ಆದಿಕವಿ ಪಂಪನ ಸಂದೇಶ ಇಂದಿಗೂ ಪ್ರಸ್ತುತ -ಜಿಎಸ್ಸೆಸ್‌

ಬೆಂಗಳೂರು : ಪಂಪ ಮಹಾಕವಿಯ ಕಾವ್ಯವನ್ನು ಕುರಿತು ಉಪನ್ಯಾಸ ನೀಡುತ್ತಿದ್ದರೆ ನನಗೆ ಮತ್ತೊಂದು ಪಿ ಎಚ್‌ ಡಿ ಪಡೆದಂತಹ ಸಂಭ್ರಮವಾಗುತ್ತದೆ ಎಂದು ಹಿರಿಯ ಕವಿ, ವಿಮರ್ಶಕ ಡಾ.ಜಿ.ಎಸ್‌.ಶಿವರುದ್ರಪ್ಪ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ನಗರದಲ್ಲಿ ಆಯೋಜಿಸಿದ್ದ ರಂಗಕರ್ಮಿ ಪ್ರೊ.ಸಿ.ಜಿ.ಕೆ ಸಂಪಾದಿಸಿರುವ‘ಪಂಪ : ರಂಗರೂಪಗಳು’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನನಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿ ಅಭ್ಯಾಸವಿತ್ತು. ಆದರೆ ನನ್ನ ಅದೃಷ್ಟವೇನೋ ಹಳ್ಳಿ ಜನರಿಗೆ ಪಂಪನ ಕುರಿತು ಉಪನ್ಯಾಸ ನೀಡಿ ಸೈ ಎನಿಸಿಕೊಂಡಾಗಲೇ ನನಗೆ ಇನ್ನೊಂದು ಪಿ ಎಚ್‌ ಡಿ ಪಡೆದಷ್ಟು ಸಂಭ್ರಮವಾಗಿತ್ತು ಎಂದರು.

ವರ್ತಮಾನದಲ್ಲಿ ಪಂಪನ ಪುರಾತನ ಕೃತಿ ಓದುವುದು ಅತ್ಯಂತ ಅವಶ್ಯಕ. ಪಂಪನ ಕಾವ್ಯ ಪುರಾತನವಾಗಿದ್ದರೂ ಆತನ ಸಂದೇಶ ಈಗಿನ ಪೀಳಿಗೆಗೂ ಉಪಯುಕ್ತವಾದುದು. ಈ ರಂಗರೂಪದಲ್ಲಿ ಲಕ್ಷ್ಮೀಪತಿ ಕೋಲಾರ ಅವರು ಬರೆದಿರುವ ಪಂಪನಿಗೆ ಬಿದ್ದ ಕನಸು ಒಂದು ಅದ್ಭುತ ಸೃಷ್ಟಿ ಎಂದು ಶಿವರುದ್ರಪ್ರ ಹರ್ಷ ವ್ಯಕ್ತಪಡಿಸಿದರು.

ಬೆಂಗಳೂರು ವಿ.ವಿ. ಕುಲಪತಿ ಡಾ.ಎಂ.ಎಸ್‌.ತಿಮ್ಮಪ್ಪ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕ ಮುದ್ದುಮೋಹನ್‌ ಸಮಾರಂಭದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+