬಹುಮಾನ ಅಲಕ ತೀರ್ಥಹಳ್ಳಿ ಅವರಿಗೆ ಸಂದಿದೆ.

ಹೊಸ ಕತೆಗಾರರಿಗೆ ಛಂದ ಪ್ರತಿವರ್ಷ ಬಹುಮಾನದ ಮೂಲಕ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಈ ಸಾಲಿನಲ್ಲಿ ಅಲಕ ತೀರ್ಥಹಳ್ಳಿ ಅವರ ಹಸ್ತಪ್ರತಿ ಪ್ರಶಸ್ತಿಗೆ ಪಾತ್ರವಾಗಿದೆ. ಸಂಸ್ಥೆಯೇ ಪುಸ್ತಕವನ್ನು ಪ್ರಕಟಿಸಿ ಎರಡು ಸಾವಿರ ರೂ.ಗಳ ಬಹುಮಾನ ಮತ್ತು ಪ್ರಶಸ್ತಿಯನ್ನು ನೀಡಲಿದೆ.

ಜನವರಿ 29ರಂದು ಬೆಂಗಳೂರಿನಲ್ಲಿ ಬಹುಮಾನ ಪ್ರದಾನ ಸಮಾರಂಭ ನಡೆಯಲಿದೆ ಎಂದು ಛಂದ ಪುಸ್ತಕದ ವಸುಧೇಂದ್ರ ದಟ್ಸ್‌ಕನ್ನಡಕ್ಕೆ ತಿಳಿಸಿದ್ದಾರೆ.

ಈ ಸ್ಪರ್ಧೆಯಲ್ಲಿ 50 ಕತೆಗಾರರು ಭಾಗವಹಿಸಿದ್ದರು. ತೀರ್ಪುಗಾರರಾಗಿ ಕೇಶವ ಮಳಗಿ ಮತ್ತು ಸುಮಂಗಲಾ ಅವರು ಕಾರ್ಯ ನಿರ್ವಹಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+